ಮಂಡ್ಯ: ತಮಿಳುನಾಡಿಗೆ (Tamil Nadu) ನೀರು ಹರಿಸಬೇಕೆಂಬ ಸುಪ್ರೀಂ ಕೋರ್ಟ್ (Supreme Court) ಆದೇಶದ ಬೆನ್ನಲ್ಲೇ ಮಂಡ್ಯ (Mandya) ಜಿಲ್ಲೆಯಲ್ಲಿ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. ಈ ನಡುವೆಯೂ ತಮಿಳುನಾಡಿಗೆ ಕಾವೇರಿ ಹರಿದಿದ್ದು, ಶುಕ್ರವಾರವೂ 5 ಸಾವಿರ ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ.
ತಮಿಳುನಾಡಿಗೆ ಕೆಆರ್‌ಎಸ್ ಜಲಾಶಯದಿಂದ (KRS Reservoir) 3 ಸಾವಿರ ಕ್ಯೂಸೆಕ್ ನೀರುಬಿಡುಗಡೆ ಮಾಡಲಾಗಿದೆ. ಸೀಪೇಜ್ ಹಾಗೂ ನಾಲೆಗೆ ಹರಿಸಿರುವ ನೀರಿಲ್ಲೇ 3 ಸಾವಿರ ತಮಿಳುನಾಡಿಗೆ ಹರಿಸಲಾಗಿದ್ದು, ಉಳಿದ 2 ಸಾವಿರ ಕ್ಯೂಸೆಕ್ ನೀರನ್ನ ನೀರು ಕಬಿನಿಯಿಂದ (Kabini Reservoir) ಹರಿಸಲಾಗಿದೆ. ಒಟ್ಟಾರೆಯಾಗಿ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಮತ್ತು ನಾಲೆಗಳಿಗೆ ಸೇರಿ 5,734 ಕ್ಯೂಸೆಕ್ ನೀರು ಬಿಡಲಾಗಿದೆ.
ಕೆಆರ್‌ಎಸ್ ಜಲಾಶಯದ ಒಳ ಹರಿವು 5,845 ಕ್ಯೂಸೆಕ್ ಇದ್ದು, ಡ್ಯಾಂನ ಇಂದಿನ ನೀರಿನ ಮಟ್ಟ 97.02 ಅಡಿಗೆ ಕುಸಿದಿದೆ. ಡ್ಯಾಂನ ಇಂದಿನ ಸಾಂದ್ರತೆ 20.563 ಟಿಎಂಸಿ ಇದೆ. ಇದನ್ನೂ ಓದಿ: ಕಾವೇರಿ ಹೋರಾಟಕ್ಕೆ ನೇರವಾಗಿ ಇಳಿದ ನಟ ಅಭಿಷೇಕ್ ಅಂಬರೀಶ್
ಇನ್ನೂ ಮಂಡ್ಯದಲ್ಲಿ ಅನ್ನದಾತರ ಆಕ್ರೋಶ ಭುಗಿಲೆದ್ದಿದ್ದು, ಶುಕ್ರವಾರವೂ (ಇಂದು) ಜಿಲ್ಲೆಯ ಹಲವೆಡೆ ಸುಪ್ರೀಂ ತೀರ್ಪಿನ ವಿರುದ್ಧ ಪ್ರತಿಭಟನೆ ಕೈಗೊಳ್ಳಲಾಗಿದೆ. ರೈತರ ಹೋರಾಟಕ್ಕೆ ಇಂದು ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಸಾಥ್ ನೀಡಿದ್ದು, ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಶಿವಶಕ್ತಿ ಬಿಂದುವಿನಲ್ಲಿ ಲ್ಯಾಂಡರ್, ರೋವರ್ – ವಿಕ್ರಮ್, ಪ್ರಗ್ಯಾನ್‌ಗೆ ಸಿಗುತ್ತಾ ಮರುಜೀವ?
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]