– ತಿಂಗಳಿಗೆ ಸಂಬಳ ನೀಡಲು 1 ಕೋಟಿ ಬೇಕಂತೆ
ಬೆಂಗಳೂರು: ಟೈಮ್ ಪಾಸ್ ಮಾಡೋ ಹಲವು ನೌಕರರು ವಿದಾನಸೌಧದಲ್ಲಿ ಇದ್ದಾರೆ. ಅವರನ್ನು ತೆಗೆದು ಹಾಕಿ ಕಷ್ಟದಲ್ಲಿದ್ದವರಿಗೆ ಕೆಲಸ ನೀಡಿ ಅಂತ ಅಧಿಕಾರಿಗಳಿಗೆ ತಾಕೀತು ಮಾಡಿದ್ದ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರ ಕಚೇರಿಯಲ್ಲಿಯೇ ಇದೀಗ ಅವರ ಕಚೇರಿಯಲ್ಲೇ 500ಕ್ಕೂ ಹೆಚ್ಚು ಮಂದಿ ನೌಕರರಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಇಷ್ಟು ಮಾತ್ರವಲ್ಲದೇ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು ಅಂತಾನೂ ಹೇಳಿದ್ದರು. ಆದ್ರೆ ಇದೀಗ ಈ ನೌಕರರ ಸಂಬಳಕ್ಕಾಗಿ ತಿಂಗಳಿಗೆ 1 ಕೋಟಿ ಬೇಕಂತೆ. ಸಿಎಂ ದುಂದು ವೆಚ್ಚಕ್ಕೆ ಕಡಿವಾಣ ಹಾಕೋ ಬದಲು ತಮ್ಮ ಕಚೇರಿಯಲ್ಲಿ ದುಂದು ವೆಚ್ಚ ಮಾಡುತ್ತಿರೋದು ವಿಪರ್ಯಾಸವಾಗಿದೆ. ಒಟ್ಟಿನಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ನೌಕರರ ಹೊಂದಿರೋ ಖ್ಯಾತಿಗೆ ಸಿಎಂ ಕುಮಾರಸ್ವಾಮಿ ಸಾಹೇಬ್ರು ಭಾಗಿಯಾಗಿದ್ದಾರೆ.
Advertisement
Advertisement
ಸಿಎಂ ಕಚೇರಿಯಲ್ಲಿದ್ದಾರೆ 500 ಸಿಬ್ಬಂದಿ..!
* ಅಪರ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ 6 ಜನ ಗುತ್ತಿಗೆ ಸಿಬ್ಬಂದಿ
* ಜಂಟಿ ಕಾರ್ಯದರ್ಶಿ ಕಚೇರಿಯಲ್ಲಿ 22 ಜನ ಸಿಬ್ಬಂದಿ
* ಆಡಳಿತ ಶಾಖೆಯಲ್ಲಿ 14 ಜನ ಗುತ್ತಿಗೆ ನೌಕರರು
* ರವಾನೆ ಶಾಖೆಯಲ್ಲಿ 13 ಜನ ಗುತ್ತಿಗೆ ನೌಕರರು
* ಮಾಧ್ಯಮ ಕಾರ್ಯದರ್ಶಿ ಕಚೇರಿಯಲ್ಲಿ 11 ಜನ ಗುತ್ತಿಗೆ ನೌಕರರು
* ವಿಶೇಷ ಕರ್ತವ್ಯ ಅಧಿಕಾರಿ ಕಚೇರಿಯಲ್ಲಿ 10 ಜನ ಗುತ್ತಿಗೆ ನೌಕರರು
* ಸಹಾಯಕರಾಗಿ 90ಕ್ಕೂ ಹೆಚ್ಚು ಜನ ಗುತ್ತಿಗೆ ಕೆಲಸಗಾರರು ಇದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv