ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಕಂಡುಬಂದಿರುವ ನೋಟುಗಳ ಕೊರತೆ ನೀಗಿಸಲು ಕೇಂದ್ರ ಸರಕಾರ ಕೆಲವು ಉಪಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.
ದೇಶದಲ್ಲಿ ನಗದು ಬಿಕ್ಕಟ್ಟು ಸೃಷ್ಟಿಯಾಗಿರುವ ಕಾರಣ 500 ರೂ ನೋಟುಗಳ ದಿನದ ಮುದ್ರಣದ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಆರ್ಥಿಕ ವ್ಯವಹಾರ ಇಲಾಖೆ ಕಾರ್ಯದರ್ಶಿ ಎಸ್.ಸಿ. ಗಾರ್ಗ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ದೇಶಾದ್ಯಂತ ಎಟಿಎಂನಲ್ಲಿ ನೋ ಕ್ಯಾಶ್: ದಿಢೀರ್ ನೋಟುಗಳ ಬೇಡಿಕೆ ಹೆಚ್ಚಾಯ್ತು!
Advertisement
ಸದ್ಯ ದಿನಕ್ಕೆ 500 ನೋಟುಗಳನ್ನು 500 ಕೋಟಿ ರುಪಾಯಿಯಷ್ಟು ಮುದ್ರಣ ಮಾಡಲಾಗುತ್ತಿದೆ. ಇದನ್ನು ಐದು ಪಟ್ಟು ಹೆಚ್ಚಳ ಮಾಡಲಾಗುವುದು. ಹೆಚ್ಚಳದಿಂದಾಗಿ ದಿನಕ್ಕೆ 2,500 ಕೋಟಿ ರುಪಾಯಿಷ್ಟು ನೋಟುಗಳು ಮುದ್ರಣವಾಗಲಿವೆ. ಈ ಮೂಲಕ ತಿಂಗಳಿಗೆ 70 ಸಾವಿರದಿಂದ 75 ಸಾವಿರ ಕೋಟಿ ರುಪಾಯಿ ನೋಟುಗಳು ಚಲಾವಣೆಗೆ ಸಿದ್ಧವಾಗಲಿವೆ ಎಂದು ಗಾರ್ಗ್ ಮಾಹಿತಿ ಕೊಟ್ಟಿದ್ದಾರೆ.
Advertisement
ದೇಶದಲ್ಲಿನ ನಗದು ಚಲಾವಣೆಯ ಸ್ಥಿತಿಯನ್ನು ಗಮನಿಸಿದ್ದೇನೆ. ಸಾಕಷ್ಟು ನಗದು ಹಣ ಚಲಾವಣೆಯಲ್ಲಿ ಇದೆ ಹಾಗೂ ಬ್ಯಾಂಕ್ ಗಳಲ್ಲೂ ಲಭ್ಯವಿದೆ. ಕೆಲವು ಪ್ರದೇಶಗಳಲ್ಲಿ ಬೇಡಿಕೆ ದಿಢೀರ್ ಏರಿಕೆಯಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಮಸ್ಯೆ ಉಂಟಾಗಿದೆ. ತ್ವರಿತವಾಗಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ದಿಢೀರ್ ನೋಟಿನ ಬೇಡಿಕೆ ಹೆಚ್ಚಾಗಿದ್ದು ಯಾಕೆ?