ಚೆನ್ನೈ: ತಮಿಳುನಾಡಿನ (Tamil Nadu) ದಕ್ಷಿಣ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ (Rain) ಸುಮಾರು 500ಕ್ಕೂ ಹೆಚ್ಚು ಪ್ರಯಾಣಿಕರು ತೂತುಕುಡಿ ಜಿಲ್ಲೆಯ ಶ್ರೀವೈಕುಂಟಂನ ರೈಲು ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೇ ಮಳೆಯಿಂದ ತೂತುಕುಡಿಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ.
ರೈಲು (Train) ನಿಲ್ದಾಣದ ಎಲ್ಲಾ ಕಡೆಗಳಲ್ಲೂ ಜಲಾವೃತವಾಗಿದ್ದು, ಭಾರೀ ಮಳೆಯ ಪರಿಣಾಮ ರೈಲು ನಿಲ್ದಾಣದ ಬಳಿಯ ಹಳಿಗಳ ಬಳಿ ಮಣ್ಣಿನ ಸವೆತ ಉಂಟಾಗಿದೆ. ಇದರಿಂದ ಸಿಮೆಂಟ್ ಚಪ್ಪಡಿಗಳು ಹಾನಿಗೊಳಗಾಗಿವೆ. ಇದರಿಂದಾಗಿ ತಿರುಚೆಂದೂರಿನಿಂದ ಚೆನ್ನೈಗೆ ಹೋಗುತ್ತಿದ್ದ ರೈಲನ್ನು ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: Security breach in Lok Sabha: ಮನೋರಂಜನ್ ನಿವಾಸದಲ್ಲಿ ದೆಹಲಿ ಪೊಲೀಸರು ಶೋಧ
Advertisement
Advertisement
ನಿಲ್ದಾಣದ ಮಾರ್ಗ ಸಂಪರ್ಕ ಕಡಿತಗೊಂಡಿರುವುದರಿಂದ ರಕ್ಷಣಾ ಕಾರ್ಯ ಸಹ ವಿಳಂಬವಾಗುತ್ತಿದೆ. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ನಿಲ್ದಾಣವನ್ನು ತಲುಪಲು ಪ್ರಯತ್ನಿಸುತ್ತಿದೆ. ಆಹಾರವನ್ನು ಹೆಲಿಕಾಪ್ಟರ್ ಮೂಲಕ ತಲುಪಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಕೆಲವೆಡೆ ಮಳೆ ಬಿಡುವು ನೀಡಿದ್ದರೂ, ಅಣೆಕಟ್ಟುಗಳಿಂದ ಹೆಚ್ಚುವರಿ ನೀರು ಬಿಡುಗಡೆ ಮುಂದುವರಿದಿದೆ. ಇದರಿಂದ ಕೆಲವೆಡೆ ನೀರು ನಿಂತಿದೆ. ಮಳೆಯಿಂದ ಕನ್ಯಾಕುಮಾರಿ, ತೂತುಕುಡಿ, ತೆಂಕಶಿ ಮತ್ತು ತಿರುನಲ್ವೇಲಿ ಜಿಲ್ಲೆಗಳು ಅತೀ ಹೆಚ್ಚು ಹಾನಿಗೊಳಗಾಗಿವೆ. ಇದನ್ನೂ ಓದಿ: ಕೋವಿಡ್ ಉಲ್ಬಣವಾಗುತ್ತಿದೆ ಎಂದು ಆತಂಕಗೊಳ್ಳುವುದು ಬೇಡ: ಡಿ.ಕೆ ಶಿವಕುಮಾರ್