ನವದೆಹಲಿ: ಜಮ್ಮು ಪ್ರದೇಶದಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಮತ್ತು ದಾಳಿ ಹೆಚ್ಚುತ್ತಿದೆ. ಪಾಕಿಸ್ತಾನಿ ಉಗ್ರರನ್ನು ಬಗ್ಗುಬಡಿಯಲು ಭಾರತೀಯ ಸೇನೆಯ 500 ಕ್ಕೂ ಹೆಚ್ಚು ಪ್ಯಾರಾ ಕಮಾಂಡೋಗಳು ಬೀಡುಬಿಟ್ಟಿದ್ದಾರೆ.
ಭಯೋತ್ಪಾದನೆ ಪುನರುಜ್ಜೀವನಗೊಳಿಸಲು ಪಾಕಿಸ್ತಾನದ 50 ರಿಂದ 55 ಭಯೋತ್ಪಾದಕರು ಜಮ್ಮು ಪ್ರದೇಶಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಅವರನ್ನು ಬೇಟೆಯಾಡಲು ಭಾರತೀಯ ಸೇನೆಯು ಸುಮಾರು 500 ಪ್ಯಾರಾ ವಿಶೇಷ ಪಡೆಗಳ ಕಮಾಂಡೋಗಳನ್ನು ಈ ಪ್ರದೇಶದಲ್ಲಿ ನಿಯೋಜಿಸಿದೆ. ಇದನ್ನೂ ಓದಿ: ಎಕ್ಸ್ ಖಾತೆಯಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿದ ವಿಶ್ವನಾಯಕ ಮೋದಿಗೆ ಎಲಾನ್ ಮಸ್ಕ್ ಅಭಿನಂದನೆ
ಪಾಕಿಸ್ತಾನದ ಪ್ರಾಕ್ಸಿ ಆಕ್ರಮಣದ ವಿರುದ್ಧ ಸೇನೆಯು ಈಗಾಗಲೇ ಸುಮಾರು 3,500-4000 ಸಿಬ್ಬಂದಿಯ ಒಂದು ಬ್ರಿಗೇಡ್ ಬಲವನ್ನು ಒಳಗೊಂಡಂತೆ ಪಡೆಗಳನ್ನು ಈ ಪ್ರದೇಶಕ್ಕೆ ಕರೆತಂದಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಂವಹನ ಸಾಧನಗಳನ್ನು ಹೊಂದಿರುವ ಭಯೋತ್ಪಾದಕರ ಪತ್ತೆ ಮಾಡಿ ಬೇಟೆಯಾಡಲು ಭೂಸೇನೆಯು ಕಾರ್ಯತಂತ್ರ ರೂಪಿಸಿದೆ. ಉಗ್ರರ ಉಪಟಳದ ಪ್ರದೇಶದಲ್ಲಿ ಈಗಾಗಲೇ ಇರುವ ಭಯೋತ್ಪಾದನಾ ನಿಗ್ರಹ ಪಡೆಗಳ ಸಹಾಯವನ್ನೂ ಸೇನೆ ಪಡೆದುಕೊಂಡಿದೆ. ಇದನ್ನೂ ಓದಿ: ಮೀಸಲಾತಿ ವಿರೋಧಿಸಿ ಪ್ರತಿಭಟನೆ; ಘರ್ಷಣೆಯಲ್ಲಿ 105 ಮಂದಿ ಸಾವು – 300ಕ್ಕೂ ಹೆಚ್ಚು ಭಾರತೀಯರು ತವರಿಗೆ!
ರೋಮಿಯೋ ಮತ್ತು ಡೆಲ್ಟಾ ಪಡೆಗಳು ಸೇರಿದಂತೆ ರಾಷ್ಟ್ರೀಯ ರೈಫಲ್ಸ್‌ನ ಎರಡು ಪಡೆಗಳು ಹಾಗೂ ಪ್ರದೇಶದಲ್ಲಿ ಇತರ ನಿಯಮಿತ ಪದಾತಿ ದಳಗಳ ಉಪಸ್ಥಿತಿ ಇದೆ.