ಅಯೋಧ್ಯೆ: ಜನವರಿ 22 ರಂದು ನಡೆಯಲಿರುವ ರಾಮ ಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಮುನ್ನ ಗುಜರಾತ್‌ನಿಂದ 500 ಕೆಜಿ ತೂಕದ ಬೃಹತ್ ನಗಾರಿಯು (Nagada) ವಿಶೇಷ ರಥದಲ್ಲಿ ಆಗಮಿಸಿದೆ.
Advertisement
ಗುರುವಾರ ಅಯೋಧ್ಯೆಗೆ ಆಗಮಿಸಿರುವ ಈ ನಗಾರಿಯನ್ನು ರಾಮಮಂದಿರ ಆವರಣದಲ್ಲಿ ಅಳವಡಿಸಲಾಗುವುದು. ಗುಜರಾತಿನ ಕರ್ಣಾವತಿಯ ದರ್ಯಾಪುರ ವಿಸ್ತರಣೆಯಲ್ಲಿರುವ ದಬ್ಗರ್ ಸಮುದಾಯದವರು ಇದನ್ನು ರೆಡಿ ಮಾಡಿದ್ದಾರೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
Advertisement
Advertisement
ಸೂರ್ಯನ ಬೆಳಕು ಮತ್ತು ಮಳೆಗೆ ಹಾನಿಯಾಗದಂತೆ ಅದನ್ನು ತಡೆದುಕೊಳ್ಳಲು ಸಿದ್ಧಪಡಿಸಲಾಗಿದೆ. ಇದನ್ನು ಕಬ್ಬಿಣ ಮತ್ತು ತಾಮ್ರದ ಫಲಕಗಳನ್ನು ಬಳಸಿ ಮಾಡಲಾಗಿದ್ದು, ಇದರ ಮೇಲೆ ಚಿನ್ನ ಮತ್ತು ಬೆಳ್ಳಿಯನ್ನು ಲೇಪಿಸಲಾಗಿದೆ. ಇದರ ಸೌಂಡ್ ಕಿಲೋಮೀಟರ್ ದೂರದವರೆಗೂ ಕೇಳಿಸುತ್ತದೆ.
Advertisement
ಗುಜರಾತ್ ವಿಶ್ವ ಹಿಂದೂ ಪರಿಷತ್ ನಾಯಕರೊಬ್ಬರು ದೇವಸ್ಥಾನದ ಟ್ರಸ್ಟ್‌ಗೆ ಪತ್ರವನ್ನು ಕಳುಹಿಸಿದ ನಂತರ ಮುಂಬರುವ ಆಚರಣೆಗಳ ಭಾಗವಾಗಿ ಇದನ್ನು ಸ್ವೀಕರಿಸಲು ವಿನಂತಿಸಲಾಯಿತು. ಇದನ್ನೂ ಓದಿ: ಸಿದ್ಧವಾಗಿದೆ 3 ಲಕ್ಷ ರಾಮ ಧ್ವಜ – ದಕ್ಷಿಣದ 4 ರಾಜ್ಯಗಳಿಂದ ಆರ್ಡರ್
ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ನಾಯಕರ ಸಮ್ಮುಖದಲ್ಲಿ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ . ಸಮಾರಂಭಕ್ಕೆ ದೇಶಾದ್ಯಂತದ ಸಾವಿರಾರು ಮಂದಿಯನ್ನು ಆಹ್ವಾನಿಸಲಾಗಿದೆ. ಈ ಆಹ್ವಾನಿತರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಿದ ಕಾರ್ಮಿಕರ ಕುಟುಂಬಗಳೂ ಸೇರಿವೆ ಎನ್ನಲಾಗಿದೆ.
ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟಿಗರು, ಕೈಗಾರಿಕೋದ್ಯಮಿಗಳು ಸೇರಿದಂತೆ ಸುಮಾರು 7,000 ಕ್ಕೂ ಹೆಚ್ಚು ಜನರು ದೇವಸ್ಥಾನದ ಟ್ರಸ್ಟ್, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.