ರಾಯಚೂರು: ನಗರದಲ್ಲಿ ಸಿಎಚ್ ಪೌಡರ್ (CH Powder) ಕಲಬೆರಕೆ ಸೇಂದಿ (Listen) ತಯಾರಿಕೆ ಹಾಗೂ ಮಾರಾಟ ದಂಧೆ ಅವ್ಯಾಹತವಾಗಿ ನಡೆದಿದ್ದು, ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮಾಡಿದ್ದಾರೆ.
ನಗರದ ಗದ್ವಾಲ್ ರಸ್ತೆಯ ಕೊರವರ ಓಣಿಯಲ್ಲಿ ಎರಡು ಕಡೆ ದಾಳಿ ನಡೆಸಿದ ಅಧಿಕಾರಿಗಳು ಅಪಾರ ಪ್ರಮಾಣದ ಸಿಎಚ್ ಪೌಡರ್ ಹಾಗೂ ಸೇಂದಿ ಜಪ್ತಿ ಮಾಡಿದ್ದಾರೆ. ಸಿಎಚ್ ಪೌಡರ್ ಕಲಬೆರಕೆ ಸೇಂದಿ ಮಾರಾಟ ಮಾಡುವ ಮನೆಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಂಧೆಕೋರರ ಮನೆಗಳಲ್ಲಿ ತೀವ್ರ ಶೋಧ ನಡೆಸಿದ್ದಾರೆ. ದೇವರ ಗಡಿಗೆಗಳಲ್ಲಿ, ಅಲ್ಮೆರಾ ಸೇರಿ ಮನೆಗಳಲ್ಲಿ ಹಲವೆಡೆ ಸಂಗ್ರಹಿಸಿಟ್ಟಿದ್ದ ಸಿಎಚ್ ಪೌಡರ್ ಜಪ್ತಿ ಮಾಡಿದ್ದಾರೆ. ಹೊಸದಾಗಿ ರೆಡಿ ಮಿಕ್ಸ್ ಪೌಡರ್ ಪ್ಯಾಕೆಟ್‌ಗಳನ್ನ ತಯಾರಿಸುತ್ತಿರುವ ದಂಧೆಕೋರರ ಅಕ್ರಮ ಮಾರಾಟಕ್ಕೆ ಹೊಸ ದಾರಿ ಕಂಡುಕೊಂಡಿದ್ದಾರೆ. ಇದನ್ನೂ ಓದಿ: ಖ್ಯಾತ ಗಾಯಕಿ, ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ನಿಧನ
Advertisement
ದಾಳಿ ವೇಳೆ 450 ಲೀ. ಕಲಬೆರಕೆ ಸೇಂದಿ, 500 ಗ್ರಾಂ ಸಿಎಚ್ ಪೌಡರ್, ಕಲಬೆರಕೆ ಸೇಂದಿ ತಯಾರಿಕೆಗೆ ಬಳಸುವ ರಾಸಾಯನಿಕಗಳು ಹಾಗೂ ಅಕ್ರಮ ಮದ್ಯದ ಪೌಚ್‌ಗಳು ಸೇರಿ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಜಪ್ತಿಯಾಗಿವೆ. ಇದನ್ನೂ ಓದಿ: Hassan| ಶಾಲೆಗೆಂದು ಮೀಸಲಿಟ್ಟಿದ್ದ ಜಾಗ ವಕ್ಫ್ ಹೆಸರಿಗೆ – ಹೆಚ್‌ಕೆ ಸುರೇಶ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗೆ ಕರೆ
Advertisement
Advertisement
ಗಜ್ಜಿ ವಿರೇಶ್, ಉರುಕುಂದಮ್ಮ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಈಗಾಗಲೇ ಸುಮಾರು 20 ಪ್ರಕರಣ ಎದುರಿಸುತ್ತಿರುವ ಆರೋಪಿ ಗಜ್ಜಿ ವಿರೇಶ್ ಒಂದು ಬಾರಿ ಗಡಿಪಾರಾಗಿದ್ದ ಆದರೂ ದಂಧೆ ಬಿಟ್ಟಿಲ್ಲ. ಈಗ ಗಜ್ಜಿ ವಿರೇಶ್ ಹಾಗೂ ಆತನ ಪತ್ನಿ ವಿರುದ್ಧ ಅಬಕಾರಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಲಾರಿ, ಕಾರು ನಡುವೆ ಅಪಘಾತ- ದಂಪತಿ ಸ್ಥಳದಲ್ಲೇ ಸಾವು
Advertisement