ಅಶ್ಲೀಲ ಪದ ಬಳಸುತ್ತಿದ್ದ, ಖಾಸಗಿ ಅಂಗ ಮುಟ್ಟುತ್ತಿದ್ದ – ಪ್ರಾಧ್ಯಾಪಕನ ವಿರುದ್ಧ 500 ವಿದ್ಯಾರ್ಥಿನಿಯರಿಂದ ಮೋದಿ ಕಚೇರಿಗೆ ಪತ್ರ

Public TV
2 Min Read
Chaudhary Devi Lal University

– ಲೈಂಗಿಕ ಕಿರುಕುಳ ಆರೋಪ, ಕ್ರಮಕ್ಕೆ ಆಗ್ರಹ

ಚಂಡೀಗಢ: ಹರಿಯಾಣದ ಚೌಧರಿ ದೇವಿ ಲಾಲ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕನೊಬ್ಬ ಲೈಂಗಿಕ ಕಿರಕುಳ ನೀಡುತ್ತಿದ್ದು, ಅಮಾನತುಗೊಳಿಸುವಂತೆ ಆಗ್ರಹಿಸಿ ಸುಮಾರು 500 ಮಹಿಳಾ ವಿದ್ಯಾರ್ಥಿನಿಯರು (Girls Students) ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ (Narendra Modi’s office) ಹಾಗೂ ಮುಖ್ಯಮಂತ್ರಿ ಎಂ.ಎಲ್‌ ಖಟ್ಟರ್‌ಗೆ ಪತ್ರ ಬರೆದಿದ್ದಾರೆ.

ನಿವೃತ್ತ ಹೈಕೋರ್ಟ್ (Highcourt) ನ್ಯಾಯಾಧೀಶರ ನೇತೃತ್ವದಲ್ಲಿ ಪತ್ರದ ಪ್ರತಿಗಳನ್ನು ಉಪಕುಲಪತಿ ಡಾ.ಅಜ್ಮೀರ್ ಸಿಂಗ್ ಮಲಿಕ್, ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹಾಗೂ ಹಿರಿಯ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಆಯ್ದ ಮಾಧ್ಯಮ ಸಂಸ್ಥೆಗಳಿಗೂ ಕಳುಹಿಸಲಾಗಿದೆ. ಇದನ್ನೂ ಓದಿ: ಮಂತ್ರಾಕ್ಷತೆಯಲ್ಲಿ ಅನ್ನಭಾಗ್ಯದ ಅಕ್ಕಿ ಹುಡುಕಿದ್ದ ಡಿಕೆಶಿಗೆ ದೋಸ್ತಿಗಳು ತಿರುಗೇಟು

STUDENTS 1 1
ಸಾಂದರ್ಭಿಕ ಚಿತ್ರ

ಪತ್ರದಲ್ಲಿ ಏನಿದೆ?
ವಿದ್ಯಾರ್ಥಿನಿಯರು ಪತ್ರದಲ್ಲಿ ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಪ್ರಾಧ್ಯಾಪಕ ಮಹಿಳಾ ವಿದ್ಯಾರ್ಥಿನಿಯರೊಂದಿಗೆ ಅಶ್ಲೀಲ ಪದಗಳನ್ನ ಬಳಸಿ ಮಾತನಾಡುತ್ತಿದ್ದ. ಸ್ನಾನದ ಗೃಹಕ್ಕೆ ಕರೆದುಕೊಂಡು ಹೋಗಿ ಖಾಸಗಿ ಭಾಗಗಳನ್ನ ಮುಟ್ಟುತ್ತಿದ್ದ, ಜೊತೆಗೆ ತನ್ನೊಂದಿಗೆ ಲೈಂಗಿಕ ಚಟುವಟಿಕೆ ನಡೆಸಲು ಒತ್ತಾಯಿಸುತ್ತಿದ್ದ. ಅದನ್ನು ವಿರೋಧಿಸಿದರೆ, ಮುಂದೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಬೆದರಿಕೆ ಹಾಕುತ್ತಿದ್ದ. ಹಲವು ತಿಂಗಳಿನಿಂದ ಪ್ರಾಧ್ಯಾಪಕ ಈ ಕೆಲಸ ಮಾಡಿಕೊಂಡು ಬಂದಿದ್ದಾನೆ. ಮೇಲಾಧಿಕಾರಿಗಳಿಗೆ ಇದರ ಸುಳಿವು ಬಿಟ್ಟುಕೊಡದೇ ನಮ್ಮ ಬಗ್ಗೆಯೇ ತಪ್ಪು ಅಭಿಪ್ರಾಯ ಬರುವಂತೆ ಹೇಳುತ್ತಿದ್ದ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿದ್ಯಾರ್ಥಿನಿಯರು ಪತ್ರ ಬರೆದ ಬಳಿಕ ಐಪಿಎಸ್ ಅಧಿಕಾರಿ ದೀಪ್ತಿ ಗಾರ್ಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ತನಿಖೆ ಆರಂಭಿಸಿದ್ದು, ವಿಶ್ವವಿದ್ಯಾಲಯದಲ್ಲಿ ಅನೇಕರ ಹೇಳಿಕೆಗಳನ್ನು ದಾಖಲಿಸಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶ್ರೀಕಾಂತ್ ಜಾಧವ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ತಮ್ಮ ಸಂಕಷ್ಟ ಹೇಳಿಕೊಂಡರೂ ಅವರು ಕುಲಪತಿಗಳು ಸಹಾಯಕ್ಕೆ ಬಂದಿಲ್ಲ.‌ ರಾಜಕೀಯ ಪ್ರಭಾವ ಉಳ್ಳವರಾಗಿದ್ದರಿಂದ ತಮನ್ನು ಹೊರಹಾಕುವ ಬೆದರಿಕೆ ಹಾಕಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ:  ನಾವು ರಾಮ ಭಕ್ತರೇ, ಬಾಗಿಲು ತೆಗೆಸಿದ್ದೇ ನಾವು – ಕಾಂಗ್ರೆಸ್‌ನಿಂದ ರಾಮ ಮಂದಿರಕ್ಕೆ ನೀಡಿದ ಕೊಡುಗೆ ಪಟ್ಟಿ ರಿಲೀಸ್‌

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಎಂ.ಎಲ್‌ ಖಟ್ಟರ್‌, ಗಂಭೀರವಾಗಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

Share This Article