Connect with us

Dharwad

500 ಬಾರಿ ಶ್ರೀರಾಮನ ಹೆಸರು ಜಪಿಸಲು ಮುತಾಲಿಕ್ ಕರೆ

Published

on

ಧಾರವಾಡ: ಜೂನ್ 10 ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಾರಂಭದ ದಿನವಾದ್ದರಿಂದ ಆ ದಿನ ದೇಶದ ಎಲ್ಲ ಹಿಂದೂ ಧರ್ಮದವರು ದೇವಸ್ಥಾನಗಳಲ್ಲಿ 500 ಬಾರಿ ಶ್ರೀರಾಮ ಜಯ ರಾಮ, ಜೈ ಜೈ ರಾಮ್ ಎಂಬ ಮಂತ್ರವನ್ನು ಜಪಿಸಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿದ ಅವರು, ಸುಮಾರು 500 ವರ್ಷಗಳ ನಂತರ ಶ್ರೀರಾಮನ ಮಂದಿರ ತನ್ನ ಮೂಲ ಸ್ಥಳದಲ್ಲಿ ಮರುನಿರ್ಮಾಣವಾಗುತ್ತಿದೆ. 70 ಯುದ್ಧಗಳು 30 ಲಕ್ಷ ಜನರ ಬಲಿದಾನವಾಗಿದೆ. ಈ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಜೂನ್ 10 ದೇವಸ್ಥಾನ ಮರುನಿರ್ಮಾಣಕ್ಕೆ ಪ್ರಾರಂಭದ ದಿನವಾಗಿದೆ. ಆ ದಿನ ಎಲ್ಲರೂ 500 ಬಾರಿ ಶ್ರೀರಾಮ ಜಯ ರಾಮ, ಜೈ ಜೈ ರಾಮ್ ಮಂತ್ರವನ್ನು ಜಪಿಸಿ ಬೆಂಬಲಿಸಬೇಕು ಎಂದಿದ್ದಾರೆ.

ರಾಮ ಮಂದಿರಗಳಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕ ಮಾಡಿಸಬೇಕು. ಈ ಕುರಿತು ಭಕ್ತರು ಕಾರ್ಯಪ್ರವೃತ್ತರಾಗಬೇಕು ಎಂದು ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *