ನವದೆಹಲಿ: ಕೆಲವೇ ತಿಂಗಳಲ್ಲಿ ಕೋವಿಡ್19ಗೆ ಲಸಿಕೆ ಬರಬಹುದು ಎಂಬ ನಿರೀಕ್ಷೆಗಳ ನಡುವೆ ಕೇಂದ್ರ ಸರ್ಕಾರ 50 ಲಕ್ಷದಷ್ಟು ಕೊರೊನಾ ಲಸಿಕೆಯನ್ನು ಖರೀದಿಸಬಹುದು ಎಂದು ವರದಿಯಾಗಿದೆ.
ಮೊದಲ ಹಂತದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಿಬ್ಬಂದಿಗೆ, ಸೈನಿಕರಿಗೆ ಲಸಿಕೆಯನ್ನ ನೀಡಲಾಗುತ್ತದೆ. ಹಿರಿಯ ನಾಗರಿಕರು, ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಲಸಿಕೆಯನ್ನು ನೀಡುವ ನಿರೀಕ್ಷೆ ಇದೆ.
Advertisement
Advertisement
ನೀತಿ ಆಯೋಗ, ಆರೋಗ್ಯ ಸಚಿವಾಲಯ ಮತ್ತು ಔಷಧ ಕಂಪನಿಗಳ ಜೊತೆಗೆ ಸೋಮವಾರ ಸಭೆ ನಡೆದಿತ್ತು. ಕೊರೊನಾ ಲಸಿಕೆಯ ಉತ್ಪಾದನಾ ಸಾಮರ್ಥ್ಯ, ಲಸಿಕೆ ಬೆಲೆ ಮತ್ತು ಸರ್ಕಾರದಿಂದ ಏನೆಲ್ಲ ಸಹಕಾರ ನೀಡಬಹುದು ಎಂಬುದರ ಬಗ್ಗೆ ಚರ್ಚೆ ನಡೆದಿದೆ.
Advertisement
ಈಗಾಗಲೇ ಇಂಗ್ಲೆಂಡಿನ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿರುವ ಆಸ್ಟ್ರಾಜೆನೆಕಾ ಲಸಿಕೆ ಭಾರತದಲ್ಲಿ ಮೂರನೇ ಹಂತದ ಪ್ರಯೋಗದಲ್ಲಿದ್ದು ಈ ವರ್ಷದ ಅಂತ್ಯದ ವೇಳೆಗೆ ಲಭ್ಯವಾಗಬಹುದು ಎನ್ನಲಾಗಿದೆ.
Advertisement
ಇತ್ತ ವಿಶ್ವದ ಮೊದಲ ಸ್ಪುಟ್ನಿಕ್ v ಹೆಸರಿನ ಲಸಿಕೆ ಕಂಡುಹಿಡಿದಿದ್ದಾಗಿ ಹೇಳಿಕೊಂಡಿರುವ ರಷ್ಯಾ ಅಂತಾರಾಷ್ಟ್ರೀಯ ಉತ್ಪಾದನೆಯನ್ನ ಆರಂಭಿಸಲಿದೆ. ಅದರಲ್ಲೂ ಭಾರತದಲ್ಲೂ ಲಸಿಕೆಯ ಉತ್ಪಾದನೆಗೆ ಉತ್ಸುಕವಾಗಿದೆ. ತನ್ನ ಗಾಮಲೆಯಾ ಸಂಸ್ಥೆ ಕಂಡುಹಿಂಡಿದಿರುವ ಲಸಿಕೆಯನ್ನು ಭಾರತ ಉತ್ಪಾದಿಸಬಹುದು ಎಂದು ರಷ್ಯಾ ಹೇಳಿದೆ.
ಸೌದಿ ಅರೇಬಿಯಾ, ಬ್ರೆಜಿಲ್, ಫಿಲಿಪೈನ್ಸ್ ಕೊರೋನಾ ಲಸಿಕೆ ಪ್ರಯೋಗದಲ್ಲಿ ಭಾಗಿ ಆಗಲಿವೆ ಎಂದು ರಷ್ಯಾ ಹೇಳಿದೆ. ರಷ್ಯಾದಲ್ಲಿ ಮುಂದಿನ ವಾರದಷ್ಟೊತ್ತಿಗೆ ಬರೋಬ್ಬರಿ 40 ಸಾವಿರ ಮಂದಿಗೆ ಮೂರನೇ ಹಂತದ ಲಸಿಕೆ ಪ್ರಯೋಗ ಮಾಡಲಾಗುತ್ತದೆ.
74ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ 7ನೇ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ಭಾಷಣ ಮಾಡಿದ್ದ ಮೋದಿ, ಪ್ರತಿಯೊಬ್ಬರು ಕೊರೊನಾಗೆ ಲಸಿಕೆ ಯಾವಾಗ ಬರುತ್ತದೆ ಎಂದು ಕೇಳುತ್ತಿದ್ದಾರೆ. ಆದರೆ ಮೂರು ಲಸಿಕೆಗೆಗಳು ವಿವಿಧ ಹಂತದ ಪ್ರಯೋಗದಲ್ಲಿದೆ. ವಿಜ್ಞಾನಿಗಳಿಂದ ಈ ಲಸಿಕೆಗೆ ಹಸಿರು ನಿಶಾನೆ ಸಿಕ್ಕಿದ ಕೂಡಲೇ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗಲಿದೆ ಎಂದು ತಿಳಿಸಿದರು.
ಹೈದರಾಬಾದಿನ ಭಾರತ್ ಬಯೋಟೆಕ್ ಕಂಪನಿ ಮತ್ತು ಝೈಡಸ್ ಕ್ಯಾಡಿಲ ಅಭಿವೃದ್ಧಿ ಪಡಿಸುತ್ತಿರುವ ಲಸಿಕೆಯ ಮೊದಲ ಮತ್ತು ಎರಡನೇ ಹಂತದ ಪ್ರಯೋಗ ನಡೆಯುತ್ತಿದೆ.