ಚಾಮರಾಜನಗರ: ಹುಲಿ ಯೋಜನೆಯ (Project Tiger) ಸುವರ್ಣ ಮಹೋತ್ಸವದ ಆಚರಣೆಗಾಗಿ ಬಂಡೀಪುರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ (Bandipur Tiger Reserve) ಸಫಾರಿ ನಡೆಸಿದ್ದಾರೆ.
ಮೈಸೂರಿನಿಂದ ಬೆಳಗ್ಗೆ ಮೇಲುಕಾಮನಹಳ್ಳಿ ಹೆಲಿಪ್ಯಾಡ್‌ಗೆ ಬಂದಿಳಿದ ಮೋದಿ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳಾದ ಮುರುಳಿ, ಸುಬ್ರಮಣ್ಯ, ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರಿಂದ ಸ್ವಾಗತ ಕೋರಿದರು. ಬೆಳಗ್ಗೆ 7:35ರ ವೇಳೆಗೆ ಬಂಡೀಪುರ ಕ್ಯಾಂಪಸ್‌ಗೆ ತಲುಪಿದ ಮೋದಿ ಅವರು ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.
Advertisement
Advertisement
7:50ಕ್ಕೆ ತೆರೆದ ಜೀಪ್‌ನಲ್ಲಿ (ಮಹೀಂದ್ರಾ ಬೊಲೆರೊ ಕ್ಯಾಂಪರ್) ಸುಮಾರು 2 ಗಂಟೆ (22 ಕಿ.ಮೀ) ಸಫಾರಿ ಮಾಡಿದರು. ಈ ವೇಳೆ ಅರಣ್ಯದಲ್ಲಿ ಪ್ರಧಾನಿ ಸಂಚರಿಸಿ ಸೌಂದರ್ಯ ಸವಿದರು. ಇದನ್ನೂ ಓದಿ: ವಿಕಲಚೇತನ ಕಾರ್ಯಕರ್ತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಮೋದಿ
Advertisement
"Spent the morning at the scenic Bandipur Tiger Reserve and got a glimpse of India’s wildlife, natural beauty and diversity," tweets PM Narendra Modi pic.twitter.com/VrmCZUPtqY
— ANI (@ANI) April 9, 2023
Advertisement
ಪ್ರಧಾನಿ ಮೋದಿ ಅವರೊಂದಿಗೆ ದೆಹಲಿಯಿಂದ ಬಂದಿದ್ದ ಏಮ್ಸ್ ವೈದ್ಯರ ತಂಡ, ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಎಸ್ ಪಿ ಪದ್ಮನಿ ಸಾಹು ಸೇರಿದಂತೆ ಜಿಲ್ಲೆಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯರ ತಂಡ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು. ಮೋದಿ ಅವರಿದ್ದ ವಾಹನದ ಜೊತೆಗೆ ಅಂಬುಲೆನ್ಸ್ ಸೇರಿದಂತೆ ಒಂಬತ್ತು ವಾಹನಗಳು ಸಾಗಿದ್ದವು.
#WATCH | Prime Minister Narendra Modi visits Theppakadu elephant camp pic.twitter.com/vjlrYqbwtG
— ANI (@ANI) April 9, 2023
ಅರಣ್ಯದ ಕಚ್ಚಾ ರಸ್ತೆಯಲ್ಲೇ ಸಾಗಿ ಬೆಳಗ್ಗೆ 9:50ಕ್ಕೆ ಕೆಕ್ಕನಹಳ್ಳ ಚೆಕ್ ಪೋಸ್ಟ್‌ಗೆ ಮೋದಿ ತಲುಪಿದರು. ಅಲ್ಲಿಂದ ತಮ್ಮ ವಾಹನದಲ್ಲಿ ಹೆದ್ದಾರಿಯಲ್ಲೇ 5 ಕಿ.ಮೀ. ಸಾಗಿ ತಮಿಳುನಾಡಿನ ಮಧುಮಲೈ ಹುಲಿಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಮೋದಿ ತೆರಳಿದರು. ಇಲ್ಲಿ ಆನೆಗಳಿಗೆ ಕಬ್ಬನ್ನು ತಿನ್ನಿಸಿದರು. ಏಷ್ಯಾದ ಪ್ರಥಮ ಆನೆ ಕ್ಯಾಂಪ್ ತೆಪ್ಪಕಾಡಿನಲ್ಲಿ ಮೋದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಭೇಟಿಯಾದ ಬಳಿಕ ನೀಲಗಿರಿಸ್ ಹೆಲಿಪ್ಯಾಡ್‌ನಿಂದ ಮೈಸೂರಿನತ್ತ ಹೊರಟರು.
#WATCH | Prime Minister Narendra Modi feeds an elephant at Theppakadu elephant camp pic.twitter.com/5S8bhRU67T
— ANI (@ANI) April 9, 2023