ಮಂಡ್ಯ: ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಆರ್‌ಎಸ್ ಡ್ಯಾಂಗೆ 44,238 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆ ಡ್ಯಾನಿಂದ 50 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.
ಮಂಡ್ಯ ಜಿಲ್ಲಾಡಳಿತ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳದಲ್ಲಿ ಇರುವುದರ ಜೊತೆಗೆ ಆಸ್ತಿ- ಪಾಸ್ತಿ, ಜಾನುವಾರುಗಳ ರಕ್ಷಣೆ ಸಂಬಂಧ ಅಲರ್ಟ್ ಘೋಷಿಸಿದೆ. ಇದಲ್ಲದೇ ಕಾವೇರಿ ನದಿ ಪಾತ್ರದಲ್ಲಿ ಇರುವ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ನಿರ್ಬಂಧ ಹೇರಿದೆ. ಇದನ್ನೂ ಓದಿ: ಜುಲೈನಲ್ಲೇ ತಮಿಳುನಾಡಿಗೆ ಹರಿದ 100 ಟಿಎಂಸಿ ನೀರು – ಕೆಆರ್‌ಎಸ್ ಹೊಸ ದಾಖಲೆ
ಜೂನ್ ತಿಂಗಳಲ್ಲೇ ಅಬ್ಬರದ ಮಳೆಯಿಂದ ಕೆಆರ್‌ಎಸ್ ಡ್ಯಾಂ ಭರ್ತಿಯಾಗಿ ಹೊಸ ಇತಿಹಾಸವನ್ನು ಬರೆದಿತ್ತು. ಡ್ಯಾಂ ಭರ್ತಿಯಾಗಿರುವುದರಿಂದ ಬಂದ ಒಳಹರಿವನ್ನು, ಹೊರಗೆ ಬಿಡಬೇಕಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾವೇರಿ ಕೊಳ್ಳದಲ್ಲಿ ಪ್ರವಾಹ ಎದುರಾಗುವ ಸಾಧ್ಯತೆ ಸಹ ಇದೆ. ಇದನ್ನೂ ಓದಿ: ಮಂಡ್ಯ | ರೈತರ ಹೋರಾಟದ ಎಚ್ಚರಿಕೆ ಬಳಿಕ KRSನಿಂದ ನಾಲೆಗಳಿಗೆ ನೀರು