ಚಿಕ್ಕೋಡಿ: ಕಬ್ಬು (Sugarcane) ಬೆಳೆಯುವ ರೈತರಿಗೆ (Farmers) ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೆಡಕಿಹಾಳ ಗ್ರಾಮದಲ್ಲಿರುವ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ (Venkateshwara Sugar Factory) ಸಿಹಿ ಸುದ್ದಿ ನೀಡಿದೆ. ಒಂದು ಟನ್ ಕಬ್ಬಿಗೆ 3,350 ರೂ. ನೀಡುವುದಾಗಿ ಕಾರ್ಖಾನೆ ಹೇಳಿದೆ.
ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಸ್ವರೂಪ ಮಹಾದೇವರಾವ್ ಮಹಾಡಿಕ್ ಎಂಬವರ ಒಡೆತನದಲ್ಲಿದೆ. ಒಂದು ಟನ್ ಕಬ್ಬಿಗೆ 3,300 ರೂ. ನೀಡಬೇಕು ಎಂದು ರಾಜ್ಯ ಸರ್ಕಾರ ನಿಗದಿ ಮಾಡಿತ್ತು. ಇದೀಗ ಸರ್ಕಾರ ನಿಗದಿಪಡಿಸಿದ ದರಕ್ಕಿಂತ 50 ರೂ. ಹೆಚ್ಚಿಗೆ ನೀಡಲು ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಒಪ್ಪಿಗೆ ನೀಡಿದೆ. ಇದನ್ನೂ ಓದಿ: ಕಬ್ಬು ಪ್ರತಿ ಟನ್‌ಗೆ 3,300 ರೂ.: ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
ಈ ಮೊದಲು ಕಬ್ಬು ಬೆಳೆಗಾರರಿಗೆ 50 ರೂ. ಹೆಚ್ಚು ಹಣವನ್ನು ಕಾರ್ಖಾನೆ ಮಾಲೀಕರು ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಮಾಲೀಕರ ಎದುರೇ ಇದನ್ನ ನಿರ್ಧಾರ ಮಾಡಿದ್ದೇವೆ. ಹೇಳಿರೋದೊಂದು ಮಾಡಿರೋದೊಂದು ಅಲ್ಲ. ಮಾಲೀಕರ ಎದುರಿಗೆ ಎಲ್ಲವನ್ನು ಹೇಳಿದ್ದೇನೆ. ಜೂಮ್ ಮೀಟಿಂಗ್‌ನಲ್ಲಿ ಡಿಸಿ ಬಂದು ಹೇಳೋವರೆಗೂ 3,200 ರೂ.ಗೆ ಒಪ್ಪಿರಲಿಲ್ಲ. ಡಿಸಿ ಹೇಳಿದ ಮೇಲೆ ಒಪ್ಪಿಕೊಂಡರು. ನಾನು ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. 50 ರೂ. ಕಾರ್ಖಾನೆಗಳು ಕೊಡಬೇಕು. ಸರ್ಕಾರ 50 ರೂ. ಕೊಡಲಿದೆ. 10.25% ರಿಕವರಿಗೆ 3,100+100 ಸೇರಿ 3200 ರೂ., 11.25% ರಿಕವರಿಗೆ 3,200+100 ಸೇರಿ 3,300 ರೂ. ಕೊಡಬೇಕು ಎಂದು ನಿರ್ಧಾರ ಆಗಿದೆ ಎಂದಿದ್ದರು. ಈ ನಿರ್ಣಯವನ್ನು ಸರ್ಕಾರ ಇದೀಗ ಅಧಿಕೃತಗೊಳಿಸಿದೆ. ಇದನ್ನೂ ಓದಿ: ಮೋದಿ ಪ್ರಧಾನಿ ಆದ್ಮೇಲೆ ಸಾಂವಿಧಾನಿಕ ಸಂಸ್ಥೆಗಳ ಮೌಲ್ಯ ಹಾಳಾಗಿದೆ: ಸಿದ್ದರಾಮಯ್ಯ ವಾಗ್ದಾಳಿ

