ಬೆಂಗಳೂರು: ಟ್ರಾಫಿಕ್ ದಂಡ (Traffic Fine) 50% ರಿಯಾಯಿತಿ ನಿಯಮವನ್ನ 5 ತಿಂಗಳು ವಿಸ್ತರಣೆ ಮಾಡಬೇಕು ಎಂದು ಜೆಡಿಎಸ್ (JDS) ಸದಸ್ಯ ಮಂಜೇಗೌಡ (Manjegowda) ಸರ್ಕಾರವನ್ನ ಒತ್ತಾಯಿಸಿದ್ದಾರೆ. ವಿಧಾನ ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ಮಂಜೇಗೌಡ ವಿಷಯ ಪ್ರಸ್ತಾಪ ಮಾಡಿದರು.
Advertisement
ವಾಹನ ನಿಯಮ ಉಲ್ಲಂಘನೆ ಪ್ರಕರಣದಲ್ಲಿ 50% ಫೈನ್ ಕಟ್ಟುವ ನಿಯಮವನ್ನ ಸರ್ಕಾರ ಜಾರಿ ಮಾಡಿದೆ. ಈಗಾಗಲೇ 100 ಕೋಟಿಗೂ ಅಧಿಕ ಫೈನ್ ಸಂಗ್ರಹ ಆಗಿದೆ. ಅದರೆ ಇನ್ನು ಸಾವಿರಾರು ಕೇಸ್‌ಗಳು ಬಾಕಿ ಇವೆ. ಈಗ ಕೊಟ್ಟಿರುವ ಸಮಯ ಸಾಕಾಗುವುದಿಲ್ಲ ಎಂದರು. ಇದನ್ನೂ ಓದಿ: 6 ಕೋಟಿ ಮೌಲ್ಯದ ಜಮೀನು ದಾನ ಮಾಡಿದ ಶಾಸಕ ಶರತ್ ಬಚ್ಚೇಗೌಡ
Advertisement
Advertisement
ದಂಡ ಕಟ್ಟಲು ಅನೇಕ ಮಾರ್ಗಗಳನ್ನ ಸರ್ಕಾರ ಕೊಟ್ಟಿದೆ. ಆದರೆ ʼಬೆಂಗಳೂರು ಒನ್ʼಗಳಲ್ಲಿ ಹಣ ಕಟ್ಟಲು ಸರ್ವರ್ ಸಮಸ್ಯೆ ಆಗುತ್ತಿದೆ. ಸಿಸ್ಟಮ್ ಸರಿಯಾಗಿ ವರ್ಕ್ ಆಗುತ್ತಿಲ್ಲ. ಹೀಗಾಗಿ 50% ರಿಯಾಯಿತಿ ನಿಯಮವನ್ನ ಕನಿಷ್ಠ 5 ತಿಂಗಳಿ ವಿಸ್ತರಣೆ ಮಾಡಬೇಕು. ಈ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರವನ್ನ ಒತ್ತಾಯ ಮಾಡಿದರು.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k