ಧಾರವಾಡ: ಆಪರೇಶನ್ ಹಸ್ತದ ಮಧ್ಯೆ ಧಾರವಾಡದ ಮಾಜಿ ಶಾಸಕ ಅಮೃತ ದೇಸಾಯಿ ಹೊಸ ಬಾಂಬ್ ಸಿಡಿಸಿದ್ದಾರೆ.
ಧಾರವಾಡದಲ್ಲಿ (Dharwad) ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಶಾಸಕ ಅಮೃತ ದೇಸಾಯಿ, ಭಾರತೀಯ ಜನತಾ ಪಾರ್ಟಿ ಚಿನ್ಹೆ ಮೇಲೆ ಆರಿಸಿ ಬಂದ ಯಾವೊಬ್ಬ ಅಭ್ಯರ್ಥಿಯೂ ಕಾಂಗ್ರೆಸ್‍ಗೆ (Congress) ಹೋಗುವುದಿಲ್ಲ. ಅವರು ಪಕ್ಷ ಬಿಡುವುದಿಲ್ಲ, ಕಾಂಗ್ರೆಸ್‍ನಲ್ಲಿ ಸಾಕಾಗಿಯೇ ಅವರು ಬಿಜೆಪಿಗೆ (BJP) ಬಂದಿದ್ದಾರೆ ಎಂದರು. ಇದನ್ನೂ ಓದಿ: ಗೃಹಜ್ಯೋತಿಗಾಗಿ ಹಣ ಬಿಡುಗಡೆ – ಎಸ್ಕಾಂಗಳು ಕೇಳಿದ್ದು ಎಷ್ಟು? ಸಿಕ್ಕಿದ್ದು ಎಷ್ಟು?
ಮತ್ತೆ ಮರಳಿ ಅವರೇಕೆ ಕಾಂಗ್ರೆಸ್‍ಗೆ ಹೋಗುತ್ತಾರೆ? ಸಿದ್ದರಾಮಯ್ಯನವರ ಆಡಳಿತದಿಂದ ಬೇಸತ್ತು 40-50ಜನ ಕಾಂಗ್ರೆಸ್ ಶಾಸಕರೇ ಬಿಜೆಪಿಗೆ ಬರುತ್ತಾರೆ ಎಂಬ ಮಾಹಿತಿ ಇದೆ ಎಂದು ಹೊಸ ಬಾಂಬ್ ಸಿಡಿಸಿದ ಅವರು, ಈಗ ನಾವು ಇವ್ಯಾವುದನ್ನೂ ಬಹಿರಂಗಪಡಿಸುವುದಿಲ್ಲ. ಈ ಸಮಯ ಸೂಕ್ತವೂ ಅಲ್ಲ. ರೈತರ ಸಮಸ್ಯೆಗಳಿಗೆ ಈ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.
ಹಲವಾರು ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಅವುಗಳನ್ನು ಬಿಟ್ಟು ಜನರ ಮರೆಮಾಚುವ ಸಲುವಾಗಿ ಕಾಂಗ್ರೆಸ್ ಅವರು ಕಾಂಗ್ರೆಸ್‍ಗೆ ಬರುತ್ತಾರೆ ಇವರು ಕಾಂಗ್ರೆಸ್‍ಗೆ ಬರುತ್ತಾರೆ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ, ಕಾಂಗ್ರೆಸ್ ಮಾಡುವ ಕೆಲಸ ಬಹಳಷ್ಟಿದೆ ಎಂದ ಅಮೃತ ದೇಸಾಯಿ, ಕಾಂಗ್ರೆಸ್‍ನವರು ಕೊಟ್ಟ ಗ್ಯಾರಂಟಿಗಳೇ ಬೋಗಸ್ ಇವೆ. ಮಹಿಳೆಯರ ಅಕೌಂಟ್‍ಗೆ ಹಣ ಹಾಕುತ್ತೇವೆ ಎಂದಿದ್ದರು. ಇದುವರೆಗೂ ಹಣ ಜಮಾ ಆಗಿಲ್ಲ ಎಂದರು.
ಬರಗಾಲದ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಬರಬೇಕಿದ್ದ ಸರ್ಕಾರ ಕಾಲಹರಣ ಮಾಡುತ್ತಿದೆ. ಐದು ವರ್ಷ ಕಾಲಹರಣ ಮಾಡಿ ಹೋಗಲು ಈ ಸರ್ಕಾರ ಬಂದಿದೆ. ಬಿಜೆಪಿಯಿಂದ ಯಾರೂ ಕಾಂಗ್ರೆಸ್‍ಗೆ ಹೋಗುವುದಿಲ್ಲ. 40-50 ಜನ ಶಾಸಕರೇ ಬಿಜೆಪಿಗೆ ಬರಲಿದ್ದಾರೆ ಎಂಬ ಮಾಹಿತಿ ಇದೆ ಎಂದರು.
Web Stories