ಬೀದರ್ ಪೊಲೀಸರ ದಾಳಿ – 50 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಅರೆಸ್ಟ್

Public TV
1 Min Read
Bidar POLICE

ಬೀದರ್: ಭಾರೀ ಮತ್ತು ಭರಿಸುವ ಎಂಡಿಎಂಎ (MDMA) ಡ್ರಗ್ಸ್‌ನ್ನು ಸಾಗಿಸುತ್ತಿದ್ದ ಇಬ್ಬರನ್ನು ಬೀದರ್ (Bidar) ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತರಿಂದ 50 ಲಕ್ಷ ರೂ. ಸೀಜ್ ಮಾಡಿದ್ದಾರೆ.

ಡ್ರಗ್ಸ್‌ನ್ನು ಆರೋಪಿಗಳು ಹುಮ್ನಾಬಾದ್‍ನ ರಾಷ್ಟ್ರೀಯ ಹೆದ್ದಾರಿ 65ರ ಮೂಲಕ ಮುಂಬೈನಿಂದ (Mumbai) ಹೈದರಾಬಾದ್‍ಗೆ ಸಾಗಾಟ ಮಾಡುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಬೀದರ್ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತರಿಂದ 499 ಗ್ರಾಂ. ಎಂಡಿಎಂಎ, ಒಂದು ಬುಲೆರೋ ಜೀಪ್, 2 ಮೊಬೈಲ್, ಜೊತೆಗೆ ಡ್ರಗ್ಸ್ ತೂಕ ಮಾಡುವ ಯಂತ್ರ ಸೇರಿದಂತೆ ಒಟ್ಟು 55 ಲಕ್ಷ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ವಿದೇಶಿ ಮಹಿಳೆಯರಿಂದ ಪಿಎಸ್‍ಐ ಸೇರಿ ನಾಲ್ವರ ಮೇಲೆ ಹಲ್ಲೆ

ಎಸ್‍ಪಿ ಚೆನ್ನಬಸವಣ್ಣ ಲಂಗೋಟಿ ಮಾರ್ಗದರ್ಶನದಲ್ಲಿ ಎಎಸ್‍ಪಿ ಮಹೇಶ್ ಮೇಘಣ್ಣನವರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ಸಂಬಂಧ ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 5 ಗ್ಯಾರಂಟಿ ಜಾರಿಗೆ ತೆರಿಗೆ ಏರಿಕೆ, 85ಸಾವಿರ ಕೋಟಿ ಸಾಲಕ್ಕೆ ನಿರ್ಧಾರ – ಯಾವ ತೆರಿಗೆ ಎಷ್ಟು ಏರಿಕೆ?

Web Stories

Share This Article