ರಾಯ್ಪುರ: ಛತ್ತೀಸ್‍ಗಢದ (Chhattisgarh) ದಾಂತೇವಾಡದಲ್ಲಿ (Dantewada) ಬುಧವಾರ ನಡೆದ ನಕ್ಸಲರ ದಾಳಿಯಲ್ಲಿ 11 ಯೋಧರು ಹುತಾತ್ಮರಾಗಿದ್ದಾರೆ. ಆದರೆ ಈ ದಾಳಿಯು ಪೂರ್ವನಿಯೋಜಿತವಾಗಿದ್ದು, ಯೋಧರ ವಾಹನವನ್ನು ಸ್ಫೋಟಿಸಲು ನಕ್ಸಲರು ಮೊದಲೇ 50 ಕೆಜಿ ಸುಧಾರಿತ ಸ್ಫೋಟಕ ಸಾಧನವನ್ನು (IED) ರಸ್ತೆಯಲ್ಲಿ ಇಟ್ಟಿದ್ದರು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.
ಛತ್ತೀಸ್‍ಗಢದ ಅರನ್‍ಪುರ ಏರಿಯಾದಲ್ಲಿ ಮಾವೋವಾದಿಗಳು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಛತ್ತೀಸ್‍ಗಢದ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ (ಡಿಆರ್‌ಜಿ)ನ ಸೈನಿಕರು ಅಲ್ಲಿಗೆ ತೆರಳಿದ್ದರು. ಈ ವೇಳೆ ಆ ಯೋಧರೆಲ್ಲರೂ ಬಾಡಿಗೆಗೆ ಪಡೆದ ಮಿನಿ ವ್ಯಾನ್‍ನಲ್ಲಿ ಪ್ರಯಾಣಿಸುತ್ತಿದ್ದರು.
Advertisement
Advertisement
ಇದನ್ನೇ ಲಾಭವಾಗಿಸಿಕೊಂಡ ಮಾವೋವಾದಿಗಳು ನಕ್ಸಲರು ಸೇನಾ ವಾಹನ ವಾಪಸ್ ಬರುವ ಮಾರ್ಗದಲ್ಲಿ ಐಇಡಿ ಅಳವಡಿಸಿ ಇಟ್ಟಿದ್ದರು. ಅಷ್ಟೇ ಅಲ್ಲದೇ ಮರಗಳನ್ನು ಕಿತ್ತುಹಾಕಿ ರಸ್ತೆಯಲ್ಲಿ 10 ಅಡಿ ಆಳ ಹಾಗೂ 20 ಅಡಿ ಅಗಲದ ದೊಡ್ಡ ಕುಳಿ ತೋಡಿ, ಐಇಡಿಯನ್ನು ಬಚ್ಚಿಟ್ಟಿದರು.
Advertisement
ನಕ್ಸಲರ ಯೋಜನೆಯಂತೆ ಕಾರ್ಯಚರಣೆ ಮುಗಿಸಿ ವಾಪಸ್ ಬರುತ್ತಿದ್ದ ಡಿಆರ್‌ಜಿ ವಾಹನ ಆ ಐಇಡಿ ಇದ್ದ ಸ್ಥಳ ದಾಂತೇವಾಡಕ್ಕೆ ಬಂದಿದೆ. ಈ ವೇಳೆ ಐಇಡಿ ಸ್ಫೋಟಗೊಂಡಿದ್ದು, ಅದರ ರಭಸಕ್ಕೆ ವಾಹನ ಚೂರು ಚೂರಾಗಿದೆ. ಜೊತೆಗೆ ಸೈನಿಕರ ದೇಹವೂ ಛೀದ್ರಗೊಂಡಿದೆ. ವಾಹನದಲ್ಲಿ 10 ಪೊಲೀಸರು ಹಾಗೂ ಓರ್ವ ಚಾಲಕ ಬಲಿಯಾಗಿದ್ದಾರೆ.
Advertisement
ಯೋಧರ ವಾಹನವು ಸ್ಫೋಟದ ಸ್ಥಳದಿಂದ ಕನಿಷ್ಠ 20 ಅಡಿಗಳಷ್ಟು ದೂರಕ್ಕೆ ಹಾರಿದೆ. ಜೊತೆಗೆ ಸ್ಫೋಟದ ಸ್ಥಳದಿಂದ 150 ಮೀ. ದೂರದಲ್ಲಿ ಚೂರಾದ ವಾಹನದ ಅವಶೇಷಗಳು ಬಿದ್ದಿವೆ. ಘಟನೆಗೆ ಸಂಬಂಧಿಸಿ ವಿಶೇಷ ಭದ್ರತಾ ಪಡೆಗಳು ಕಾಡಿನಲ್ಲಿ ಅಡಗಿರುವ ಮಾವೋವಾದಿಗಳನ್ನು ಹುಡುಕುತ್ತಿವೆ ಎಂದು ಮೂಲಗಳು ತಿಳಿಸಿವೆ. ಈ ಪ್ರದೇಶವು 3 ರಾಜ್ಯಗಳ ಮಧ್ಯ ಇದ್ದು, ತ್ರಿ-ಜಂಕ್ಷನ್ ಆಗಿದೆ.
ಗುಪ್ತಚರ ಮಾಹಿತಿ ಸಂಗ್ರಹವಾಗಿರಲಿಲ್ಲ: ಇಂದು ಮೃತಪಟ್ಟಿದ್ದ ಯೋಧರು ಡಿಆರ್‍ಜಿಯ ವಿಶೇಷ ತಂಡದ ಸದಸ್ಯರಗಿದ್ದಾರೆ. ನಕ್ಸಲರ ವಿರುದ್ಧ ಹೋರಾಡಲು ವಿಶೇಷವಾಗಿ ತರಬೇತಿ ಪಡೆದ ಸ್ಥಳೀಯ ಬುಡಕಟ್ಟು ಸಮುದಾಯದ ಸೈನಿಕರೇ ಹೆಚ್ಚಿನ ಜನರು ಇದರಲ್ಲಿ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಶಿಷ್ಟಾಚಾರದ ಪ್ರಕಾರ ಭದ್ರತಾಪಡೆಗಳು ಗುಪ್ತಚರ ಮಾಹಿತಿ ತಲುಪಿದ ಬಳಿಕ ಹಾಗೂ ಸ್ಥಳ ಪರಿಶೀಲನೆಯ ಬಳಿಕವಷ್ಟೇ ಮುಂದೆ ಸಾಗಬೇಕು. ಆದರೆ ಮೂಲಗಳ ಪ್ರಕಾರ ಛತ್ತೀಸ್‍ಗಢ ಜಿಲ್ಲಾ ಮೀಸಲು ಪಡೆ ಹೋಗುವ ಮಾರ್ಗದಲ್ಲಿ ಮುಂಚಿತವಾಗಿ ಗುಪ್ತಚರ ಮಾಹಿತಿ ಸಂಗ್ರಹವಾಗಿರಲಿಲ್ಲ. ಸ್ಥಳ ಪರಿಶಿಲನೆಯೂ ನಡೆದಿರಲಿಲ್ಲ. ನಕ್ಸಲರು ಡಿಆರ್‍ಜಿ ವಾಹನದ ಮೇಲೆ ಮೊದಲನಿಂದಲೂ ಕಣ್ಣಿಟ್ಟಿದ್ದರು. ಅದರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಡಿಆರ್‌ಜಿ ಪಡೆ ಹೋಗುವಾಗ ದಾರಿಯನ್ನು ಬದಲಿಸದೇ ಇರುವುದು ಘಟನೆಗೆ ಕಾರಣವಾಗಿದೆ.
2 ರಾಜ್ಯಗಳಲ್ಲಿ ಹೈಅಲರ್ಟ್: ನಕ್ಸಲ್ ದಾಳಿ ಬೆನ್ನಲ್ಲೇ ಒಡಿಶಾದ 3 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ಘಟನೆಯ ನಂತರ ಛತ್ತೀಸ್‍ಗಢದ ಗಡಿಭಾಗದ ಜಿಲ್ಲೆಗಳಾದ ಮಲ್ಕಾನ್‍ಗಿರಿ, ಕೊರಾಪುಟ್, ಬರ್ಗಾರ್ಡ್, ನುವಾಪಾದ ಮತ್ತು ನಬರಂಗ್‍ಪುರವನ್ನು ಹೈ ಅಲರ್ಟ್ ಮಾಡಲಾಗಿದೆ ಎಂದು ಒಡಿಶಾ ಪೊಲೀಸ್‍ನ ಗುಪ್ತಚರ ನಿರ್ದೇಶಕ ಸಂಜೀಬ್ ಪಾಂಡಾ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಮಗೆ ರಾಹುಲ್ ಗಾಂಧಿ ರಕ್ತದ ಬಗ್ಗೆ ಸಂಶಯವಿದೆ : ಕಟೀಲ್
ಛತ್ತೀಸ್‍ಗಢ ಸಿಎಂ, ಕರ್ನಾಟಕದ ಪ್ರವಾಸ ರದ್ದು: ಛತ್ತೀಸ್‍ಗಢ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಭುಪೇಶ್ ಬಘೇಲ್ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಬರಬೇಕಿತ್ತು. ಆದರೆ ಯೋಧರ ಮೇಲೆ ದಾಳಿ ನಡೆದ ಬೆನ್ನಲ್ಲೇ ಕರ್ನಾಟಕ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಜೊತೆಗೆ ಘಟನಾ ಸ್ಥಳ ದಾಂತೇವಾಡಕ್ಕೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ ಜೊತೆಗೆ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಇದನ್ನೂ ಓದಿ: ಶೆಟ್ಟರ್ ಅರ್ಥ ಮಾಡಿಕೊಳ್ಳಲು ಆಗಲಿಲ್ಲ, ಫೇಲ್ ಆದೆ: ಜೋಶಿ