ತಿರುಪತಿ: ತಿರುಪತಿಯಲ್ಲಿ (Tirupati) ಭಕ್ತಸಾಗರ ತುಂಬಿ ತುಳುಕುತ್ತಿದೆ. ತಿರುಪತಿ ಬೆಟ್ಟದಲ್ಲಿ 6 ಕಿ.ಮೀ.ವರೆಗೆ ಭಕ್ತರ ಸಾಲು ನಿಂತಿದ್ದು, ತಿಮ್ಮಪ್ಪನ ದರ್ಶನ ಪಡೆಯಬೇಕು ಅಂದರೆ 50 ಗಂಟೆಗಳ ಕಾಲ ಕಾಯಬೇಕಿದೆ.
ಹೌದು.. ಎಲ್ಲಿ ನೋಡಿದ್ರೂ ಜನವೋ ಜನ (People), ದೇಗುಲದ (Temple) ಕಾಂಪ್ಲೆಕ್ಸ್‌ನಿಂದ ಆಚೆ, ದೇವಾಲಯದ ಮುಂಭಾಗ, ಲಡ್ಡುಗೂ ಕ್ಯೂ ಮುಡಿ ಸೇವೆಗೂ ಕ್ಯೂ ಲಗೇಜ್ ಕೌಂಟರ್‌ನಲ್ಲೂ ಕ್ಯೂ ಎಲ್ಲಿ ನೋಡಿದ್ರೂ ಲಕ್ಷಾಂತರ ಭಕ್ತರು. ಇದು ಆಂಧ್ರಪ್ರದೇಶದ ತಿರುಪತಿ ತಿರುಮಲದ ಸ್ಥಿತಿಯಾಗಿದೆ. ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಕಳೆದ 2 ದಿನಗಳಿಂದ ತಿರುಮಲದಲ್ಲಿ ಭಕ್ತ ಸಾಗರ ಹರಿದು ಬರುತ್ತಿದೆ. ಈ ಭಕ್ತರನ್ನು ನಿಯಂತ್ರಿಸಲು ಟಿಟಿಡಿ ಆಡಳಿತ ಮಂಡಳಿ ಹರಸಾಹಸ ಪಡುತ್ತಿದೆ.
Advertisement
Advertisement
ಜನರು ಹೆಚ್ಚಿರುವ ಹಿನ್ನೆಲೆಯಲ್ಲಿ ತಿರುಮಲನ ದರ್ಶನಕ್ಕೆ ಮಾತ್ರ ಅವಕಾಶವನ್ನು ನೀಡಲಾಗಿದೆ. ಆದರೂ ಉಚಿತ ದರ್ಶನದ ಸಾಲಿನಲ್ಲಿ 2 ಕಿ.ಮೀವರೆಗೆ ಭಕ್ತರು ನಿಂತಿದ್ದಾರೆ. ದರ್ಶನಕ್ಕಾಗಿ ಭಕ್ತರು 48 ಗಂಟೆಗಳ ಕಾಲ ಕಾಯುವಷ್ಟು ಜನದಟ್ಟಣೆ ಉಂಟಾಗಿದೆ. ಇದರಿಂದಾಗಿ ತಿರುಪತಿ ದೇವಾಲಯ, ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಂತಾದ ಕಡೆ ಭಕ್ತರೇ ಕಾಣಿಸುತ್ತಿದ್ದಾರೆ. ಭಾನುವಾರದ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಕೌಂಟರ್‌ಗಳಲ್ಲಿ ಭಕ್ತರನ್ನು ನಿಯಂತ್ರಿಸುವುದು ಟಿಟಿಡಿಗೆ ಸವಾಲಾಗಿ ಪರಿಣಮಿಸಿದೆ. ಇದನ್ನೂ ಓದಿ: ಕೊಡಗಿನಲ್ಲಿ 3ನೇ ಸಾಕಾನೆ ಶಿಬಿರ ಲೋಕಾರ್ಪಣೆ – ಹಾರಂಗಿ ವಿಶೇಷತೆ ಏನು?
Advertisement
Advertisement
ಇನ್ನೂ ಪ್ರಪಂಚದಲ್ಲಿ ಕೋಟ್ಯಂತರ ಭಕ್ತರನ್ನು ಹೊಂದಿರುವ ತಿಮ್ಮಪ್ಪನ ದರ್ಶನಕ್ಕೆ ಬೇರೆ ಬೇರೆ ರಾಜ್ಯಗಳಿಂದಲೂ ಲಕ್ಷಾಂತರ ಜನ ಆಗಮಿಸಿದ್ದಾರೆ. ಕಳೆದ 2 ವರ್ಷಗಳಿಂದ ಕೋವಿಡ್ (Covid) ಇದ್ದು ದರ್ಶನ ಮಾಡಲು ಸಾಧ್ಯವಾಗದವರು ಹಾಗೂ ನಿಯಮಗಳ ಸಡಿಲಿಕೆ ಬಳಿಕ ತಿರುಪತಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ರಜಾ ದಿನಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಟಿಡಿ ಭಕ್ತರು ಪ್ರವಾಸ ಮುಂದೂಡುವುದು ಉತ್ತಮ ಎಂದು ಮನವಿ ಮಾಡಿದೆ. ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ತಕ್ಕ ಪ್ರಾಶಸ್ತ್ಯ ಸಿಗುತ್ತಿಲ್ಲ: ಶರದ್ ಪವಾರ್ ಬೇಸರ