– ರೈಲು ಹೈಜಾಕ್ ಸ್ಥಳಕ್ಕೆ 200ಕ್ಕೂ ಹೆಚ್ಚು ಶವಪೆಟ್ಟಿಗೆಗಳ ರವಾನೆ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ರೈಲು ಹೈಜಾಕ್ ಪ್ರಕರಣದಲ್ಲಿ (Pakistan Train Hijack Case) ಭಾರೀ ಸಾವು ನೋವು ಉಂಟಾಗಿದೆ. ಬಲೂಚ್ ಲಿಬರೇಷನ್ ಆರ್ಮಿ ವಶದಲ್ಲಿರುವ ಪ್ರಯಾಣಿಕರ ರಕ್ಷಣೆಗೆ ಪಾಕ್ ಸೇನೆ (Pakistan Army) ಕೌಂಟರ್ ಆಪರೇಷನ್ ನಡೆದಿದೆ.
ಈವರೆಗೂ 190 ಪ್ರಯಾಣಿಕರನ್ನು ರಕ್ಷಿಸಿದ ಭದ್ರತಾ ಪಡೆಗಳು, 30 ಪ್ರತ್ಯೇಕತಾವಾದಿಗಳನ್ನು ಕೊಂದಿದೆ. ಉಳಿದ ಪ್ರಯಾಣಿಕರನ್ನು ರಕ್ಷಿಸಲು ಸೇನಾ ಹೆಲಿಕಾಪ್ಟರ್, ಡ್ರೋನ್ ಬಳಸಿ ಪಾಕ್ ಸೇನೆ ಕಾರ್ಯಚರಣೆ ನಡೆಸಿದೆ. ಆದ್ರೆ, ಬಿಎಲ್‌ಎ ಪಟ್ಟುಬಿಡಲು ತಯಾರಿಲ್ಲ. ನೂರಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿರುವ ಬಿಎಲ್‌ಎ ಈವರೆಗೂ 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಕೊಂದಿದೆ.
50 ಒತ್ತೆಯಾಳುಗಳು ಗಲ್ಲಿಗೆ:
ರೈಲು ಹೈಜಾಕ್ ಮಾಡಿ 200 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಬಲೂಚ್ ದಂಗೆಕೋರರು, ಪಾಕಿಸ್ತಾನ ಸೇನೆ ನಮ್ಮ ವಿರುದ್ಧ ನಡೆಸಿದ ದಾಳಿಗೆ ಪ್ರತೀಕಾರವಾಗಿ 50 ಒತ್ತೆಯಾಳುಗಳನ್ನ ಗಲ್ಲಿಗೇರಿಸಿರುವುದಾಗಿ ಹೇಳಿಕೊಂಡಿದೆ. ಮಿಲಿಟರಿ ಕಾರ್ಯಾಚರಣೆಯನ್ನು ರದ್ದುಗೊಳಿಸಿ, ಬಂಧಿಸಿರುವ ಬಲೂಚ್ ಕೈದಿಗಳನ್ನು 20 ಗಂಟೆಗೊಳಗೆ ಬಿಡುಗೆ ಮಾಡಬೇಕು. ಇಲ್ಲದಿದ್ದರೆ ಉಳಿದ ಒತ್ತೆಯಾಳುಗಳನ್ನು ಗಲ್ಲಿಗೇರಿಸುವುದಾಗಿ ಧಂಗೆಕೋರರ ಗುಂಪು ಎಚ್ಚರಿಕೆ ನೀಡಿದೆ.
ದಂಗೆಕೋರರು ಹೇಳುವ ಪ್ರಕಾರ, ಅವರ ವಶದಲ್ಲಿರುವ ಎಲ್ಲಾ ಒತ್ತೆಯಾಳುಗಳು ಪಾಕಿಸ್ತಾನದ ಸೇನೆ, ಪೊಲೀಸ್, ಫ್ರಾಂಟಿಯರ್ ಕಾರ್ಪ್ಸ್ ಮತ್ತು ಇತರ ಭದ್ರತಾ ಪಡೆಗಳ ಸಿಬ್ಬಂದಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: PUBLiC TV Exclusive | ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಸಿಐಡಿ ವಿಚಾರಣೆ ಆದೇಶ ವಾಪಸ್ ಪಡೆದ ಸರ್ಕಾರ!
ಮೊದಲು ವೈಮಾನಿಕ ದಾಳಿ ನಿಲ್ಲಿಸಬೇಕು. ಇಲ್ಲ ಅಂದ್ರೆ ಉಳಿದವರನ್ನು ಕೊಲ್ತೇವೆ. ನಮ್ಮ ಬಿಎಲ್‌ಎ ಸೈನಿಕರ ಮೇಲೆ ದಾಳಿ ಮಾಡಿದ್ರೆ ಇಡೀ ರೈಲನ್ನೇ ಸ್ಫೋಟಿಸ್ತೇವೆ. ನಮ್ಮ ಆತ್ಮಾಹುತಿ ಪಡೆ ರೈಲಲ್ಲಿ ಸಜ್ಜಾಗಿದೆ ಎಂದು 70 ರಿಂದ 80 ಮಂದಿ ಇರುವ ಮಜೀದ್ ಬ್ರಿಗೇಡ್ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಅಮೆರಿಕದ ಮದ್ಯದ ಮೇಲೆ ಭಾರತ 150%, ಕೃಷಿ ಉತ್ಪನ್ನಗಳ ಮೇಲೆ 100% ತೆರಿಗೆ ವಿಧಿಸುತ್ತಿದೆ: ವೈಟ್‌ಹೌಸ್
ಈಗಾಗಲೇ ರೈಲ್ವೇ ಹಳಿಯನ್ನು ಬಿಎಲ್‌ಎ ಸಂಪೂರ್ಣವಾಗಿ ಸ್ಫೋಟಿಸಿದೆ. ಒತ್ತೆಯಾಳುಗಳ ಪೈಕಿ ಕೆಲವರನ್ನು ಪರ್ವತ ಪ್ರದೇಶಕ್ಕೆ ಕರೆದೊಯ್ದಿದೆ. ತಮ್ಮ ಬೇಡಿಕೆ ಈಡೇರಿಕೆಗೆ 24 ಗಂಟೆಗಳ ಸಮಯ ಕೊಟ್ಟಿದೆ. ಬದುಕುವ ಆಸೆ ಇದ್ರೆ ಬಲೂಚ್‌ನಿಂದ ದೂರ ಇರಿ ಎಂದು ಚೀನಾ ಮತ್ತು ಪಾಕ್‌ಗೆ ಬಿಎಲ್‌ಎ ನೇರ ವಾರ್ನಿಂಗ್ ಕೊಟ್ಟಿದೆ. ಇದು ಪರ್ವತ ಪ್ರದೇಶವಾದ ಕಾರಣ ಸೇನಾ ಕಾರ್ಯಚರಣೆ ಜಟಿಲವಾಗಿದೆ. ಪ್ರತ್ಯೇಕತಾವಾದಿಗಳು ಚಿಕ್ಕ ಚಿಕ್ಕ ಗುಂಪುಗಳಾಗಿ ಬೇರ್ಪಟ್ಟಿರೋದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ರೈಲು ಹೈಜಾಕ್ ಆದ ಸ್ಥಳಕ್ಕೆ 200ಕ್ಕೂ ಹೆಚ್ಚು ಶವಪೆಟ್ಟಿಗೆಗಳನ್ನು ಸರ್ಕಾರ ರವಾನಿಸಿದೆ. ಈ ನಡುವೆ ಉಗ್ರರು 150ಕ್ಕೂ ಹೆಚ್ಚು ಪಾಕಿಸ್ತಾನದ ಸೈನಿಕರನ್ನ ಕೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕಾರ್ಯ: ರಾಜ್ಯಪಾಲರಿಗೆ ಬಿಜೆಪಿ ದೂರು