ಬೆಂಗಳೂರು: ಚುನಾವಣಾ ಸಮಯದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಒಬ್ಬೊಬ್ಬ ಶಾಸಕನಿಗೂ ಬಿಜೆಪಿಯವರು 50 ಕೋಟಿ ಆಫರ್ ಮಾಡುತ್ತಿದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು (BJP) ಭ್ರಷ್ಟಾಚಾರದ ಪಿತಾಮಹರು. ಆಪರೇಷನ್ ಕಮಲ ಶುರುಮಾಡಿದವರು. ಒಬ್ಬೊಬ್ಬ ಎಂಎಲ್‍ಎಗೆ 50 ಕೋಟಿ ಆಫರ್ ಮಾಡ್ತಾರೆ. ನಾವೇ ಎಲೆಕ್ಷನ್ ಮಾಡಿಕೊಳ್ಳುತ್ತೇವೆ ಬನ್ನಿ ಅಂತಾರೆ. ಯಾವ ಹಣ ಇದು, ಬ್ಲಾಕ್ ಮನಿ ಅಲ್ವ ಇದು ಎಂದು ಸಿಎಂ ಪ್ರಶ್ನಿಸಿದರು.
Advertisement
Advertisement
ರಾಜಕೀಯ ಪಕ್ಷಗಳ ಕತ್ತು ಹಿಸುಕುವ ಕೆಲಸ ಮಾಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯ, ಜನಾಭಿಪ್ರಾಯ, ಸಂವಿಧಾನಕ್ಕೆ ವಿರುದ್ಧವಾದ ನಡೆ. ಚುನಾವಣಾ ಸಂದರ್ಭದಲ್ಲಿ ಈ ರೀತಿ ಮಾಡಿದರೆ ಹೇಗೆ…?, ಬಿಜೆಪಿಯವ್ರಿಗೆ ಸೋಲಿನ ಭೀತಿ ಶುರುವಾಗಿದೆ, ಭೀತಿಯಿಂದ ರಾಜಕೀಯ ಪಕ್ಷಗಳ ನಿಷ್ಕ್ರೀಯಗೊಳಿಸುವ ಕೆಲಸ. ಬಿಜೆಪಿ ಖಾತೆಗೆ ಎಷ್ಟು ಹಣ ಬಂದಿದೆ, ಅವರ ಖಾತೆಯನ್ನೂ ಸೀಜ್ ಮಾಡಬೇಕಲ್ವ. ಶ್ರೀಮಂತರೆಲ್ಲಾ ವಿಪಕ್ಷಗಳಲ್ಲೇ ಇದ್ದಾರಾ, ಬಿಜೆಪಿಯಲ್ಲಿ ಯಾರೂ ಇಲ್ವ ಎಂದು ಮರುಪ್ರಶ್ನೆ ಹಾಕಿದರು. ಇದನ್ನೂ ಓದಿ: ಜೈಲಿನಲ್ಲಿರಲಿ, ಹೊರಗಿರಲಿ ನನ್ನ ಜೀವನ ದೇಶಕ್ಕೆ ಸಮರ್ಪಿತ: ಕೇಜ್ರಿವಾಲ್
Advertisement
Advertisement
ಜನತೆಯ ಅಭಿಪ್ರಾಯಕ್ಕೆ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಈ ರೀತಿ ಮಾಡಿದ್ರೆ ಒಪ್ಪಲು ಸಾಧ್ಯವಿಲ್ಲ. ಅವರಿಗೆ ಸೋಲುವ ಭೀತಿ ಶುರುವಾಗಿದೆ. ಸೋಲಿನ ಭೀತಿಯಿಂದ ಪಕ್ಷದ ಖಾತೆಗಳನ್ನ ಸ್ಥಗಿತಮಾಡಿದ್ದಾರೆ. ಬಿಜೆಪಿಯವರಿಗೂ ಫಂಡ್ ಬಂದಿದೆ, ಅವರ ಖಾತೆಗೆಳನ್ನ ಯಾಕೆ ಸ್ಥಗಿತ ಮಾಡಿಲ್ಲ. ಇಡಿ, ಐಟಿ ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ಮಾಡುತ್ತವೆ. ಸಂಸದೀಯ ವ್ಯವಸ್ಥೆಯನ್ನು ಬಿಜೆಪಿ ನಾಶ ಮಾಡುತ್ತಿದೆ. ಭಾವನಾತ್ಮಕ ವಿಚಾರಗಳನ್ನು ಎಷ್ಟು ದಿನ ಹೇಳಲು ಸಾಧ್ಯ? ಎಂದರು.
ಸಿಎಎ, ರಾಮಮಂದಿರ ಎಷ್ಟು ಸರಿ ಹೇಳಲು ಸಾಧ್ಯ?. ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಾಗ ಭಾರತ ಮತದಾರರು ತಕ್ಕ ಶಾಸ್ತಿ, ಪಾಠ ಕಲಿಸುತ್ತಾರೆ. ಈ ಬಾರಿ ತಕ್ಕ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ರಾಜ್ಯದಲ್ಲಿ 20 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಇಡಿ, ಐಟಿ, ಚುನಾವಣೆ ಆಯೋಗ ಸರ್ಕಾರ ಹೇಳಿದಂಗೆ ಮಾಡುವ ರೀತಿಯಲ್ಲಿ ಮಾಡಿದ್ದಾರೆ. ಖಾತೆಗಳನ್ನ ಸ್ಥಗಿತ ಮಾಡಿರುವ ವಿಚಾರದಲ್ಲಿ ಚುನಾವಣೆ ಆಯೋಗ ಮಧ್ಯಪ್ರವೇಶ ಮಾಡಬೇಕು. ಮಧ್ಯಪ್ರವೇಶ ಮಾಡಿ ಮರಳಿಸಿ ಕೊಡಬೇಕು ಎಂದು ಸಿದ್ದರಾಮಯ್ಯ ಕಿಡಿಕಾರಿದರು.