50 ಸಾವಿರದ ಗಡಿ ದಾಟಿದ ಕೊರೊನಾಗೆ ಬಲಿಯಾದವರ ಸಂಖ್ಯೆ

Public TV
1 Min Read
Corona 10

-ದೇಶದಲ್ಲಿ ಒಂದೇ ದಿನ 57,981 ಪ್ರಕರಣ

ನವದೆಹಲಿ: ದೇಶದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 50 ಸಾವಿರದ ಗಡಿ ದಾಟಿದೆ. ನಿನ್ನೆ ಒಂದೇ ದಿನ 941 ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 50,921ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 57,981 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 26,47,663ಕ್ಕೆ ಏರಿಕೆ ಕಂಡಿದೆ.

ದೇಶದಲ್ಲಿ 19,19,842 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 6,76,900 ಸಕ್ರಿಯ ಪ್ರಕರಣಗಳಿವೆ. ಆಗಸ್ಟ್ 16ರಂದು 7,31,697 ಜನರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಇನ್ನು ಇದುವರೆಗೂ 3,00,41,400 ಜನರು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ವಿಶ್ವದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಬ್ರೆಜಿಲ್ ಮೊದಲ ಎರಡು ಸ್ಥಾನಗಳಲ್ಲಿವೆ. ರಷ್ಯಾ, ಸೌಥ್ ಅಫ್ರಿಕಾ ಮತ್ತು ಪೆರು ಕ್ರಮವಾಗಿ 4,5 ಮತ್ತು 6ನೇ ಸ್ಥಾನಗಳಲ್ಲಿವೆ.

Share This Article
Leave a Comment

Leave a Reply

Your email address will not be published. Required fields are marked *