ಉತ್ತರ ಕನ್ನಡ: ಜಿಲ್ಲೆಯ ಕಾರವಾರ ನಗರದ ಬೈತಖೋಲ್ ಸಮೀಪದ ಲೇಡಿ ಬೀಚ್‍ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರ ಬಲೆಗೆ ಬರೋಬ್ಬರಿ ಅರ್ಧ ಕ್ವಿಂಟಾಲ್ ತೂಕದ ಆಕಳ ಮೂಗಿನ ತೊರ್ಕೆ ಮೀನು ಬಿದ್ದಿದೆ.
ಸಣ್ಣಪುಟ್ಟ ಮೀನು ಹಿಡಿಯಲು ಹಾಕಿದ್ದ ಬಲೆಗೆ ಇಷ್ಟೊಂದು ದೊಡ್ಡ ಪ್ರಮಾಣದ ಮೀನು ಬಿದ್ದಿರುವುದು ಮೀನುಗಾರರ ಅಚ್ಚರಿಗೂ ಕಾರಣವಾಗಿದೆ. ಇದನ್ನು ಉದ್ದ ತಲೆಯ ಹಕ್ಕಿ ತೊರ್ಕೆ ಅಥವಾ ಆಕಳ ಮೂಗಿನ ತೊರ್ಕೆ ಎಂದು ಕರೆಯುವ ಈ ಮೀನು ಶಾರ್ಕ್ ಜಾತಿಗೆ ಸೇರಿದೆ.
Advertisement
Advertisement
ಹಿಂದೂ ಮಹಾಸಾಗರದಲ್ಲಿ ಹೆಚ್ಚಾಗಿ ಕಂಡುಬರುವ ಈ ಮೀನು ಎರಡು ಮೀಟರ್ ವರೆಗೂ ಬೆಳೆಯುತ್ತದೆ. ಇದರ ಬಾಲ ಉದ್ದವಾಗಿ ಎರಡು ಮುಳ್ಳುಗಳನ್ನು ಹೊಂದಿರುತ್ತದೆ. ಗರಿಷ್ಠ 16 ವರ್ಷಗಳ ಕಾಲ ಬದುಕುವ ಈ ಮೀನು ಅಳವಿನಂಚಿನಲ್ಲಿರುವ ಪ್ರಬೇಧಗಳಲ್ಲಿ ಒಂದಾಗಿದೆ.