– ಬೌಲಿಂಗ್ನಲ್ಲಿ ಅಬ್ಬರಿಸಿದ ದುಬಾರಿ ಆಟಗಾರ ಪ್ಯಾಟ್ ಕಮ್ಮಿನ್ಸ್
ಅಬುಧಾಬಿ: ಇಂದು ನಡೆದ ಸೂಪರ್ ಶನಿವಾರದ ಮೊದಲನೇ ಮ್ಯಾಚಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ 59 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತನ್ನ ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸಿಕೊಂಡಿದೆ.
ಇಂದು ನಡೆದ ಐಪಿಎಲ್-2020ಯ 42 ಮ್ಯಾಚಿನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಮೊದಲು ಎಡವಿದರು, ಮಧ್ಯದಲ್ಲಿ ನರೈನ್ ಮತ್ತು ರಾಣಾ ಅವರ ಉತ್ತಮ ಜೊತೆಯಾಟದಿಂದ ನಿಗದಿತ 20 ಓವರಿನಲ್ಲಿ 194 ರನ್ ಸಿಡಿಸಿದರು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ನಿಗದಿತ 20 ಓವರಿನಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್ ಸೇರಿಸಿ ಸೋಲನ್ನು ಒಪ್ಪಿಕೊಂಡಿತು.
Advertisement
Advertisement
ಚಕ್ರವರ್ತಿ ಸೂಪರ್ ಬೌಲಿಂಗ್
ಇಂದಿನ ಪಂದ್ಯದಲ್ಲಿ ಸೂಪರ್ ಆಗಿ ಬೌಲ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿ ಕೇವಲ 20 ರನ್ ನೀಡಿ ಬರೋಬ್ಬರಿ ಐದು ವಿಕೆಟ್ ಪಡೆದರು. ಈ ಮೂಲಕ ಐಪಿಎಲ್-2020ಯಲ್ಲಿ ಐದು ವಿಕೆಟ್ ಕಿತ್ತ ಮೊದಲ ಬೌಲರ್ ಎಂಬ ಖ್ಯಾತಿ ಪಡೆದರು. ಇವರಿಗೆ ಉತ್ತಮ ಸಾಥ್ ನೀಡಿದ ದುಬಾರಿ ಆಟಗಾರ ಪ್ಯಾಟ್ ಕಮ್ಮಿನ್ಸ್ ನಾಲ್ಕು ಓವರ್ ಓವರ್ ಬೌಲ್ ಮಾಡಿ ಮೂರು ವಿಕೆಟ್ ಪಡೆದು 17 ರನ್ ನೀಡಿ ಮಿಂಚಿದರು.
Advertisement
That's that from Match 42. @KKRiders win by 59 runs.#Dream11IPL pic.twitter.com/QfctclPHdn
— IndianPremierLeague (@IPL) October 24, 2020
Advertisement
195 ರನ್ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೋಲ್ಕತಾ ನೈಟ್ ರೈಡರ್ಸ್ ವೇಗಿ ಪ್ಯಾಟ್ ಕಮ್ಮಿನ್ಸ್ ಆರಂಭಿಕ ಆಘಾತ ನೀಡಿದರು. ಇನ್ನಿಂಗ್ಸ್ ಮೊದಲ ಬಾಲಿನಲ್ಲಿಯೇ ಅಜಿಂಕ್ಯ ರಹಾನೆ ಅವರನ್ನು ಔಟ್ ಮಾಡಿದರು. ಈ ಮೂಲಕ ರಹಾನೆ ಮತ್ತೆ ನಿರಾಸೆ ಮೂಡಿಸಿ ಶೂನ್ಯ ಸುತ್ತಿ ಹೊರನೆಡದರು. ಬಳಿಕ ಶಿಖರ್ ಧವನ್ ಅವರನ್ನು 2ನೇ ಓವರ್ ಮೂರನೇ ಬಾಲಿನಲ್ಲಿ ಪ್ಯಾಟ್ ಕಮ್ಮಿನ್ಸ್ ಅವರೇ ಬೌಲ್ಡ್ ಮಾಡಿದರು.
Varun Chakravarthy has FIVE! Axar goes for the big slog, misses it and is clean bowled!#Dream11IPL pic.twitter.com/MjrFmLmsHE
— IndianPremierLeague (@IPL) October 24, 2020
ಆ ನಂತರ ಒಂದಾದ ನಾಯಕ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ತಾಳ್ಮೆಯ ಆಟವಾಡಿ ತಂಡಕ್ಕಾಗಿ ಮೊತ್ತವನ್ನು ಪೇರಿಸುತ್ತಾ ಬಂದರು. ಹೀಗಾಗಿ ಪವರ್ ಪ್ಲೇ ಅಂತ್ಯದ ವೇಳೆಗೆ ಡೆಲ್ಲಿ ಎರಡು ವಿಕೆಟ್ ಕಳೆದುಕೊಂಡು ಕೇವಲ 36 ರನ್ ಪೇರಿಸಿತು. ನಂತರ 11ನೇ ಓವರ್ ಎರಡನೇ ಬಾಲಿನಲ್ಲಿ 33 ಬಾಲಿಗೆ 27 ರನ್ ಸಿಡಿಸಿ ಆಡುತ್ತಿದ್ದ ರಿಷಭ್ ಪಂತ್ ಔಟ್ ಆದರು. ನಂತರ ಬಂದ ಶಿಮ್ರಾನ್ ಹೆಟ್ಮಿಯರ್ ಅವರು ಕೂಡ ದೊಡ್ಡ ಹೊಡೆತಕ್ಕೆ ಕೈ ಹಾಕಿ ಬೌಂಡರಿ ಗೆರೆಯ ಬಳಿ ಕ್ಯಾಚ್ ಕೊಟ್ಟರು.
Two in Two for Chakravarthy. Iyer departs in a similar fashion. #DelhiCapitals in all sorts of trouble here.#Dream11IPL pic.twitter.com/GKmzgY1PyA
— IndianPremierLeague (@IPL) October 24, 2020
ಆರಂಭದಿಂದಲೂ ಉತ್ತಮವಾಗಿ ಬ್ಯಾಟ್ ಬೀಸಿದ್ದ ನಾಯಕ ಶ್ರೇಯಸ್ ಐಯ್ಯರ್ 13ನೇ ಓವರ್ ಮೂರನೇ ಬಾಲಿನಲ್ಲಿ 38 ಬಾಲಿಗೆ 47 ರನ್ ಸಿಡಿಸಿ ಔಟ್ ಆದರು. ಈ ಮೂಲಕ 14ನೇ ಓವರ್ ಮುಕ್ತಾಯಕ್ಕೆ ಡೆಲ್ಲಿ ತಂಡ ಐದು ವಿಕೆಟ್ ಕಳೆದುಕೊಂಡು 98 ರನ್ ಗಳಿಸಿತು. ನಂತರ ಅಬ್ಬರಿಸುವ ಸೂಚನೆ ನೀಡಿದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಮಾರ್ಕಸ್ ಸ್ಟೊಯಿನಿಸ್ ಅವರು ಕೂಡ ವರುಣ್ ಚಕ್ರವರ್ತಿ ಅವರ ಬೌಲಿಂಗ್ ಮೋಡಿಗೆ ಔಟ್ ಆಗಿ ಪೆವಿಲಿಯನ್ ಸೇರಿದರು.
Chakravarthy with another wicket. Hetmyer looks to go big, but finds Tripathi in the deep.
Live – https://t.co/Th4ECIKPB2 #Dream11IPL pic.twitter.com/qKTXzDPnBp
— IndianPremierLeague (@IPL) October 24, 2020
ಅದೇ ಓವರಿನಲ್ಲಿ ಆಕ್ಸರ್ ಪಟೇಲ್ ಅವರು ಕೂಡ ವರುಣ್ ಚಕ್ರವರ್ತಿ ಅವರಿಗೆ ಬೌಲ್ಡ್ ಆದರು. ನಂತರ 18ನೇ ಓವರಿನಲ್ಲಿ ಕಗಿಸೊ ರಬಾಡಾ ಅವರು 9 ರನ್ ಗಳಿಸಿ ಪ್ಯಾಟ್ ಕಮ್ಮಿನ್ಸ್ ಅವರಿಗೆ ಔಟ್ ಆದರು. ಇವರ ನಂತರ ತುಷಾರ್ ದೇಶಪಾಂಡೆ ಅವರು ಔಟ್ ಆದರು. ಈ ಮೂಲಕ ಡೆಲ್ಲಿ 20 ಓವರ್ ಆಡಿ 9 ವಿಕೆಟ್ ಕಳೆದುಕೊಂಡು ಕೇವಲ 135 ರನ್ ಪೇರಿಸಿ ಸೋತಿತು.