ನವದೆಹಲಿ: ಕಳೆದ ಐದು ವರ್ಷದಲ್ಲಿ ಹುತಾತ್ಮರಾದ ಯೋಧರ ಸಂಖ್ಯೆಯನ್ನು ಕೇಂದ್ರ ಸರ್ಕಾರ ಮಂಗಳವಾರ ಸದನಕ್ಕೆ ತಿಳಿಸಿತು. 2019ರಲ್ಲಿಯೇ ಅತಿ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ.
ಕೇಂದ್ರ ಗೃಹಇಲಾಖೆ ರಾಜ್ಯಮಂತ್ರಿ ನಿತ್ಯಾನಂದ್ ರಾಯ್ ಸದನಕ್ಕೆ ಮಾಹಿತಿ ನೀಡಿದರು. 2016g ರಿಂದ 2020ರ ಅವಧಿಯಲ್ಲಿ ಒಟ್ಟು 355 ಯೋಧರು ಹುತಾತ್ಮರಾಗಿದ್ದಾರೆ. ಸಿಆರ್ ಪಿಎಫ್ 209, ಅಸ್ಸಾಂ ರೈಫಲ್ಸ್ 37, ಬಿಎಸ್ಎಫ್ 78, ಐಟಿಬಿಪಿ 16, ಎಸ್ಎಸ್ಬಿ 8 ಮತ್ತು ಸಿಐಎಸ್ಎಫ್ 7 ಯೋಧರು ವೀರ ಮರಣ ಹೊಂದಿದ್ದಾರೆ. ಇದನ್ನೂ ಓದಿ: 75 ವರ್ಷ, 75 ಗ್ರಾಮ, 75 ಗಂಟೆ – ಆಗಸ್ಟ್ 15ಕ್ಕೆ ಸಂಸದರಿಗೆ ಮೋದಿ ಟಾಸ್ಕ್
Advertisement
ಅಸ್ಸಾಂ ಮತ್ತು ಮಿಜೊರಾಂ ಗಡಿ ವಿವಾದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೇಂದ್ರ ಸರ್ಕಾರ ಲಿಖಿತ ರೂಪದಲ್ಲಿ ಸದನಕ್ಕೆ ನೀಡಿತು. ಅಸ್ಸಾಂ ಮತ್ತು ಮಿಜೊರಾಂ ರೀತಿಯಲ್ಲಿ ಆರು ರಾಜ್ಯಗಳಲ್ಲಿ ಗಡಿ ವಿವಾದಗಳಿವೆ. ಇನ್ನು ಕೆಲವು ರಾಜ್ಯಗಳಲ್ಲಿ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಾದಗಳು ಇತ್ಯರ್ಥವಾಗಬೇಕಿದೆ. ಇದನ್ನೂ ಓದಿ: ನಾನು ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ಮಾತ್ರ ಕೆಲಸ ಮಾಡ್ತೇನೆ: ವಿಜಯೇಂದ್ರ
Advertisement
The number of Central Armed Police Forces (CAPF) and Assam Rifles who have sacrificed their lives for the nation during the last five years are as under: MoS MHA Nityanand Rai pic.twitter.com/9J4bUTW7S4
— ANI (@ANI) July 27, 2021
Advertisement
ಸೋಮವಾರ ಅಸ್ಸಾಂ ಮತ್ತು ಮಿಜೊರಾಂ ರಾಜ್ಯಗಳ ನಡುವೆ ಸಂಬಂಧಿಸಿದ ಗಡಿ ಜಗಳ ಹಿಂಸಾಚಾರಕ್ಕೆ ತಿರುಗಿತ್ತು. ಎರಡೂ ರಾಜ್ಯಗಳ ಪೊಲೀಸರು ಮತ್ತು ಜನರು ಪರಸ್ಪರ ಹೊಡೆದಾಟಕ್ಕೆ ಮುಂದಾಗಿ, ಗುಂಡಿನ ದಾಳಿ ಸಹ ನಡೆದಿತ್ತು. ಈ ಗುಂಡಿನ ದಾಳಿಯಲ್ಲಿ ಒಟ್ಟು ಆರು ಪೊಲೀಸರು ಹುತಾತ್ಮರಾಗಿದ್ದಾರೆ. ಇದನ್ನೂ ಓದಿ: 20 ತಿಂಗಳಾದ್ರೂ ಜಾರಿಗೆ ಬರದ ಸಿಎಎ – ಇನ್ನೂ 6 ತಿಂಗಳು ಸಮಯ ಕೇಳಿದ ಕೇಂದ್ರ