ಪಾಟ್ನಾ: 17 ವರ್ಷದ ಬಾಲಕನ ಮೇಲೆ ಐವರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗಾಜಿಯಾಬಾದ್ ನ ಮೋದಿನಗರದಲ್ಲಿ ನಡೆದಿದೆ.
ಈ ಘಟನೆ ಗುರುವಾರದಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಾಲಕ 12ನೇ ತರಗತಿಯಲ್ಲಿ ಓದುತ್ತಿದ್ದು, ದುಷ್ಕರ್ಮಿಗಳು ಹಲ್ಲೆ ನಡೆಸಿ ಬಾಲಕನ ಕೈಯಲ್ಲಿದ್ದ 1,600 ರೂ. ಹಣ ದರೋಡೆ ಮಾಡಿದ್ದಾರೆ.
ಘಟನೆ ವಿವರ: ಗುರುವಾರ ರಿಪೇರಿ ಅಂಗಡಿಯಲ್ಲಿ ತನ್ನ ಸೈಕಲ್ ಬಿಟ್ಟು ಬಾಲಕ ಮನೆಗೆ ವಾಪಸ್ಸಾಗುತ್ತಿದ್ದನು. ಈ ವೇಳೆ ಐವರು ಯುವಕರು ಬಾಲಕನನ್ನು ಎಳೆದು ಅಂಗಡಿಯೊಳಗೆ ಕೂಡಿ ಹಾಕಿದ್ದಾರೆ. ಅಲ್ಲದೇ ಆತನ ಗುದದ್ವಾರದೊಳಗೆ ಕಬ್ಬಿಣದ ರಾಡ್ ತುರುಕಿದ್ದಾರೆ. ಇಷ್ಟು ಮಾತ್ರವಲ್ಲದೇ ಇದನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ ಅಂತ ಹಿರಿಯ ಪೊಲೀಸ್ ಅಧಿಕಾರಿ ವೈಭವ್ ಕೃಷ್ಣ ಹೇಳಿದ್ದಾರೆ.
ಜಾತಿ ವಿಚಾರಕ್ಕಾಗಿ ಈ ಹಿಂದೆಯೂ ಆರೋಪಿಗಳ ತನ್ನ ಮಗನಿಗೆ ಕಿರುಕುಳ ನೀಡುತ್ತಿದ್ದರು ಎಂಬುದಾಗಿ ಬಾಲಕನ ತಂದೆ ಆರೋಪಿಸಿದ್ದಾರೆ. ಅಲ್ಲದೇ ಆರೋಪಿಗಳಲ್ಲಿ ಓರ್ವ ಪೊಲೀಸರೊಬ್ಬರ ಮಗನಾಗಿದ್ದಾನೆ ಅಂತ ಹೇಳಿದ್ದಾರೆ.
ಸದ್ಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.