ನವದೆಹಲಿ: ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ಮಖಬೆಲೆಯ ಹಳೆಯ ನೋಟುಗಳನ್ನು ರದ್ದುಗೊಳಿಸಿ ಇಂದಿಗೆ (ನವೆಂಬರ್ 8) 5 ವರ್ಷ ಪೂರ್ಣಗೊಂಡಿದೆ.
Advertisement
ಈ 5 ವರ್ಷಗಳಲ್ಲಿ ಡಿಜಿಡಲ್ ಪಾವತಿ ಜೊತೆಗೆ ನೋಟುಗಳ ಚಲಾವಣೆಯಲ್ಲೂ ಹಿಂದಿಗಿಂತ ಏರಿಕೆಯಾಗಿದೆ ಎಂದು ಅಂಕಿ ಅಂಶಗಳು ಹೇಳಿವೆ. ಇದನ್ನೂ ಓದಿ: ಆತ್ಮಹತ್ಯೆ ಮಾಡ್ಕೊಂಡ ಅಪ್ಪು ಅಭಿಮಾನಿ ಮನೆಗೆ ರಾಘಣ್ಣ ಭೇಟಿ, ಸಾಂತ್ವನ
Advertisement
Advertisement
ಕಪ್ಪು ಹಣ ನಿಗ್ರಹ ಮತ್ತು ಡಿಜಿಟಲ್ ಪಾವತಿ ಹೆಚ್ಚಿಸಲು 1000 ಮತ್ತು 500 ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿ ಸರ್ಕಾರ ಆದೇಶಿಸಿತ್ತು. ಆದರೆ ನಂತರದ ವರ್ಷಗಳಲ್ಲಿ ಡಿಜಿಟಲ್ ಪೇಮೆಂಟ್ ಹೆಚ್ಚಳವಾದರೂ, ನೋಟುಗಳ ಚಲಾವಣೆ ಕಡಿಮೆಯಾಗಿಲ್ಲ. ಇದನ್ನೂ ಓದಿ: ರಾಜ್ಯದ ಎಲ್ಲ ಥಿಯೇಟರ್‌ಗಳಲ್ಲಿ ಏಕಕಾಲಕ್ಕೆ ಅಪ್ಪುಗೆ ಶ್ರದ್ಧಾಂಜಲಿ
Advertisement
RBI ದತ್ತಾಂಶಗಳ ಪ್ರಕಾರ 2016ರ ನವೆಂಬರ್ 4ರ ವೇಳೆಗೆ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳ ಮೌಲ್ಯ 17.74 ಲಕ್ಷ ಕೋಟಿ ರೂಪಾಯಿಗಳಾಗಿದ್ದರೆ, 2021ರ ಅಕ್ಟೋಬರ್ 29 ರಂದು ಆ ಪ್ರಮಾಣ 29.17 ಲಕ್ಷ ಕೋಟಿ ರೂಪಾಯಿಗಳಾಗಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲೇ ಚಲಾವಣೆ ನೋಟುಗಳ ಮೌಲ್ಯ 2.48 ಲಕ್ಷ ಕೋಟಿ ರೂಪಾಯಿ ನಷ್ಟು ಹೆಚ್ಚಳವಾಗಿದೆ. ಅಂದರೆ ಒಂದು ವರ್ಷದಲ್ಲಿ ನೋಟುಗಳ ಮೌಲ್ಯವು ಶೇ.16.8 ರಷ್ಟು ಏರಿಕೆಯಾಗಿದೆ.