ಮಂಗಳೂರು: ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಸಿಎಂ ಪರಿಹಾರ ನಿಧಿಗೆ ಮಂಗಳೂರಿನ 5 ವರ್ಷದ ಬಾಲಕನೊಬ್ಬ ತಾನು ಕೂಡಿಟ್ಟಿದ್ದ ಪಾಕೆಟ್ ಮನಿಯನ್ನು ದೇಣಿಗೆಯಾಗಿ ನೀಡಿದ್ದಾನೆ.
ಅತಾ-ವುರ್-ರೆಹ್ಮಾನ್ ಎಂಬ ಬಾಲಕ ತನ್ನ ತಂದೆ ಹಾಗೂ ಮನೆಯವರು ನೀಡುವ ಪಾಕೆಟ್ ಮನಿಯನ್ನು ಜೋಪಾನವಾಗಿ ಹುಂಡಿಯಲ್ಲಿ ಹಾಕಿದ್ದ. ಈ ಮೂರು ದಿನಗಳಿಂದ ಕೊರೊನಾ ವಿರುದ್ಧದ ಹೋರಾಟಕ್ಕೆ ಸರ್ಕಾರ ಎಲ್ಲರಿಂದ ದೇಣಿಗೆ ಕೇಳುತ್ತಿರುವುದನ್ನು ಅರಿತ ಬಾಲಕ ತಾನೂ ತನ್ನ ಪಾಕೆಟ್ ಮನಿಯನ್ನು ದೇಣಿಗೆ ನೀಡಿದ್ದಾನೆ.
Advertisement
Advertisement
ಇದನ್ನು ಪ್ರೋತ್ಸಾಹಿಸಿದ ಬಾಲಕನ ಪೋಷಕರು ಜಿಲ್ಲಾಧಿಕಾರಿ ಕಚೇರಿಗೆ ಬಂದು ಡಿಸಿ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಈ ಹಣವನ್ನು ಸಲ್ಲಿಸಿದ್ದಾರೆ. ಭಟ್ಕಳ ಮೂಲದವರಾದ ಅತಾ-ವುರ್-ರೆಹ್ಮಾನ್ ಕುಟುಂಬದವರು ಈಗ ಮಂಗಳೂರಿನ ಫಳ್ನೀರ್ ನಲ್ಲಿ ನೆಲೆಸಿದ್ದಾರೆ.
Advertisement
ಅತಾ-ವುರ್-ರೆಹ್ಮಾನ್ ಮಂಗಳೂರಿನ ಯನೆಪೊಯ ಮೊಂಟೆಸ್ಸರಿ ಶಾಲೆಯಲ್ಲಿ ಕಲಿಯುತ್ತಿದ್ದಾನೆ. ಇದೀಗ ಈ ಪುಟ್ಟ ಬಾಲಕನ ಈ ಕಳಕಳಿಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.