ಕಾರವಾರ: ಐದು ವರ್ಷದ ಪೋರನೊಬ್ಬ ಮರದ ಕಾಲುಗಳನ್ನು ಕಟ್ಟಿಕೊಂಡು ನಡೆಯುವ ಮೂಲಕ ಏಷಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆದಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೈಗಾ ಉದ್ಯೋಗಿ ಸುಮಂತ್ ಹೆಬಲೇಕರ್ ಪುತ್ರ ಶ್ಯಾಮ್ ದಾಖಲೆ ಬರೆದ ಪೋರ. ಕಳೆದ ನಾಲ್ಕು ವರ್ಷಗಳಿಂದ ಕೈಗಾ ರೂರಲ್ ಸ್ಕೇಟಿಂಗ್ ಕ್ಲಬ್ ನ ತರಬೇತುದಾರ ದೀಪಕ್ ರವರ ಕೈಯಲ್ಲಿ ಪಳಗಿದ್ದಾನೆ. 43 ಇಂಚಿನ ಎತ್ತರ ಹಾಗೂ 72 ಇಂಚಿನ ಎತ್ತರದ ಮರದಕಾಲನ್ನು ಕಟ್ಟಿಕೊಂಡು ಮುಮ್ಮುಖವಾಗಿ 2.8 ಕಿಲೋಮೀಟರ್ 15 ನಿಮಿಷದಲ್ಲಿ ಕ್ರಮಿಸಿ ವಿಶ್ವದಾಖಲೆ ಮಾಡಿದ್ದಾನೆ. ಅಲ್ಲದೇ ಬ್ಯಾಕ್ ವರ್ಡ್ ಸ್ಕೇಟಿಂಗ್ ನಲ್ಲಿ ಐದು ನಿಮಿಷದಲ್ಲಿ 650 ಮೀಟರ್ ಕ್ರಮಿಸುವ ಮೂಲಕ ಏಷಿಯನ್ ಬುಕ್ ಆಫ್ ರೆಕಾರ್ಡ್ ಮಾಡುವ ಮೂಲಕ ದೇಶಕ್ಕೆ ಹೆಸರು ತಂದಿದ್ದಾನೆ.
Advertisement
Advertisement
ತನ್ನ ಸಹೋದರಿ ಸ್ಕೇಟಿಂಗ್ ಮಾಡುವುದನ್ನು ನೋಡಿ ತಾನೂ ಕಲಿಯಬೇಕೆಂಬ ಛಲಕ್ಕೆ ಬಿದ್ದ ಶ್ಯಾಮ್, ತಾನು ಒಂದು ವರ್ಷದವನಿರುವಾಗಲೇ ಸ್ಕೇಟಿಂಗ್ ಮಾಡತೊಡಗಿದ. ಸತತ ನಾಲ್ಕು ವರ್ಷದಿಂದ ಕಾಲಿಗೆ ಮರಗಾಲು ಕಟ್ಟಿಕೊಂಡು ನಿರಂತರ ಅಭ್ಯಾಸ ಮಾಡಿ ಇಂದು ವಿಶ್ವದಾಖಲೆ ಮಾಡಿ ತೋರಿಸಿದ್ದಾನೆ.
Advertisement