5ರ ಬಾಲಕಿ ಮೇಲೆ ಅತ್ಯಾಚಾರವೆಸಗಿ ಮರ್ಮಾಂಗಕ್ಕೆ 16 ಸೆಂ.ಮೀ ಉದ್ದದ ಮರದ ತುಂಡನ್ನ ಹಾಕ್ದ!

Public TV
2 Min Read
640485 girlrape

ಚಂಡಿಗಢ್: 5 ವರ್ಷದ ಬಾಲಕಿಯ ಮೇಲೆ ತನ್ನ ಕಾಮ ತೀರಿಸಿಕೊಂಡ ಬಳಿಕ ಆಕೆಯನ್ನು ಬರ್ಬರವಾಗಿ ಕೊಂದಿರುವ ಆಘಾತಕಾರಿ ಘಟನೆ ಹರಿಯಾಣದ ಹಿಸಾರ್ನ ಉಕ್ಲಾನಾ ಗ್ರಾಮದಲ್ಲಿ ನಡೆದಿದೆ.

ಸಂತ್ರಸ್ತೆಯ ಮೇಲೆ ಕಾಮುಕ ಅತ್ಯಾಚಾರ ಎಸಗಿ ನಂತರ ಆಕೆಯ ಮರ್ಮಾಂಗಕ್ಕೆ 16 ಸೆ.ಮೀ ಉದ್ದದ ಮರದ ತುಂಡನ್ನು ತುರುಕಿ ಕೊಂದು ಪರಾರಿಯಾಗಿದ್ದಾನೆ. ಆದ್ದರಿಂದ ಬಾಲಕಿ ನರಳಿ ನರಳಿ ಮೃತಪಟ್ಟಿದ್ದಾಳೆ  ಎಂದು ವರದಿಯಾಗಿದೆ.

GNAG RAPE

ಈ ಪ್ರಕರಣದ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದು, ವಿಚಾರಣೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‍ಐಟಿ) ಕೂಡ ಆಯೋಜಿಸಲಾಗಿದೆ. ಬಾಲಕಿಯನ್ನು ರಾತ್ರಿ ಮನೆಯಿಂದ ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯ ಖಾಸಗಿ ಭಾಗಕ್ಕೆ ಮರದ ತುಂಡನ್ನ ಹಾಕಿ ವಿಕೃತ ಮೆರೆದಿದ್ದು, ಆಕೆ ಸತ್ತ ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಅಷ್ಟೇ ಅಲ್ಲದೇ ಆಕೆಯ ತೋಳುಗಳು, ಸೊಂಟ ಮತ್ತು ಮೂಗಿನ ಬೇಲೆ ಏಟುಗಳಾಗಿವೆ. ಕುತ್ತಿಗೆಯ ಮೇಲೆ ಕೂಡ ರಕ್ತಸ್ರಾವವಾಗುತ್ತಿತ್ತು ಎಂದು ಮೊದಲ ಹಂತದ ತನಿಖೆಯ ವೇಳೆ ತಿಳಿದು ಬಂದಿದೆ.

ಸಂತ್ರಸ್ತೆ ಮರ್ಮಾಂಗಕ್ಕೆ ಮರದ ತುಂಡನ್ನ ಹಾಕಿದ್ದಕ್ಕೆ ಚಿತ್ರಹಿಂಸೆ ಅನುಭವಿಸಿ ಮೃತಪಟ್ಟಿದ್ದಾಳೆ. ಮರದ ತುಂಡು ಸುಮಾರು 16 ಸೆ,ಮೀ ಇದ್ದು, ಅದು ಆಕೆಯ ದೇಹದೊಳಗೆ ಬಲವಾಗಿ ಹೋಗಿ ಗರ್ಭಕೋಶ ಮತ್ತು ಕರುಳಿಗೆ ತೀವ್ರವಾಗಿ ಗಾಯಗಳಾಗಿದ್ದವು. ಆದ್ದರಿಂದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಡಾ. ರೀತು ಗುಪ್ತಾ ತಿಳಿಸಿದ್ದಾರೆ.

DQp82cNVAAATJHm

ಸಂತ್ರಸ್ತೆಯ ಕುಟುಂಬದವರು ಮುಂಜಾನೆ ಮಗಳು ಕಾಣಿಸುತ್ತಿಲ್ಲ ಎಂದು ಹುಡುಕಲು ಪ್ರಾರಂಭಿಸಿದ್ದಾರೆ. ನಂತರ ಗ್ರಾಮಸ್ಥರು ಅವರ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಕೊಳದಲ್ಲಿ ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ತಿಳಿಸಿದ್ದಾರೆ. ಅಂತೆಯೇ ಅವರು ಅಲ್ಲಿ ಹೋಗಿ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಕುಟುಂಬಸ್ಥರು ಆರೋಪಿಯನ್ನು ಬಂಧಿಸುವರೆಗೂ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಗ್ರಾಮಸ್ಥರು ಕೂಡ ಅಂಗಡಿಗಳನ್ನು ತೆರೆಯದೆ ಪ್ರತಿಭಟನೆ ಮಾಡುತ್ತಿದ್ದಾರೆ.

ಎಫ್‍ಐಆರ್ ದಾಖಲಾಗಿದೆ. ಈ ಪ್ರಕರಣದ ಸಂಪೂರ್ಣ ವಿಚಾರಣೆಗಾಗಿ ಎಸ್‍ಐಟಿಯನ್ನ ನೇಮಿಸಲಾಗಿದೆ. ಆದರೆ ಈ ಕೇಸ್ ಗೆ ಸಂಬಂಧ ಪಟ್ಟಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಹಿಸಾರ್ನನ ಡಿಎಸ್‍ಪಿ ಜಿತೇಂದ್ರ ಕುಮಾರ್ ಹೇಳಿದ್ದಾರೆ.

DQp8 JzVAAAVGvL 1

haryana rape 3

rape 1 6

rape1

rape 3

rape 1

rape 1 1

Share This Article
Leave a Comment

Leave a Reply

Your email address will not be published. Required fields are marked *