ಬೆಂಗಳೂರು: ಪೋಷಕರು ನಿಮ್ಮ ಮಕ್ಕಳ ಬಗ್ಗೆ ಸ್ವಲ್ಪ ಎಚ್ಚರವಾಗಿರಿ. ಯಾಕೆಂದರೆ ನಗರದಲ್ಲಿ ಮಕ್ಕಳ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಸೋಮವಾರ ಬೆಂಗಳೂರಿನ ಪೀಣ್ಯ ಎರಡನೇ ಹಂತದ ಸಿದ್ಧಾರ್ಥ ನಗರದಲ್ಲಿ ಬಾಲಕನನ್ನು ಕಿಡ್ನಾಪ್ ಮಾಡಿದ್ದಾರೆ.
5 ವರ್ಷದ ಸಾಗರ್ ಕಿಡ್ನಾಪ್ ಆದ ಬಾಲಕ. ಅನಾಮಿಕರು ಕೆಂಪು ಬಣ್ಣದ ಕಾರಿನಲ್ಲಿ ಬಂದು ಬಾಲಕನನ್ನು ಹತ್ತಿಸಿಕೊಂಡು ಹೋಗಿದ್ದಾರೆ. ಈ ದೃಶ್ಯಾವಳಿಗಳು ಪಕ್ಕದಲ್ಲಿರುವ ಫ್ಯಾಕ್ಟರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಲಬುರಗಿ ಜಿಲ್ಲೆಯಿಂದ ಹೊಟ್ಟೆ ಪಾಡಿಗಾಗಿ ಅಂತ ಕಳೆದ ದಿನಗಳಿಂದ ಬೆಂಗಳೂರಿಗೆ ಬಂದಿದ್ದರು. ಚಿಂದಿ ಆಯುವ ಕೆಲಸ ಮಾಡಿ ಮಕ್ಕಳನ್ನ ನೋಡಿಕೊಳ್ಳುತ್ತಿದ್ದರು. ಆದರೆ ಮೊನ್ನೆ ಸಾಗರ್ ತಂದೆ, ತಾಯಿ ಕೆಲಸಕ್ಕೆ ಹೋದಾಗ ಕಿಡ್ನಾಪ್ ಮಾಡಿದ್ದಾರೆ.
ಸಾಗರ್ ನಾಪತ್ತೆಯಿಂದ ತಾಯಿ ಕಳೆದ ಎರಡು ದಿನಗಳಿಂದ ಊಟವಿಲ್ಲದೇ ಅಸ್ವಸ್ಥಗೊಂಡಿದ್ದಾರೆ. ವ್ಯಕ್ತಿಯೊಬ್ಬ ಈ ಏರಿಯಾಕ್ಕೆ ಪಾನಿಪುರಿ ಮಾರಲು ದಿನ ಬರುತ್ತಿದ್ದನು. ಅದೇ ವ್ಯಕ್ತಿ ಮಂಗಳವಾರ ಪಾನಿ ಪೂರಿ ಮಾರಾಟ ಮಾಡಲು ಬಂದಿಲ್ಲ. ಹೀಗಾಗಿ ಇದೇ ವ್ಯಕ್ತಿ ಕಿಡ್ನಾಪ್ ಮಾಡಿರಬಹುದು ಅಂತ ಪೆÇೀಷಕರು ಹಾಗೂ ಅಲ್ಲಿನ ನಿವಾಸಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಈ ಪ್ರಕರಣ ದಾಖಲಿಸಿಕೊಂಡ ರಾಜಗೋಪಾಲ ನಗರ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv