Connect with us

ವೀಡಿಯೋ: ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಬಾಲಕನನ್ನು ಬಿಟ್ಟು ಮತ್ತೊಬ್ಬ ಬಾಲಕನ ಅಪಹರಣ

ವೀಡಿಯೋ: ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಬಾಲಕನನ್ನು ಬಿಟ್ಟು ಮತ್ತೊಬ್ಬ ಬಾಲಕನ ಅಪಹರಣ

ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಬಂದ ಅಪ್ತಾಪ್ತ ಬಾಲಕನನ್ನು ಆಟೋ ಡ್ರೈವರ್ ವೇಷದಲ್ಲಿ ಬಂದ ವ್ಯಕ್ತಿ, ಮತ್ತೊಂದು ಮಗುವನ್ನು ಬಳಸಿ ಅಪಹರಿಸಿಕೊಂಡು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಾರ್ಚ್ 21 ರಂದು ಕಿಮ್ಸ್ ಹೊರರೋಗಿಗಳ ವಿಭಾಗದಲ್ಲಿ ಈ ಘಟನೆ ನಡೆದಿದೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರದ 5 ವರ್ಷದ ಬಾಲಕ ಮೆಹಬೂಬ್ ಸಾಬ್ ಕಣಕೆ ಎಂಬಾತನೇ ಅಪಹರಣಕ್ಕೊಳಗಾಗಿರುವ ಬಾಲಕ.

ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಕನನ್ನ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದ್ರೆ ಚೀಟಿ ಮಾಡಿಸುವಾಗ ಬಾಲಕ ಆಟವಾಡುತ್ತಾ ಆಸ್ಪತ್ರೆಯಿಂದ ಹೊರಗಡೆ ಬಂದಿದ್ದಾನೆ. ಆಗ ಅಟೋ ಚಾಲಕನ ವೇಷದಲ್ಲಿ ಬಂದ ವ್ಯಕ್ತಿ ಮತ್ತೊಬ್ಬ ಬಾಲಕನನ್ನು ಕರೆತಂದು ಮೆಹಬೂಬ್ ಸಾಬ್‍ನನ್ನು ಅಪಹರಿಸಿದ್ದಾನೆ.

ಮೊದಲು ಆಟೋ ಚಾಲಕನ ಜೊತೆ ಬಂದ ಬಾಲಕ ಮೆಹಬೂಬ್ ಸಾಬ್ ಜೊತೆಗೆ ಆಟವಾಡಿದ್ದಾನೆ. ಬಳಿಕ ಹೊರ ರೋಗಿಗಳ ವಿಭಾಗದಿಂದ ಮೆಹಬೂಬ್ ಸಾಬ್‍ನ ಕೈ ಹಿಡಿದುಕೊಂಡು ಹೊರಗಡೆ ಕರೆದುಕೊಂಡು ಬಂದಿದ್ದಾನೆ. ಬಳಿಕೆ ಅದೇ ಆಟೋ ಚಾಲಕ ಮಗುವನ್ನು ಕರೆದುಕೊಂಡು ಹೋಗಿದ್ದಾನೆ. ಬಾಲಕ ಮೆಹಬೂಬ್‍ನನ್ನ ಆಟೋ ಚಾಲಕನ ವೇಷಧಾರಿ ಕರೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ವಿದ್ಯಾನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೆÇಲೀಸರು ಬಾಲಕನಿಗಾಗಿ ಹಡುಕಾಟ ಆರಂಭಿಸಿದ್ದಾರೆ.

ಈ ಘಟನೆಗೆ ಕಿಮ್ಸ್ ಆಸ್ಪತ್ರೆಯ ಭದ್ರತೆಯ ಕೊರತೆಯೇ ಕಾರಣ ಎಂದು ಆರೋಪಿಸಲಾಗುತ್ತಿದೆ. ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ನರ್ಸ್ ಸೋಗಿನಲ್ಲಿ ಬಂದ ಮಹಿಳೆಯೊಬ್ಬಳು ನವಜಾತ ಶಿಶುವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಳು. ಇದೀಗ 5 ವರ್ಷದ ಬಾಲಕನನ್ನು ಅಪಹರಿಸಿಕೊಂಡು ಹೋಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

https://www.youtube.com/watch?v=zgFE8ASevDI

Advertisement
Advertisement