ಬೆಂಗಳೂರು: ಐದು ವರ್ಷದ ಮಕ್ಕಳು ಸ್ಪಷ್ಟವಾಗಿ ಮಾತಾಡೋದು ನಡೆಯೋದು ಕಷ್ಟ. ಆದರೆ ನಗರದ ಐದು ವರ್ಷದ ಪೋರನೊಬ್ಬ 25 ಲಕ್ಷ ರೂ. ಗಳಿಸುವ ಮೂಲಕ ಲಕ್ಷಾಧಿಪತಿಯಾಗಿದ್ದಾನೆ.
ನಗರದ ಯಲಹಂಕ ನಿವಾಸಿಗಳಾದ ದಿವ್ಯಾ ಹಾಗೂ ರಾಜಶೇಖರನ್ ದಂಪತಿಯ ಪುತ್ರ ವಿರಾಟ್ ಕರಣ್ ಇದೀಗ ಲಕ್ಷಾಧಿಪತಿ. ವಿರಾಟ್ ಕುಂಚ ಹಿಡಿದು ಆಡುತ್ತಿದ್ದಾಗ ಪೋಷಕರು ಚಿತ್ರ ಬಿಡಿಸಲು ಪ್ರೋತ್ಸಾಹಿಸಿ ಕ್ಯಾನ್ವಾಸ್ ಮೇಲೆ ಚಿತ್ರ ಬಿಡಿಸಲು ಕಲಿಸಿದ್ದಾರೆ. ಹೀಗೆ ಕಲಿತ ವಿರಾಟ್ ಸುಮಾರು 150 ಕಲಾಕೃತಿಗಳನ್ನು ರಚಿಸಿದ್ದು, ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾನೆ. ಇವನ ಒಂದೊಂದು ಪೇಂಟಿಂಗ್ಸ್ ಗಳು 15 ಸಾವಿರಕ್ಕೂ ಅಧಿಕ ಮೊತ್ತದಲ್ಲಿ ಮಾರಾಟವಾಗಿವೆ.
Advertisement
Advertisement
ದುಬೈ, ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ಹಾಗೂ ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಎಲ್ಲೆಡೆ ವಿರಾಟ್ ಪೇಂಟಿಂಗ್ ಪ್ರದರ್ಶನಗೊಂಡಿದ್ದು, ಭರ್ಜರಿ ವ್ಯಾಪಾರವಾಗುತ್ತಿವೆ. ಇವೆಲ್ಲವೂ ಅಬ್ ಸ್ಟ್ರ್ಯಾಕ್ಟ್ ಪೇಂಟಿಂಗ್ಸ್ ಗಳಾಗಿವೆ. ಈ ಪೇಂಟಿಂಗ್ ಮೇಲೆ ಕ್ರಾಫ್ಟ್ ವರ್ಕ್ ಕೂಡ ಮಾಡಿ ಎಲ್ಲರ ಮನ ಗೆದ್ದಿದ್ದಾನೆ.
Advertisement
ಕಾರ್ ರೇಸ್ ಟ್ರಾಕ್, ಫ್ಲವರ್ಸ್ ಸೇರಿದಂತೆ ತನ್ನ ಕಲ್ಪನೆಯಲ್ಲಿ ಬರುವ ಅನೇಕ ಕಲಾಕೃತಿಗಳನ್ನು ರಚಿಸಿದ್ದಾನೆ. ಸಾವಿರ ಪದಗಳಲ್ಲಿ ವರ್ಣಿಸಲಾಗದ್ದನ್ನು, ಈ ಚಿತ್ರಗಳ ಮೂಲಕ ಈ ಪುಟಾಣಿ ಹೇಳುತ್ತಿದ್ದಾನೆ. ಇದುವರೆಗೂ ವಿರಾಟ್ 150 ಪೇಂಟಿಂಗ್ಸ್ ಗಳಿಂದ 25 ಲಕ್ಷ ರೂಪಾಯಿ ಗಳಿಸಿದ್ದಾನೆ.