ಆಟವಾಡುತ್ತಿದ್ದ 5ರ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಬೆಂಕಿ ಹಚ್ಚಿ ಸುಟ್ಟ ಅಪ್ರಾಪ್ತ!

Public TV
2 Min Read
rape fire

ಹೈದರಾಬಾದ್: 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಅಮಾನವೀಯ ಘಟನೆ ತೆಲಂಗಾಣದ ಕೀಲಾಥಟ್ಟಾಪಾರೈ ಗ್ರಾಮದಲ್ಲಿ ನಡೆದಿದೆ.

5 ವರ್ಷದ ನಿಶಾ ಮೃತ ದುರ್ದೈವಿ. ನಿಶಾ ಕೆಲ ದಿನಗಳ ಹಿಂದೆ ಕೀಲಾಥಟ್ಟಾಪಾರೈ ಗ್ರಾಮದ ಸ್ಥಳೀಯ ಅಂಗನವಾಡಿ ಶಾಲೆಗೆ 1ನೇ ತರಗತಿಗೆ ಸೇರಿದ್ದಳು. ಈಕೆಯ ಪೋಷಕರು ದೈನಂದಿನ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಈ ದಂಪತಿಯ ಕಿರಿಯ ಮಗು ನಿಶಾ. ಪ್ರತಿ ದಿನವೂ 2 ಗಂಟೆಗೆ ಶಾಲೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಳು. ಆಕೆಯ ಸಹೋದರ 5 ಗಂಟೆಗೆ ಶಾಲೆ ಮುಗಿಸಿ ಮನೆಗೆ ಹಿಂದಿರುಗುವರೆಗೂ ಮನೆಯಲ್ಲಿ ಒಬ್ಬಳೇ ಇರುತ್ತಿದ್ದಳು.

gang rape

ಪೋಷಕರು ಮನೆಯಿಂದ ಸುಮಾರು 20 ಕಿ.ಮೀ ದೂರದಲ್ಲಿ ಕೆಲಸ ಮಾಡುತ್ತಿದ್ದು, ಮನೆಗೆ ಹಿಂದಿರುಗಿ ಬರುವಷ್ಟರಲ್ಲಿ ಸಂಜೆ ಆಗುತ್ತಿತ್ತು. ಅಂತೆಯೇ ಬುಧವಾರ ಮಧ್ಯಾಹ್ನ ಶಾಲೆಯಿಂದ ಬಂದು ನಿಶಾ ನೆರೆಹೊರೆಯ ಸ್ನೇಹಿತರ ಜೊತೆ ಆಡುತ್ತಿದ್ದಳು. ಈ ವೇಳೆ ಪಕ್ಕದ ಮನೆಯ 14 ವರ್ಷದ ದೀಪಕ್ ಬಂದು ನಿಶಾಳನ್ನು ಆಕೆಯ ಮನೆಯೊಳಗೆ ಕರೆದೊಕೊಂಡು ಹೋಗಿದ್ದಾನೆ. ಈ ಸಂದರ್ಭದಲ್ಲಿ 7 ವರ್ಷದ ಪ್ರಶಾಂತ್‍ನನ್ನು ಕೂಡ ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ.

ಮನೆಯೊಳಗೆ ಹೋದ ಮೇಲೆ ದೀಪಕ್ ನಿಶಾಳಿಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಇದನ್ನು ನೋಡಿದ ಪ್ರಶಾಂತ್ ಭಯಪಟ್ಟು ಓಡಿ ಹೋಗಿ ಈ ಬಗ್ಗೆ ನಿಶಾಳ ಸಹೋದರನಿಗೆ ತಿಳಿಸಿದ್ದಾನೆ. ಇದನ್ನು ಗಮನಿಸಿದ ದೀಪಕ್ ನಿಶಾಳಿಗೆ ಬೆಂಕಿ ಹಚ್ಚಿ, ಬಳಿಕ ಮನೆಗೆ ಬೆಂಕಿ ಬಿದ್ದಿದೆ ಎಂದು ಕೂಗಿಕೊಂಡಿದ್ದಾನೆ. ನೆರೆಹೊರೆಯವರು ಬಂದು ನೋಡುವಷ್ಟರಲ್ಲಿ ನಿಶಾ ಸುಟ್ಟು ಭಸ್ಮವಾಗಿದ್ದಳು.

Child rape

ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಲು ಆರಂಭಿಸಿದ್ದಾರೆ. ಪ್ರಮುಖ ಸಾಕ್ಷಿಯಾದ ಪ್ರಶಾಂತ್ ನನ್ನು ಪ್ರಶ್ನಿಸಿದ್ದಾರೆ. ನಂತರ ಆತನ ಹೇಳಿಕೆಯ ಆಧಾರದ ಮೇಲೆ ದೀಪಕ್ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ದೀಪಕ್ ನಿಶಾಳನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ದೀಪಕ್ ನಿಶಾಳ ಕತ್ತುನ್ನು ಒಂದು ಟವೆಲ್‍ನಿಂದ ಸುತ್ತಿದ್ದು, ತನ್ನ ಅಪರಾಧವನ್ನು ಮರೆಮಾಡಲು ಅವಳ ಮುಖ ಮತ್ತು ಕುತ್ತಿಗೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ಮನೆಗೆ ಬೆಂಕಿಗೆ ಹೊತ್ತಿಕೊಂಡಿದೆ ಎಂದು ಕೂಗಿಕೊಂಡಿದ್ದಾನೆ ಅಂತಾ ಪುದುಕೋಟೈ ಇನ್ಸ್ ಪೆಕ್ಟರ್ ಸಂತಾ ಕುಮಾರಿ ಹೇಳಿದ್ದಾರೆ.

ಪೊಲೀಸರು ಸಾಕ್ಷ್ಯಾಧಾರದ ಮೇಲೆ ದೀಪಕ್ ವಿರುದ್ಧ ಕೊಲೆ ಕೇಸ್ ದಾಖಲಿಸಿಕೊಂಡಿದ್ದು, ರಿಮ್ಯಾಂಡ್ ಹೋಮ್ ಗೆ ಒಪ್ಪಿಸಿದ್ದಾರೆ.

rape 6

fire 1

640485 girlrape

 

Share This Article
Leave a Comment

Leave a Reply

Your email address will not be published. Required fields are marked *