ಘಜಿಯಾಬಾದ್: ನೆರೆ ರಾಜ್ಯಗಳಿಂದ ಒಂದಕ್ಕಿಂತ ಹೆಚ್ಚು ಮದ್ಯದ ಬಾಟಲಿ ತೆಗೆದುಕೊಂಡು ಬಂದರೆ, 5 ವರ್ಷ ಜೈಲು ಹಾಗೂ 5 ಸಾವಿರ ರೂ. ದಂಡ ವಿಧಿಸುವ ಹೊಸ ನಿಯಮವನ್ನು ಉತ್ತರ ಪ್ರದೇಶದ ಸರ್ಕಾರ ಜಾರಿಗೊಳಿಸಿದೆ.
ಈ ನಿಯಮವನ್ನು ಮುರಿದು ಒಂದಕ್ಕಿಂತ ಹೆಚ್ಚು ಬಾಟಲಿ ಮದ್ಯ ತೆಗೆದುಕೊಂಡು ಬಂದರೆ ಇದನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಯುಪಿ ನೆರೆಯ ರಾಜ್ಯದಲ್ಲಿ ಮದ್ಯದ ಬೆಲೆ ಕಡಿಮೆ ಇದರುವುರಿಂದ ಮಾರಾಟಗಾರರು ಹೆಚ್ಚು ಇತರೇ ರಾಜ್ಯಗಳಿಂದ ಮದ್ಯ ರವಾನೆ ಮಾಡಿಕೊಳ್ಳುತ್ತಿದ್ದರು. ಈ ಕ್ರಮಕ್ಕೆ ತಡೆ ನೀಡಲು ರಾಜ್ಯ ಸರ್ಕಾರ ಈ ಹೊಸ ನಿಯಮಗಳನ್ನು ರೂಪಿಸಿದೆ.
Advertisement
Advertisement
ಈ ಕುರಿತು ಮಾಹಿತಿ ನೀಡಿರುವ ಅಬಕಾರಿ ಅಧಿಕಾರಿಯೊಬ್ಬರು 2017ರಲ್ಲೇ ಈ ಕುರಿತು ನಿಯಮ ರೂಪಿಸಲಾಗಿತ್ತು. ಒಬ್ಬ ವ್ಯಕ್ತಿಗೆ ಸೀಲ್ ಮಾಡಿದ ಒಂದು ಬಾಟಲ್ ಮದ್ಯವನ್ನು ಮಾತ್ರ ನೆರೆಯ ರಾಜ್ಯದಿಂದ ತೆಗೆದುಕೊಂಡು ಬರಲು ಅನುಮತಿ ನೀಡಲಾಗಿದೆ. ತೆರೆದ ಸಿಲ್ ಬಂದಿರುವ ಬಾಟಲ್‍ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಮಾಹಿತಿ ತಿಳಿಸಿದ್ದಾರೆ.
Advertisement
ಮಾಧ್ಯಹ್ನದ ಬಳಿಕವೇ ಲಿಕ್ಕರ್ ಶಾಪ್ ಓಪನ್:
ಮದ್ಯಪಾನ ಸೇವನೆ ಮಾಡುವವರ ಸಂಖ್ಯೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಉತ್ತರ ಪ್ರದೇಶ ಸರ್ಕಾರ ಮಧ್ಯಾಹ್ನದ ಬಳಿಕವೇ ಮದ್ಯದ ಅಂಗಡಿ ತೆರೆಯಲು ಅನುಮತಿ ನೀಡಿದ್ದು, ರಾತ್ರಿ 10 ಗಂಟೆ ವೇಳೆಗೆ ಬಂದ್ ಮಾಡಲು ಸೂಚಿಸಿದೆ.