ಚಿಕ್ಕಮಗಳೂರು: ದೇವಸ್ಥಾನದ ಹುಂಡಿಯ 100 ಮುಖ ಬೆಲೆಯ ಲಕ್ಷಗಟ್ಟಲೆ ನೋಟುಗಳ ಬದಲಾಗಿ 500 ಹಾಗೂ 2000 ಮುಖ ಬೆಲೆಯ ನೋಟುಗಳನ್ನು ಕೊಟ್ಟು ಒಂದು ಲಕ್ಷಕ್ಕೆ 30% ಹೆಚ್ಚು ಕೊಡುವುದಾಗಿ ನಂಬಿಸಿ ವಂಚಿಸಿದ ಗ್ಯಾಂಗ್ ನನ್ನು ಜಿಲ್ಲೆಯ ಕಡೂರು ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ಮೂಲದ ಕೃಪಾ 30% ಆಸೆಗೆ ಬಿದ್ದು ಮೋಸ ಹೋದವರು. 100 ರೂ. ಮುಖಬೆಲೆ ದೇವಸ್ಥಾನದ ಹುಂಡಿಯಲ್ಲಿ ಲಕ್ಷಗಟ್ಟಲೆ ಇದೆ. 500-2000 ಮುಖಬೆಲೆಯ ನೋಟು ಕೊಟ್ಟರೆ ಒಂದು ಲಕ್ಷಕ್ಕೆ 1,30,000 ರೂ. ಹಣ ಕೊಡುತ್ತಾರೆ ಎಂದು ಕೃಪಾ ಎಂಬವರಿಗೆ ಸ್ನೇಹಿತ ನಾರಾಯಣ ರೈ ಎಂಬುವರು ಹೇಳಿದ್ದರು. ಅದಕ್ಕೆ ಕೃಪಾ ಅಡ್ರೆಸ್ ಹಾಗೂ ಫೋನ್ ನಂಬರ್ ಪಡೆದು ಒಮ್ಮೆ ಜಿಲ್ಲೆಯ ಕಡೂರಿಗೆ ಬಂದು ಮಾತನಾಡಿಕೊಂಡು ಹೋಗಿದ್ದರು.
Advertisement
Advertisement
ಬಳಿಕ 500-2000 ಮುಖಬೆಲೆಯ 10 ಲಕ್ಷ ಹಣದೊಂದಿಗೆ ಕಡೂರು ಪಟ್ಟಣದ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದ ಬಳಿ ಬಂದಿದ್ದರು. ಆಗ ಅಲ್ಲಿಗೆ ಬಂದ ಖಾವಿ ತೊಟ್ಟಿದ್ದ ಕಪಟ ಸನ್ಯಾಸಿ ಮಹೇಶ್ ಎಂಬುವರು 10 ಲಕ್ಷ ಹಣ ಪಡೆದುಕೊಂಡು, 13 ಲಕ್ಷ ಇದೆ ಎಂದು ಹೇಳಿ ಕೃಪಾ ಅವರಿಗೆ ಹಣದ ಬ್ಯಾಗ್ ನೀಡಿದ್ದರು. ಕಡೂರು ಪಟ್ಟಣವಾದ್ದರಿಂದ ಇಲ್ಲಿ ಎಣಿಸಬೇಡಿ. ಪಬ್ಲಿಕ್ ಪ್ಲೇಸ್, ಜನ ಓಡಾಡುತ್ತಿರುತ್ತಾರೆ. ಕಾರಿನಲ್ಲಿ ಹೋಗುತ್ತ ಎಣಿಸಿಕೊಳ್ಳಿ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ಪತಿ ಪತ್ನಿಯ ಹುಟ್ಟುಹಬ್ಬ ಮರೆತರೆ ಜೈಲೇ ಗತಿ!
Advertisement
ಕೃಪಾ ಕಾರಿನಲ್ಲಿ ಕೂತು ಹಣದ ಬ್ಯಾಗ್ ಓಪನ್ ಮಾಡಿದ್ದಾರೆ. ಅದರಲ್ಲಿ ಪ್ರತಿಯೊಂದು ಕಂತೆಯ ಮೇಲೆ ಮಾತ್ರ 100 ರೂಪಾಯಿ ನೋಟು ಇದ್ದು, ಉಳಿದದ್ದೆಲ್ಲಾ ವೈಟ್ ಪೇಪರ್ ಇತ್ತು. ಕೃಪಾ ಅವರು ಫೋನ್ ಮಾಡಿದರೆ ಸ್ವಾಮೀಜಿ ನಂಬರ್ ಸ್ವಿಚ್ ಆಫ್. ಇಡೀ ಕಡೂರು ಪಟ್ಟಣ ಹುಡುಕಿದರು ಸ್ವಾಮೀಜಿಯ ಸುಳಿವು ಸಿಗಲಿಲ್ಲ. ಮನನೊಂದು ಊರಿಗೆ ವಾಪಸ್ಸ್ ಹೋಗಿದ್ದರು. ಬಳಿಕ ಕಡೂರಿಗೆ ಬಂದು ಕಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.
Advertisement
ಪ್ರಕರಣ ದಾಖಲಿಸಿಕೊಂಡು ಕಡೂರು ಪೊಲೀಸರು 48 ಗಂಟೆಯೊಳಗೆ ಕಳ್ಳ ಖಾವಿ ಸ್ವಾಮೀಜಿ ಮಹೇಶ್ ಸೇರಿದಂತೆ ಆರು ಜನರಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 5.10 ಲಕ್ಷ ನಗದು, ಒಂದು ಓಮಿನಿ ಕಾರು, 1 ಸ್ಕೂಟಿ ಹಾಗೂ 4 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಜನವರಿಯಿಂದ ಮಕ್ಕಳಿಗೂ ಸಿಗಲಿದೆ ಲಸಿಕೆ?
ಈ ನಕಲಿ ಸ್ವಾಮೀಜಿಯ ಗುಂಪನ್ನು ಪತ್ತೆ ಹಚ್ಚುವಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್, ಪಿಎಸೈ ಎನ್.ಕೆ.ರಮ್ಯ, ಪ್ರೊಬೇಷನ್ ಪಿಎಸೈ ಆದರ್ಶ್, ನವೀನ್, ಎ.ಎಸ್.ಐ. ವೇದಮೂರ್ತಿ ಸೇರಿದಂತೆ ಪೇದೆಗಳಾದ ಕೃಷ್ಣಮೂರ್ತಿ, ಉಮೇಶ್, ರಾಜಪ್ಪ, ಮಧುಕುಮಾರ್, ಓಂಕಾರ, ಶಿವರಾಜ್ ಅವರನ್ನು ಎಸ್ ಪಿ ಅಕ್ಷಯ್ ಶ್ಲಾಘಿಸಿದ್ದಾರೆ. ಇನ್ನೂ ಹಣ ಕಳೆದುಕೊಂಡಿದ್ದ ಕೃಪಾ ಹಣ ಸಿಗುವ ನಿರೀಕ್ಷೆಯಲ್ಲಿದ್ದಾರೆ.