ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾಜಕಾಲುವೆ ಒತ್ತುವರಿ ವಿರುದ್ಧ ನಡೆಯುತ್ತಿರುವ ಆಪರೇಷನ್ ಬುಲ್ಡೋಜರ್ (Operation Buldozer) ಕಾರ್ಯಾಚರಣೆ ಮುಂದುವರಿದಿದ್ದು, ಇಂದು ಮಾರತ್‍ಹಳ್ಳಿಯ ಪಾಪರೆಡ್ಡಿ ಲೇಔಟ್ (Papareddy Layout) ನಲ್ಲಿ ಕಾರ್ಯಾಚರಣೆ ನಡೆಸಲಾಯಿತು.
Advertisement
ಐದು ಅಂತಸ್ತಿನ ಕಟ್ಟಡವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಉರುಳಿಸಿದೆ. ಅಕ್ಕಪಕ್ಕದ ಮನೆಗಳಿಗೆ ತೊಂದರೆ ಆಗದಂತೆ ಈ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆ ಆರಂಭದ ವೇಳೆ ಪಾಪರೆಡ್ಡಿ ಲೇಔಟ್ ನಲ್ಲಿ ಒತ್ತುವರಿ ತೆರವಿಗೆ ವಿರೋಧ ವ್ಯಕ್ತವಾಯಿತು. ಮಾರ್ಕಿಂಗ್ ಬಿಟ್ಟು ಕಾಂಪೌಂಡ್ ಒಡೆದಿದ್ದೀರಿ. ಮಾರ್ಕಿಂಗ್ ಇಲ್ಲದೇ ಇದ್ದರೂ ತೆರವು ಮಾಡುತ್ತಾರೆ ಎಂದು ಆಕ್ರೋಶ ಹೊರ ಹಾಕಿದ ಪ್ರಸಂಗವೂ ನಡೆಯಿತು.
Advertisement
Advertisement
ನಾವು ರಾಜಕಾಲುವೆ (Rajakaluve) ಒತ್ತುವರಿ ಮಾಡಿಲ್ಲ. ಮನೆಯಲ್ಲಿ ಯಾರೂ ಇಲ್ಲ, ಎಲ್ಲಾ ಕೆಲಸಕ್ಕೆ ಹೋಗಿದ್ದಾರೆ. ಒಂದು ದಿನ ಟೈಂ ಕೊಡಿ. ಯಾವುದೇ ಕಾರಣಕ್ಕೂ ಒತ್ತುವರಿ ತೆರವು ನಿಲ್ಲಿಸಲ್ಲ. ಇಲ್ಲೇ ಕಾಯ್ತೀವಿ ಬಾಡಿಗೆಗೆ ಇರುವವರನ್ನ ಕರೆಯಿರಿ. ಮನೆಯಲ್ಲಿನ ಎಲ್ಲಾ ವಸ್ತುಗಳನ್ನ ತಗೆದುಕೊಳ್ಳಿ ಎಂದು ಸೂಚನೆ ನೀಡಲಾಯಿತು. ಇದನ್ನೂ ಓದಿ: ಯಡಿಯೂರಪ್ಪ ಅವರೇ ವಯಸ್ಸು ಆಗೋಯ್ತಲ್ಲ ನಮ್ಗೆ: ಎದುರಿಗೆ ಸಿಕ್ಕ ಸಿದ್ದರಾಮಯ್ಯರಿಂದ ಜೋಕ್
Advertisement
ಬಳಿಕ ಐದು ಅಂತಸ್ತಿನ ಮನೆಯನ್ನ ತೆರವು ಮಾಡಲು ತಯಾರಿ ನಡೆಸಲಾಯಿತು. ಅಕ್ಕಪಕ್ಕ ಮನೆಗಳಿದ್ದರಿಂದ ತುಂಬಾ ಜಾಗರೂಕತೆಯಿಂದ ತೆರವಿಗೆ ಸಿದ್ಧತೆ ನಡೆಸಲಾಯಿತು. ಅಲ್ಲದೆ ಈ ವೇಳೆ ಅಧಿಕಾರಿಗಳು ವಿದ್ಯುತ್ ಕನೆಕ್ಷನ್ ತೆಗೆಸಿದರು. ಅಕ್ಕಪಕ್ಕ ಮನೆಗಳಿರುವ ಹಿನ್ನೆಲೆ ಜೆಸಿಬಿ ಬಳಕೆ ಮಾಡದೆ ಐದಂತಸ್ತಿನ ಬಿಲ್ಡಿಂಗ್ ಅನ್ನು ಅಧಿಕಾರಿಗಳು ತೆರವುಗೊಳಿಸಿದರು.