ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಗುಜರಾತ್ ಕಾಂಗ್ರೆಸ್ (Gujrt Congress) ಪಾಲಿಗೆ ಅಂದು ಡಿಕೆ ಶಿವಕುಮಾರ್ (DK Shivakumar) ಅವರೇ ಟ್ರಬಲ್ ಶೂಟರ್ ಆಗಿದ್ದರು. ಈಗ ರಾಜಸ್ಥಾನ ಕಾಂಗ್ರೆಸ್ ಪಾಲಿಗೆ ಡಿಕೆಶಿ ಮತ್ತೆ ಕಿಂಗ್ ಮೇಕರ್ ಆಗ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಹೌದು. ಅಂದು ಪಕ್ಷಕ್ಕಾಗಿ ರಿಸ್ಕ್ ತೆಗೆದುಕೊಂಡಿದ್ದ ಡಿಕೆಶಿ ಇಂದು ಪಕ್ಷಕ್ಕಾಗಿ ರಿಸ್ಕ್ ತೆಗೆದುಕೊಳ್ತಾರಾ..? ಅಂದು ರಾಜ್ಯಸಭೆ ಚುನಾವಣೆ ಗೆಲ್ಲುವ ಲೆಕ್ಕಾಚಾರ, ಇಂದು ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಲೆಕ್ಕಾಚಾರ. ಪಂಚರಾಜ್ಯ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು – ಇದು ಟುಡೇಸ್ ಚಾಣಕ್ಯ ಭವಿಷ್ಯ
ರಾಜಸ್ಥಾನದಲ್ಲಿ (Rajasthan) ಆಡಳಿತ ರೂಢ ಪಕ್ಷವಾಗಿ ಕಾಂಗ್ರೆಸ್ ಈಗ ಅಧಿಕಾರದಲ್ಲಿ ಇದೆ. ಆದರೆ ಚುನಾವಣಾ ಫಲಿತಾಂಶ ಅತಂತ್ರ ಅಥವಾ ಬೇರೆ ಯಾವುದೇ ಗೊಂದಲದ ಫಲಿತಾಂಶಕ್ಕೆ ಕಾರಣವಾದರೆ ಶಾಸಕರ ಶಿಫ್ಟ್ ಸಹಾ ನಡೆಯಬಹುದು ಎನ್ನಲಾಗುತ್ತಿದೆ. ಅಂತಹ ಪರಿಸ್ಥಿತಿ ಬಂದರೆ ಕಾಂಗ್ರೆಸ್ ಪಾಲಿಗೆ ಕರ್ನಾಟಕ ಸೇಫ್ ಎನ್ನಲಾಗ್ತಿದೆ. ಇದನ್ನೂ ಓದಿ: ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಆಟ
ಅಂದು ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಇದ್ರೂ ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಅವರಿಗೆ ಮಣೆ ಹಾಕಿತ್ತು. ಈಗಲೂ ಅಂಥದ್ದೇ ಪರಿಸ್ಥಿತಿ ಬಂದ್ರೆ ಡಿಕೆಶಿ ಸಹಾಯ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂದು ಕಾಂಗ್ರೆಸ್ ಹೈಕಮಾಂಡ್ ನೆರವಿಗೆ ಬಂದ ಡಿಕೆಶಿ ಐಟಿ ದಾಳಿ ಎದುರಿಸುವಂತಾಗಿತ್ತು. ಇಂದು ಐಟಿ, ಇಡಿ, ಸಿಬಿಐ ಸಂಕಷ್ಟ ಎದುರಿಸುತ್ತಿರುವ ಡಿಕೆಶಿ ಅನಿವಾರ್ಯವಾದ್ರೆ ರಾಜಸ್ಥಾನ ಕಾಂಗ್ರೆಸ್ ನೆರವಿಗೆ ಬರ್ತಾರಾ..? ಪಕ್ಷಕ್ಕಾಗಿ ಎಲ್ಲವನ್ನೂ ಮಾಡಿದೆ ಎನ್ನುತ್ತಿರುವ ಡಿಕೆಶಿ ಅದೇ ಪಕ್ಷಕ್ಕಾಗಿ ಇನ್ನೊಮ್ಮೆ ರಿಸ್ಕ್ ತೆಗೆದುಕೊಳ್ತಾರಾ ಅನ್ನೋದೆ ಸದ್ಯದ ಕುತೂಹಲವಾಗಿದೆ.