LatestLeading NewsMain PostNational

17 ರಾಜ್ಯಗಳಲ್ಲಿ ಬಿಜೆಪಿ, 2 ಕಡೆ ಕಾಂಗ್ರೆಸ್ – ಯಾವ ರಾಜ್ಯದಲ್ಲಿ ಯಾರಿಗೆ ಅಧಿಕಾರ?

Advertisements

ನವದೆಹಲಿ: ಪಂಚರಾಜ್ಯ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಮಣಿಪುರದಲ್ಲಿ ಬಿಜೆಪಿ ಜಯಗಳಿಸಿದೆ. ಈ ಮೂಲಕ ಒಟ್ಟಾರೆ ಬಿಜೆಪಿ ಮತ್ತು ಮೈತ್ರಿಕೂಟದೊಂದಿಗೆ ದೇಶದಲ್ಲಿ 17 ರಾಜ್ಯಗಳಲ್ಲಿ ಅಧಿಕಾರ ಪಡೆದಿದೆ.

ಪಂಜಾಬ್‍ನಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿದ್ದು, ಈ ಮೂಲಕ ಕಾಂಗ್ರೆಸ್ ಅಧಿಕಾರದಲ್ಲಿದ್ದ ಮತ್ತೊಂದು ರಾಜ್ಯವನ್ನು ಕಳೆದುಕೊಂಡಿದೆ.

ಬಿಜೆಪಿ
ಅರುಣಾಚಲ ಪ್ರದೇಶ, ಅಸ್ಸಾಂ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ತ್ರಿಪುರ, ಉತ್ತರಪ್ರದೇಶ, ಉತ್ತರಾಖಂಡದಲ್ಲಿ ಸಂಪೂರ್ಣ ಅಧಿಕಾರದಲ್ಲಿದೆ. ಇದನ್ನೂ ಓದಿ: ಯುಪಿಯಲ್ಲಿ ‘ಬುಲ್ಡೋಜರ್ ಬಾಬಾ’ ಅಬ್ಬರ – ಮೋದಿ, ಯೋಗಿ ಆರ್ಭಟಕ್ಕೆ ಧೂಳೀಪಟ

ಬಿಜೆಪಿ+
ಸಿಕ್ಕಿಂ, ಬಿಹಾರ, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ, ಗೋವಾದಲ್ಲಿ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಮೂಲಕ ಅಧಿಕಾರದಲ್ಲಿದೆ. ಒಟ್ಟಾರೆ 17 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ.

ಕಾಂಗ್ರೆಸ್
ರಾಜಸ್ಥಾನ, ಛತ್ತೀಸ್‍ಗಢದಲ್ಲಿ ಪೂರ್ಣ ಅಧಿಕಾರದಲ್ಲಿದ್ದರೆ ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಮೈತ್ರಿ ಮಾಡಿಕೊಂಡಿದೆ. ಇದನ್ನೂ ಓದಿ:  ಬುಲ್ಡೋಜರ್ ಮುಂದೆ ಯಾರು ಬರಲು ಸಾಧ್ಯವಿಲ್ಲ: ಹೇಮಾ ಮಾಲಿನಿ

ಪ್ರಾದೇಶಿಕ ಪಕ್ಷಗಳು
ಆಂಧ್ರ ಪ್ರದೇಶ, ಕೇರಳ, ಒಡಿಶಾ, ಪಂಜಾಬ್, ತೆಲಂಗಾಣ, ಪಶ್ಚಿಮ ಬಂಗಾಳ ಸೇರಿ ಒಟ್ಟು 8 ರಾಜ್ಯಗಳಲ್ಲಿ ಅಧಿಕಾರ ಹೊಂದಿದೆ.


BJP, Congress, other parties, state, New Delhi

Leave a Reply

Your email address will not be published.

Back to top button