– ದಾಳಿಯಾಗುತ್ತಿದ್ದಂತೆ ಜೆಡಿಎಸ್ ಮುಖಂಡ ಪರಾರಿ
ಬೆಂಗಳೂರು: ಕಾರ್ಪೋರೇಟರ್ ದಿವಾನ್ ಆಲಿ ಸಹೋದರನ ಮನೆಯಲ್ಲಿ 5 ಗನ್ 300 ಬುಲೆಟ್ ಪತ್ತೆಯಾಗಿದೆ. ಹತ್ಯೆಯಾದ ದಿವಾನ್ ಆಲಿ ಸಹೋದರ ಅಕ್ಬರ್ ಆಲಿ ಮನೆಯಲ್ಲಿ 9 ಎಂಎಂ ಗನ್ ಇದೀಗ ಪತ್ತೆಯಾಗಿದೆ.
ಅಕ್ಬರ್ ಆಲಿ ಜೆಡಿಎಸ್ ಮೈನಾರಿಟಿ ವಿಂಗ್ ಅಧ್ಯಕ್ಷನಾಗಿದ್ದು, ಜೆಡಿಎಸ್ ಮುಖಂಡ ವಿ.ಕೆ ಗೋಪಾಲ್ ಆಪ್ತನಾಗಿದ್ದಾನೆ. ಬನಶಂಕರಿಯ ಯಾರಾಬ್ ನಗರದಲ್ಲಿ ಕೇಂದ್ರ ಡಿಸಿಪಿ ಸ್ಕ್ವಾಡ್ ಕಾರ್ಯಾಚರಣೆ ನಡೆಸಿ ಗನ್ ವಶಪಡಿಸಿಕೊಂಡಿದೆ. 9ಎಂಎಂನ 5 ಗನ್ ಜೊತೆ 300 ಕ್ಕೂ ಹೆಚ್ಚು ಬುಲೆಟ್ ಹಾಗೂ ಮನೆಯಲ್ಲಿದ್ದ ಚಿನ್ನದ ಸರಗಳನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ.
ನಟೋರಿಯಸ್ ಚೈನ್ ಸ್ನ್ಯಾಚರ್ ಆಗಿರುವ ಅಪ್ರೋಜ್ ಎಂಬಾತನನ್ನು ಬಂಧಿಸಲಾಗಿದ್ದು, ದಾಳಿ ವಿಷಯ ತಿಳಿದು ಜೆಡಿಎಸ್ ಮೈನಾರಿಟಿ ವಿಂಗ್ ಅಧ್ಯಕ್ಷ ಅಕ್ಬರ್ ಆಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಅಕ್ಬರ್ ಆಲಿ ಸೇರಿ 11 ಜನರ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಆದ್ರೆ ಈ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಇದೀಗ ವಿಕೆ ಗೋಪಾಲ್ ಒತ್ತಡ ಹೇರುತ್ತಿದ್ದಾರೆ.
ಅಕ್ಬರ್ ಆಲಿ ಸಹಚರರು ಗುಜರಾತ್ ನ ಅಹ್ಮದಾಬಾದ್ ನಲ್ಲೂ ಡಕಾಯಿತಿ ನಡೆಸಿದ್ದರು. ಹೀಗಾಗಿ ಗುಜಾರಾತ್ ಪೊಲೀಸರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಕ್ಬರ್, ಅಸೀಫ್, ಖಾದೀರ್ ಸೇರಿ 11 ಜನರನ್ನು ಗುಜರಾತ್ ಮತ್ತು ಬೆಂಗಳೂರು ಪೊಲೀಸರು ಹುಡುಕಾಡುತ್ತಿದ್ದಾರೆ.
ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv