ಚೆನ್ನೈ: ತಮಿಳುನಾಡಿನ ಕಲ್ಲಕುರುಚಿ ಜಿಲ್ಲೆಯ ಶಂಕರಪುರಂನಲ್ಲಿರುವ ಪಟಾಕಿ ಅಂಗಡಿಯೊಂದರಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಐವರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಂಗಳವಾರ ರಾತ್ರಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
Advertisement
ಸ್ಫೋಟದಿಂದ ಉಂಟಾದ ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೂ ಹೊತ್ತಿಕೊಂಡಿದೆ. ಈ ವೇಳೆ ಸಿಲಿಂಡರ್ ಅಂಗಡಿಯಲ್ಲಿ ಸಿಲಿಂಡರ್‍ಗಳೂ ಸ್ಫೋಟಗೊಂಡಿವೆ.
Advertisement
#UPDATE | Tamil Nadu: Earlier visuals of the fire incident at a firecracker shop in Sankarapuram town of Kallakurichi district, where five people lost their lives. pic.twitter.com/POoNh4dH19
— ANI (@ANI) October 26, 2021
Advertisement
ದೀಪಾವಳಿ ಹಬ್ಬ ಸಮೀಪಿಸಿದ್ದು, ಜನರು ಪಟಾಕಿ ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸಲು ಅಂಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಘಟನೆಯಲ್ಲಿ ಸುಟ್ಟಗಾಯಗಳಿಂದ ನರಳುತ್ತಿದ್ದ 10ಕ್ಕೂ ಹೆಚ್ಚು ಮಂದಿಯನ್ನು ಕಲ್ಲಕುರುಚಿ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಅವಘಡದಿಂದಾಗಿ ಈ ಪ್ರದೇಶದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಹತ್ತಿರ ಬರ್ತಿದ್ದಂತೆ ಪುಂಡಾಟಿಕೆ ಶುರು – MES ವಿರುದ್ಧ ಹೆಚ್‍ಡಿಕೆ ಕಿಡಿ
Advertisement
ಕಲ್ಲಕುರುಚಿ ಹಾಗೂ ತಿರುಕೊಯ್ಲೂರ್‍ನ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಪಟಾಕಿ ಅಂಗಡಿ ಹಾಗೂ ಪಕ್ಕದ ಅಂಗಡಿಗಳಲ್ಲಿದ್ದ ಕಾರ್ಮಿಕರು, ಅಂಗಡಿಗಳಿಗೆ ಬಂದಿದ್ದವರು ಎಲ್ಲಿಯವರು ಎಂಬುದು ತಿಳಿದುಬಂದಿಲ್ಲ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಮಳೆ ಅವಾಂತರ- ಹೂ ತೋಟಗಳು ಜಲಾವೃತ
ಪಟಾಕಿ ಸ್ಫೋಟ ದುರಂತಕ್ಕೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.