ಜಮ್ಮು-ಕಾಶ್ಮೀರ: ಯುಗಾದಿಯಂದೇ ಪಾಕಿಸ್ತಾನ ಭಾರತದ ಮೇಲೆ ಗುಂಡಿನ ದಾಳಿ ನಡೆಸಿದ್ದರ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.
ಪೂಂಛ್ ಜಿಲ್ಲೆಯ ದೇವ್ಟಾ ಧರ್ ಗ್ರಾಮದಲ್ಲಿರುವ ಮನೆಗೆ ಪಾಕ್ ಸೇನೆ ಹಾರಿಸಿದ ಶೆಲ್‍ಗಳು ಅಪ್ಪಳಿಸಿವೆ. ದಾಳಿಯಲ್ಲಿ ಮನೆಯಲ್ಲಿದ್ದ ಚೌಧರಿ ಮೊಹ್ಮದ್ ರಂಜನ್, ಪತ್ನಿ ಮತ್ತು ಮೂವರು ಗಂಡು ಮಕ್ಕಳು ಪ್ರಾಣ ಬಿಟ್ಟಿದ್ದಾರೆ. ಘಟನೆಯಿಂದಾಗಿ ರಂಜನ್ ಅವರ ಇಬ್ಬರು ಹೆಣ್ಣು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
Advertisement
ಇಂದು ಬೆಳಗ್ಗೆ 7.45ರ ಸುಮಾರಿಗೆ ಪಾಕ್ ಗುಂಡಿನ ದಾಳಿ ನಡೆಸಿದೆ. ಸೇನೆಯ ಬದಲು ನಾಗರಿಕ ಪ್ರದೇಶಗಳನ್ನೇ ಗುರಿಯಾಗಿರಿಸಿಕೊಂಡು ಪಾಕಿಸ್ತಾನ ಸೇನೆ ದಾಳಿ ನಡೆಸ್ತಿದೆ ಅಂತ ಸೇನಾ ವಕ್ತಾರ ದೇವೇಂದರ್ ಆನಂದ್ ತಿಳಿಸಿದ್ದಾರೆ.
Advertisement
ಕಳೆದ ವಾರ ರಾಜ್ಯಸಭೆಯಲ್ಲಿ ಪ್ರಶ್ನೆಯ ವೇಳೆ ಪಾಕಿಸ್ತಾನ ಜನವರಿಯಿಂದ ಈವರೆಗೆ ಸುಮಾರು 209 ಬಾರಿ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸಿದೆ. ಅದರಲ್ಲಿ ಫೆಬ್ರವರಿಯ 12 ದಿನದೊಳಗೆ ಸುಮಾರು 142 ಬಾರಿ ದಾಳಿ ನಡೆಸಿದೆ. ಒಟ್ಟಾರೆ ಕಳೆದ ವರ್ಷದಿಂದ ಈವರೆಗೆ ಸುಮಾರು 860 ಬಾರಿ ಪಾಕ್ ಭಾರತದ ಮೇಲೆ ದಾಳಿ ನಡೆಸಿದೆ ಅಂತ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ತಿಳಿಸಿದ್ದರು.
Advertisement
ಕಳೆದ ತಿಂಗಳಷ್ಟೇ ಪೂಂಛ್ ಹಾಗೂ ರಾಜೌರಿ ಜಿಲ್ಲೆಯಲ್ಲಿ ಪಾಕ್ ನ ದಾಳಿಗೆ 22 ವರ್ಷದ ಯೋಧ ಸೇರಿ 4 ಮಂದಿ ಹುತಾತ್ಮರಾಗಿದ್ದರು. ಪಾಕ್‍ನ ಪ್ರತಿ ದಾಳಿಗೂ ಭಾರತೀಯ ಸೈನಿಕರು ಪ್ರತಿ ದಾಳಿ ನಡೆಸಿದ್ದಾರೆ ಎಂದು ಸೇನಾ ಮುಖ್ಯಸ್ಥ ಶರತ್ ಚಂದ್ ತಿಳಿಸಿದ್ದಾರೆ.
Advertisement
#WATCH: Pakistan violates ceasefire in Balakote sector. #JammuAndKashmir (earlier visuals) pic.twitter.com/02lvon6MkM
— ANI (@ANI) March 18, 2018
In village Devta 5 people died, 2 injured. We're assessing situation. Our teams are already on spot. Helicopters sent to retrieve the injured for specialised treatment in Jammu. Firing is going on: SD Singh Jamwal, IGP Jammu on ceasefire violation by Pakistan in Balakote sector pic.twitter.com/SHMTDkMOcz
— ANI (@ANI) March 18, 2018
Two children injured in the ceasefire violation by Pakistan in Balakote sector, admitted to hospital in Rajouri. #JammuAndKashmir pic.twitter.com/P9EMfJoTpq
— ANI (@ANI) March 18, 2018