ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಸ್ಫೋಟಗೊಂಡಿದೆ ಇಂದು 5 ಮಂದಿಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ ಕಂಡಿದೆ.
Advertisement
ಹೊಸ ವರ್ಷ ಮತ್ತು ಕ್ರಿಸ್‍ಮಸ್ ಹತ್ತಿರದಲ್ಲಿರುವಂತೆ ಕರ್ನಾಟಕದಲ್ಲಿ ಓಮಿಕ್ರಾನ್ ಬ್ಲಾಸ್ಟ್ ಆಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 5 ಒಮಿಕ್ರಾನ್ ಕೇಸ್ ಪತ್ತೆ ಯಾಗಿದೆ. ನಾಲ್ವರು ಪುರುಷರು, ಓರ್ವ ಮಹಿಳೆಗೆ ಒಮಿಕ್ರಾನ್ ದೃಢ ಪಟ್ಟಿದ್ದು ಈ ಮೂಲಕ ಓಮಿಕ್ರಾನ್ ಸೋಂಕಿತರ ಒಟ್ಟು ಸಂಖ್ಯೆ 8ಕ್ಕೆ ಏರಿಕೆ ಕಂಡಿದೆ.
Advertisement
Five more cases of #Omicron have been detected in Karnataka today:
????19 yr male returning from UK
????36 yr male returning from Delhi
????70 yr female returning from Delhi
????52 yr male returning from Nigeria
????33 yr male returning from South Africa @BSBommai #Omicronindia
— Dr Sudhakar K (@mla_sudhakar) December 16, 2021
Advertisement
Advertisement
ಇಂದು 19 ವರ್ಷದ ಯುವಕ – ಇಂಗ್ಲೆಂಡ್‍ನಿಂದ ವಾಪಸ್, 36 ವರ್ಷದ ವ್ಯಕ್ತಿ – ದೆಹಲಿಯಿಂದ ವಾಪಸ್, 70 ವರ್ಷದ ವೃದ್ಧೆ – ದೆಹಲಿಯಿಂದ ವಾಪಸ್, 52 ವರ್ಷದ ವ್ಯಕ್ತಿ – ನೈಜೀರಿಯಾದಿಂದ ವಾಪಸ್, 33 ವರ್ಷದ ವ್ಯಕ್ತಿ – ದೆಹಲಿಯಿಂದ ವಾಪಸ್ ಆದ ಐವರಲ್ಲಿ ಓಮಿಕ್ರಾನ್ ಸೋಂಕು ಇರುವುದು ಖಚಿತಗೊಂಡಿದೆ. ಈ ಮೊದಲು ದೇಶದಲ್ಲಿ ಮೊದಲ 2 ಓಮಿಕ್ರಾನ್ ಪ್ರಕರಣ ಕೂಡ ಕರ್ನಾಟಕದಲ್ಲೇ ಪತ್ತೆಯಾಗಿತ್ತು. ಇದೀಗ ಒಂದೇ ದಿನ 5 ಪ್ರಕರಣ ಪತ್ತೆ ಆಗುವ ಮೂಲಕ ಮತ್ತಷ್ಟು ಆತಂಕ ಮೂಡಿಸಿದೆ.