– ತಮಿಳುನಾಡಿನ ರಾಮನಾಥಪುರಂ ‘ಪನ್ನೀರಸೆಲ್ವಂ’ ಹೆಸರಲ್ಲಿ 5 ನಾಮಪತ್ರ ಸಲ್ಲಿಕೆ
ಚೆನ್ನೈ: ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಯನ್ನು ಸೋಲಿಸಲು ಹಾಗೂ ಮತದಾರರಲ್ಲಿ ಗೊಂದಲ ಮೂಡಿಸಲು ತಂತ್ರಗಳನ್ನು ಹೆಣೆಯುವುದು ಸಾಮಾನ್ಯ. ಅದೇ ರೀತಿ, ತಮಿಳುನಾಡು (Tamil Nadu) ಮಾಜಿ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ (Panneerselvam) ಅವರನ್ನು ಮಣಿಸಲು ತಂತ್ರ ರೂಪಿಸಲಾಗಿದೆ.
Advertisement
ತಮಿಳುನಾಡಿನ ಮಾಜಿ ಸಿಎಂ ಓ. ಪನ್ನೀರಸೆಲ್ವಂ ಅವರು ಲೋಕಸಭಾ ಚುನಾವಣೆಗೆ ರಾಮನಾಥಪುರಂ (Ramanathapuram) ಕ್ಷೇತ್ರದಿಂದ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ‘ಪನ್ನೀರಸೆಲ್ವಂ’ ಎಂದೇ ಹೆಸರಿರುವ ಈತರೆ ನಾಲ್ವರು ಸ್ವತಂತ್ರ ಅಭ್ಯರ್ಥಿಗಳಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ಪರ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬ್ಯಾಟಿಂಗ್
Advertisement
Advertisement
ಈಗ ಮಾಜಿ ಸಿಎಂ ಪನ್ನೀರಸೆಲ್ವಂ ಅವರು ಪ್ರಮುಖ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಮಾತ್ರವಲ್ಲದೇ, ತಮ್ಮದೇ ಹೆಸರಿನ ಇತರ ನಾಲ್ವರ ವಿರುದ್ಧ ಚುನಾವಣಾ ಕಣದಲ್ಲಿ ಹೋರಾಡಬೇಕಿದೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಇತರ ನಾಲ್ಕು ನಾಮಪತ್ರಗಳು ಮಧುರೈನ ಉಸಿಲಂಪಟ್ಟಿ, ದಕ್ಷಿಣ ಕತ್ತೂರ್, ವಾಗೈಕುಲಂ ಗ್ರಾಮ ಮತ್ತು ಮಧುರೈ ಚೋಲೈ ಅಜಕುಪುರಂನಿಂದ ಸಲ್ಲಿಕೆಯಾಗಿವೆ.
Advertisement
ಮಾಜಿ ಮುಖ್ಯಮಂತ್ರಿ ಪನ್ನೀರಸೆಲ್ವಂ ಅವರು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಎಐಎಡಿಎಂಕೆ ಸ್ವಯಂಸೇವಕ ಹಕ್ಕುಗಳ ರಕ್ಷಣಾ ಸಮಿತಿ ವತಿಯಿಂದ ರಾಮನಾಥಪುರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದೇನೆ. ಈ ಕ್ಷೇತ್ರದಲ್ಲಿ ಕೈತಪ್ಪಿ ಹೋಗಿರುವ ಎಲ್ಲ ಯೋಜನೆಗಳನ್ನು ಮರಳಿ ತರಲು ಶ್ರಮಿಸುತ್ತೇನೆ. ಅಷ್ಟೇ ಅಲ್ಲ, ಪ್ರತಿನಿತ್ಯ ಸಂಕಷ್ಟಕ್ಕೆ ಸಿಲುಕುತ್ತಿರುವ ಮೀನುಗಾರರ ರಕ್ಷಣೆಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ಹೋಗುತ್ತೇನೆ. ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಭರವಸೆ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್, ಯುಪಿ ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು
ಎಐಎಡಿಎಂಕೆಯಿಂದ ಉಚ್ಚಾಟನೆ ವಿರುದ್ಧ ಕಾನೂನು ಹೋರಾಟ ಮುಂದುವರಿಸಿರುವ 74 ವರ್ಷದ ಮಾಜಿ ಸಿಎಂ, ಲೋಕಸಭೆ ಚುನಾವಣೆಗೆ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.
ರಾಮನಾಥಪುರದಲ್ಲಿ ಒಟ್ಟು 23 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಆಡಳಿತಾರೂಢ ಡಿಎಂಕೆಯ ಮಿತ್ರಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಮನಿರ್ದೇಶಿತ ಕೆ.ನವಾಸ್ಕಾನಿ ಮತ್ತು ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆಯ ಪಿ.ಜಯಪೆರುಮಾಳ್ ಸೇರಿದ್ದಾರೆ. ಪ್ರಮುಖ ಸ್ಪರ್ಧಿಗಳ ಹೆಸರನ್ನು ಹೋಲುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದು ಹೊಸದೇನಲ್ಲ. ಬಹುತೇಕ ಎಲ್ಲಾ ಚುನಾವಣೆಗಳಲ್ಲಿ ಇದು ಸಾಕ್ಷಿಯಾಗಿದೆ. ಇದನ್ನೂ ಓದಿ: ರಾಯ್ ಬರೇಲಿ, ಅಮೇಥಿಯಿಂದ ಸ್ಪರ್ಧಿಸಲು ಗಾಂಧಿ ಕುಟುಂಬ ನಿರಾಸಕ್ತಿ?