ಮುಂಬೈ: ಮಕ್ಕಳ ಅಪರಹರಣಕಾರರೆಂದು ತಪ್ಪಾಗಿ ಭಾವಿಸಿ ಹಲ್ಲೆ ನಡೆಸುವ ಕೊಲೆ ಮಾಡುವ ಪರಿಪಾಠ ಮುಂದುವರಿದಿದ್ದು, ಇದೀಗ ಮಹಾರಾಷ್ಟ್ರದ ಧುಲೆ ಎಂಬಲ್ಲಿ ಐವರನ್ನು ಹಿಡಿದು ಗ್ರಾಮಸ್ಥರು ಕೊಲೆ ಮಾಡಿದ್ದಾರೆ.
ಸೋಲ್ಲಾಪುರ ಜಿಲ್ಲೆಯ ರೈನ್‍ಪಾದಾ ಎಂಬ ಹಳ್ಳಿಯ ಸಂತೆಗೆ ಬಂದ ಐವರಲ್ಲಿ ಒಬ್ಬಾತ ಮಕ್ಕಳನ್ನು ಮಾತನಾಡಿಸಲು ಮುಂದಾಗಿದ್ದಾನೆ. ಇದ್ದರಿಂದ ಅನುಮಾನಗೊಂಡ ಜನ ಮಕ್ಕಳ ಕಳ್ಳರೆಂದು ಭಾವಿಸಿ ಐವರನ್ನು ಹಿಗ್ಗಾಮುಗ್ಗಾ ಬಡಿದು ಕೊಂದಿದ್ದಾರೆ.
Advertisement
#Maharashtra: 5 people lynched by villagers this afternoon on suspicion of child theft in Rainpada village of Dhule district. pic.twitter.com/LSp4dl9fH7
— ANI (@ANI) July 1, 2018
Advertisement
ಸದ್ಯ ಘಟನೆ ಕುರಿತು ಮಾಹಿತಿ ನೀಡಿರುವ ಪೊಲೀಸರು, ಗುಂಪಿನಲ್ಲಿ ಒಟ್ಟು 7 ಜನರಿದ್ದು ಇದರಲ್ಲಿ ಇಬ್ಬರು ಜನರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮೃತರು ಏಕೆ ಹಳ್ಳಿಗೆ ತೆರಳಿದ್ದರು ಎಂಬ ಮಾಹಿತಿ ಖಚಿತವಾಗಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement
ಘಟನೆ ಸಂಬಂಧ ಈಗಾಗಲೇ ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಮಕ್ಕಳ ಕಳ್ಳರ ವಂದತಿಯೇ ಪ್ರಮುಖ ಕಾರಣ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು. ಕೊಲೆಯಾದ ಐವರ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.