ಮಡಿಕೇರಿ: ಆದಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ (Religious Conversion) ಯತ್ನಿಸುತ್ತಿದ್ದ ವ್ಯಕ್ತಿಗಳನ್ನು ಭಜರಂಗದಳದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ (Police) ಹಿಡಿದು ಒಪ್ಪಿಸಿರುವ ಘಟನೆ ಕೊಡಗು (Kodagu) ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ರೇಷ್ಮೆ ಹಡ್ಲು ಹಾಡಿಯಲ್ಲಿ ನಡೆದಿದೆ.
Advertisement
Advertisement
ಭಜರಂಗದಳ ಕಾರ್ಯಕರ್ತರು ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಹಾಡಿಯಲ್ಲಿ ಇರುವ ಆದಿವಾಸಿಗಳಿಗೆ ಎಳ್ಳುಬೆಲ್ಲ ಹಂಚಲು ಹೋಗಿದ್ದರು. ಈ ವೇಳೆ ಹಾಡಿಯ ಜನರನ್ನು ಒಂದೇ ಕಡೆ ಕೂರಿಸಿಕೊಂಡು ಬೈಬಲ್ ಬೋಧನೆಯನ್ನು ಮಾಡುತ್ತಿದ್ದ ಕೆಲ ಕ್ರಿಶ್ಚಿಯನ್ ವ್ಯಕ್ತಿಗಳನ್ನು ಭಜರಂಗದಳದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ವ್ಯಕ್ತಿಗಳು ಪ್ರತಿ ಭಾನುವಾರ ಹಾಡಿಗಳಿಗೆ ಬಂದು ಬೈಬಲ್ ಬೋಧಿಸಿಕೊಂಡು ಹಾಡಿಯಲ್ಲಿ ನೆಲೆಸಿರುವ ಬಗ್ಗೆ ತಿಳಿದು ಬಂದಿದೆ. ಇದನ್ನೂ ಓದಿ: ಕಾಳಿ ಕೈಯಲ್ಲಿ ಸಿಗರೇಟ್ ವಿವಾದ : ಸುಪ್ರೀಂ ಮೊರೆ ಹೋದ ನಿರ್ದೇಶಕಿ ಲೀನಾ
Advertisement
Advertisement
ಸುಮಾರು 500 ಕುಟುಂಬಗಳಲ್ಲಿ ಈಗಾಗಲೇ 250 ಮಂದಿಯನ್ನು ಮತಾಂತರ ಮಾಡಿಸಲಾಗಿದೆ ಎಂದು ಭಜರಂಗದಳದ ಕಾರ್ಯಕರ್ತರು ಅರೋಪಿದ್ದಾರೆ. ಅಲ್ಲದೇ ಪ್ರತಿ ಆದಿವಾಸಿಗಳ ಹಾಡಿಯಲ್ಲಿ ಬೈಬಲ್ ಪುಸ್ತಕವನ್ನು (Book) ಹಂಚಿ ಮುಗ್ಧ ಜನರನ್ನು ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಐವರು ಕ್ರಿಶ್ಚಿಯನರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜ್ ಹಾಸ್ಟೆಲ್‍ನಲ್ಲಿ ಮಾಂಸಾಹಾರ ಸೇವನೆ ನಿಷೇಧ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k