ರಾಂಚಿ: ಐವರು ಮಾವೋವಾದಿಗಳು (Maoists) ಭದ್ರತಾ ಪಡೆಗಳ ಮುಂದೆ ಶರಣಾದ ಪ್ರಕರಣ ಜಾರ್ಖಡ್‍ನಲ್ಲಿ (Jharkhand) ನಡೆದಿದೆ. ಇದರಿಂದಾಗಿ 30 ವರ್ಷಗಳ ಕಾಲ ನಕ್ಸಲರ ಕಪಿಮುಷ್ಠಿಯಲ್ಲಿ ನಲುಗಿದ್ದ ಜಾರ್ಖಂಡ್‌ನ ಚತ್ರಾ ಜಿಲ್ಲೆಯ ಕೌಲೇಶ್ವರಿ (Kauleshwari) ವಲಯ ಮುಕ್ತಗೊಂಡಂತಾಗಿದೆ.
ಶರಣಾದ ಮಾವೋವಾದಿಗಳನ್ನು ಕಮಾಂಡರ್ ಅಮರ್‌ಜಿತ್ ಯಾದವ್, ಶಾಹದೇವ್ ಯಾದವ್, ನಿರು ಯಾದವ್, ಸಂತೋಷ್ ಭುನಿಯನ್ ಹಾಗೂ ಅಶೋಕ್ ಬೈಗಾ ಎಂದು ಗುರುತಿಸಲಾಗಿದೆ. ಇದರಲ್ಲಿ ಅಮರ್‍ಜಿತ್ ಯಾದವ್ ಸುಳಿವಿಗೆ 10 ಲಕ್ಷ ರೂ. ಹಾಗೂ ಶಾಹದೇವ್ ಸುಳಿವಿಗೆ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು. ಇದನ್ನೂ ಓದಿ: ದಾಂತೇವಾಡ ಸ್ಫೋಟ ಪ್ರಕರಣ- ಅಪ್ರಾಪ್ತರು ಸೇರಿ ನಾಲ್ವರು ಮಾವೋವಾದಿಗಳು ಅರೆಸ್ಟ್
Advertisement
Advertisement
ಈ ಐವರು ಮಾವೋವಾದಿಗಳು ಜಾರ್ಖಂಡ್ ಮತ್ತು ಬಿಹಾರದ (Bihar) ವಿವಿಧ ಜಿಲ್ಲೆಗಳಲ್ಲಿನ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಅಮರ್‌ಜಿತ್ 81 ಪ್ರಕರಣಗಳಲ್ಲಿ, ಶಾಹದೇವ್ 53 ಪ್ರಕರಣಗಳಲ್ಲಿ, ನಿರು 60 ಪ್ರಕರಣಗಳಲ್ಲಿ, ಸಂತೋಷ್ 27 ಪ್ರಕರಣಗಳಲ್ಲಿ ಮತ್ತು ಅಶೋಕ್ ಎರಡು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಎಂದು ಕಾರ್ಯಾಚರಣೆಯ ಮಹಾನಿರೀಕ್ಷಕ (Inspector General of Police) ಅಮೋಲ್ ವಿ ಹೋಮ್ಕರ್ ಹೇಳಿದ್ದಾರೆ.
Advertisement
Advertisement
ಕಳೆದ 30 ವರ್ಷಗಳಿಂದ ಸಿಪಿಐ ಮಾವೋವಾದಿಗಳ ಭದ್ರಕೋಟೆಯಾಗಿರುವ ಜಾರ್ಖಂಡ್‌ನ ಚತ್ರಾ ಜಿಲ್ಲೆಯ ಕೌಲೇಶ್ವರಿ ಉಪವಲಯದಲ್ಲಿ ನಕ್ಸಲರು ಸಕ್ರಿಯರಾಗಿದ್ದರು. ಒಂದು ವರ್ಷದಿಂದ ಭದ್ರತಾ ಪಡೆಗಳು ಇವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿತ್ತು. ಇಂದಿನ ಶರಣಾಗತಿಯಿಂದ ಕೌಲೇಶ್ವರಿ ಉಪವಲಯವನ್ನು ನಿಷೇಧಿತ ಸಂಘಟನೆಯ ಮುಷ್ಠಿಯಿಂದ ಬಿಡಿಸಿದಂತೆ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶರಣಾಗತರು ನೀಡಿದ ಮಾಹಿತಿಯಿಂದ ಎರಡು ಎಕೆ-56 ರೈಫಲ್‍ಗಳು, ಒಂದು ಎಸ್‍ಎಲ್‍ಆರ್ ರೈಫಲ್, ಒಂದು ಐಎನ್‍ಎಸ್‍ಎಎಸ್ ರೈಫಲ್, ಎರಡು 303 ರೈಫಲ್‍ಗಳು, ಒಂದು ಯುಎಸ್ ನಿರ್ಮಿತ ರೈಫಲ್, ಒಂದು ಏರ್ ಗನ್, ಎರಡು ದೇಶಿ ನಿರ್ಮಿತ ರೈಫಲ್‍ಗಳು, ಒಂದು ಪಿಸ್ತೂಲ್ (Pistol) ಮತ್ತು 1,855 ಕ್ಯಾಲಿಬರ್‌ಗಳು ಮತ್ತು ಇತರ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇಬ್ಬರ ತಲೆಗೆ ಒಟ್ಟು 11 ಲಕ್ಷ ಘೋಷಣೆಯಾಗಿದ್ದ ನಕ್ಸಲರ ಎನ್‍ಕೌಂಟರ್