ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಗಡಿ ನಿಯಂತ್ರಣ ರೇಖೆ (LOC)ಯಲ್ಲಿ ಪೊಲೀಸರು ಮತ್ತು ಸೇನೆ ನಡೆಸಿದ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಐವರು ಲಷ್ಕರ್ ಭಯೋತ್ಪಾದಕರು ಹತ್ಯೆಯಾಗಿದ್ದಾರೆ.
ಕುಪ್ವಾರ ಜಿಲ್ಲೆಯ ಮಚಿಲ್ ಸೆಕ್ಟರ್‌ನಲ್ಲಿ ಇಂದು (ಗುರುವಾರ) ಎನ್‌ಕೌಂಟರ್ ನಡೆದಿದೆ. ಆರಂಭದಲ್ಲಿ ಸೇನೆ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದರು. ನಂತರದ ಗುಂಡಿನ ಕಾಳಗದಲ್ಲಿ ಇನ್ನೂ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕತಾರ್‌ನಲ್ಲಿ ಬಂಧಿತರಾಗಿದ್ದ 8 ಮಾಜಿ ನೌಕಾಪಡೆ ಸಿಬ್ಬಂದಿಗೆ ಮರಣದಂಡನೆ! – ಭಾರತಕ್ಕೆ ಆಘಾತ
Advertisement
Advertisement
ಹತ್ಯೆಯಾದ ಭಯೋತ್ಪಾದಕರು ಲಷ್ಕರ್-ಎ-ತೊಯ್ಬಾ (Lashkar-e-Toiba)ಗೆ ಸೇರಿದವರು. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಹಿಂದೆ ಸೇನೆಯಿಂದ ಪ್ರತ್ಯೇಕವಾಗಿ ನಡೆಸಲಾಗಿದ್ದ ಒಳನುಸುಳುವಿಕೆ ವಿರುದ್ಧದ ಕಾರ್ಯಾಚರಣೆಯಲ್ಲಿ ಪೊಲೀಸರನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ.
Advertisement
16 ಭಯೋತ್ಪಾದಕ ಲಾಂಚಿಂಗ್ ಪ್ಯಾಡ್‌ಗಳು ಎಲ್‌ಒಸಿಯಾದ್ಯಂತ ಇನ್ನೂ ಕಾರ್ಯನಿರ್ವಹಿಸುತ್ತಿವೆ. ಪಾಕಿಸ್ತಾನದಿಂದ ಭಯೋತ್ಪಾದಕರನ್ನು ಭಾರತದ ಕಡೆ ಕಳುಹಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಜಮ್ಮು-ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯಕ್ಕೆ ಮೂಲ ಗೊತ್ತಿಲ್ಲ – ಆಪ್ ಸಚಿವೆ ವಿವಾದಾತ್ಮಕ ಹೇಳಿಕೆ
Advertisement
ಜಮ್ಮು ಮತ್ತು ಕಾಶ್ಮೀರದ ಉನ್ನತ ಅಧಿಕಾರಿಗಳು ಮತ್ತು ಭದ್ರತಾ ಏಜೆನ್ಸಿಗಳ ಸಭೆಯು ಶ್ರೀನಗರದಲ್ಲಿರುವ 15 ಕಾರ್ಪ್ಸ್‌ನ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆಯಿತು. ಕಾಶ್ಮೀರದಲ್ಲಿ ವಿದೇಶಿ ಭಯೋತ್ಪಾದಕರ ಪಾತ್ರವಿರುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಸ್ಥಳೀಯ ನೇಮಕಾತಿಗಳು ತೀವ್ರವಾಗಿ ಕಡಿಮೆಯಾಗಿರುವುದರಿಂದ ವಿದೇಶಿ ಭಯೋತ್ಪಾದಕರ ಸಂಖ್ಯೆ ಮತ್ತೆ ಹೆಚ್ಚಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವರ್ಷ ಕೇಂದ್ರಾಡಳಿತ ಪ್ರದೇಶದಲ್ಲಿ ಹತರಾದ 46 ಭಯೋತ್ಪಾದಕರ ಪೈಕಿ 37 ಮಂದಿ ಪಾಕಿಸ್ತಾನೀಯರು. ಒಂಬತ್ತು ಮಂದಿ ಮಾತ್ರ ಸ್ಥಳೀಯರು ಎಂದು ಅಧಿಕೃತ ಅಂಕಿ ಅಂಶಗಳು ಬಹಿರಂಗಪಡಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ 33 ವರ್ಷಗಳ ಭಯೋತ್ಪಾದನೆಯಲ್ಲಿ ವಿದೇಶಿ ಭಯೋತ್ಪಾದಕರ ಸಂಖ್ಯೆ ಸ್ಥಳೀಯ ಭಯೋತ್ಪಾದಕರಿಗಿಂತ ನಾಲ್ಕು ಪಟ್ಟು ಹೆಚ್ಚಿರುವುದು ಇದೇ ಮೊದಲು ಎನ್ನಲಾಗಿದೆ. ಪ್ರಸ್ತುತ ಕಣಿವೆಯಲ್ಲಿ ಸುಮಾರು 130 ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪೈಕಿ ಅರ್ಧದಷ್ಟು ವಿದೇಶಿ ಭಯೋತ್ಪಾದಕರು ಎಂದು ಗೃಹ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಡೇಟಿಂಗ್ ಆ್ಯಪ್ ಬಂಬಲ್ ಬಳಸುವ ಮುನ್ನ ಎಚ್ಚರ.. ಎಚ್ಚರ
Web Stories