– ತೊಗರಿ ಕಣಜದ ನಾಡಲ್ಲಿಯೇ ತೊಗರಿಗೆ ಬರ
ವಿಜಯಪುರ: ಗುಮ್ಮಟ ನಗರಿ ವಿಜಯಪುರ (Vijayapura) ತೊಗರಿಯ ಕಣಜ ಎಂದು ಖ್ಯಾತಿ ಪಡೆದಿದೆ. ಆದರೆ ಖ್ಯಾತಿಯಾಗಿರುವ ಜಿಲ್ಲೆಯಲ್ಲಿ ತೊಗರಿಗೆ ಈಗ ಬರ ಬಂದಿದೆ. ಚಿತ್ರದುರ್ಗದ (Chitradurga) ಕೃಷಿ ಇಲಾಖೆಯಲ್ಲಿ ತೊಗರಿ ಬೀಜ ಖರೀದಿಸಿ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ರೈತರಿಗೆ ತೊಗರಿ ಬೆಳೆ ಕೈಕೊಟ್ಟಿದೆ.
ಜಿಲ್ಲೆಯನ್ನು ಜೋಳದ ನಾಡು ಎಂದು ಕರೆಯುತ್ತಿದ್ದರು. ಆದರೆ ದಶಕದ ಈಚೆಗೆ ತೊಗರಿಯ ಕಣಜ ಎಂದು ಕರೆಸಿಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣ ಜಿಲ್ಲೆಯಲ್ಲಿ ಅತೀ ಹೆಚ್ಚು ತೊಗರಿ ಬೆಳಯಲಾಗುತ್ತಿತ್ತು. ಆದರೆ ಇದೀಗ ಈ ಹೆಸರು ಅಳಿಸುವಂತೆ ಗೋಚರಿಸುತ್ತಿದೆ. ಅದಕ್ಕೆ ಕಾರಣ ಈ ಬಾರಿ ಜಿಲ್ಲೆಯಲ್ಲಿ ತೊಗರಿ ಬೆಳೆ ಹೂ ಬಿಡದೇ ಸಂಪೂರ್ಣ ಹಾಳಾಗಿ ಹೋಗಿದೆ.ಇದನ್ನೂ ಓದಿ: ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿ: ಆದಿತ್ಯ ಠಾಕ್ರೆ ಕಿರಿಕ್
ಜಿಲ್ಲೆಯಲ್ಲಿ 5 ಲಕ್ಷ 34 ಹೆಕ್ಟರ್‌ನಲ್ಲಿ ತೊಗರಿ ಬೆಳೆಯಲಾಗಿದ್ದು, 80% ರಷ್ಟು ಬೆಳೆ ಹಾನಿಯಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇಷ್ಟೊಂದು ಬೆಳೆ ಹಾಳಾಗಲು ರಾಜ್ಯ ಸರ್ಕಾರದಿಂದ ವಿತರಿಸಿದ ಬೀಜ ಒಂದು ಕಡೆಯಾದರೆ, ಇನ್ನೊಂದೆಡೆ ಅಕಾಲಿಕ ಮಳೆ, ಮೋಡಕವಿದ ವಾತಾವರಣದಿಂದ ಇಬ್ಬನಿ ಬಿದ್ದು, ಬೆಳೆ ಹಾಳಾಗಿದೆ. ಇದರಿಂದ ಜಿಲ್ಲೆಯ ಸಾವಿರಾರು ರೈತರು ಕಂಗಾಲಾಗಿ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಕೊಟಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮಗೊಳ್ಳದ ಅಧಿಕಾರಿಗಳು, ಸರ್ಕಾರದ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಡಿ.10ರಂದು ಜಿಲ್ಲಾಧಿಕಾರಿ ಹಾಗೂ ಜಂಟಿ ಕೃಷಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯಾದ್ಯಂತ ಕೃಷಿ ಇಲಾಖೆ ಸರಬರಾಜು ಮಾಡಿರುವ ತೊಗರಿಯ ಬಿತ್ತನೆ ಬೀಜಗಳು ಕಳಪೆಯಾಗಿವೆ. ಹೀಗಾಗಿ ತೊಗರಿ ಬೆಳೆ ಸಂಪಾಗಿ ಬೆಳೆದಿವೆ. ಆದರೆ ಕಾಯಿ ಮಾತ್ರ ಹಿಡಿದಿಲ್ಲ. ಕೆಲವೆಡೆ ಕಾಯಿಹಿಡಿದರೂ ಗಟ್ಟಿಯಾಗದೇ ಉದುರುತ್ತಿವೆ. ಹೂವು ಕಾಯಾಗುವ ಮುನ್ನವೇ ನೆಲಕ್ಕೆ ಬೀಳುತ್ತಿವೆ. ಹೀಗಾಗಿ ಒಂದು ಎಕರೆಗೆ 10 ರಿದ 15 ಸಾವಿರ ಖರ್ಚು ಮಾಡಿ, ತೊಗರಿ ಬೆಳೆದ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ.
ಇನ್ನೂ ಬಿತ್ತನೆ ಬೀಜದ ಬೆಲೆಯನ್ನು ಸಹ ದಿಢೀರ್ ಎಂದು 2 ಪಟ್ಟು ಹೆಚ್ಚಿಸಿರುವ ಸರ್ಕಾರ ರೈತರಿಗೆ ಕಳಪೆ ಬೀಜ ಕೊಟ್ಟು ವಂಚಿಸಿದೆ. ಹೀಗಾಗಿ ರೈತರು ಭಾರೀ ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಸರ್ಕಾರ ಕೂಡ ಬೆಳೆನಷ್ಟ ಪರಿಹಾರ ಒದಗಿಸುವಂತೆ ರೈತ ಮುಖಂಡರು ಆಗ್ರಹಿಸಿದ್ದಾರೆ.
ಒಟ್ಟಾರೆ ಕಳಪೆ ತೊಗರಿ ಬೀಜದ ದೆಸೆಯಿಂದ ವಿಜಯಪುರ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಹೇಳಿಕೊಂಡಂತೆ ಬೆಳೆ ಬಂದಿಲ್ಲ. ಈ ಎರಡೂ ಜಿಲ್ಲೆಗಳಲ್ಲಿ ತೊಗರಿಬೆಳೆ ಕೈಕೊಡಲು ಕಳಪೆ ಬೀಜ, ಅಕಾಲಿಕ ಮಳೆ ಕಾರಣವಾಗಿದೆ. ನಷ್ಟದಲ್ಲಿರುವ ರೈತರಿಗೆ ಸರ್ಕಾರ ಪರಿಹಾರ ನೀಡಲು ಮುಂದಾದರೆ, ಬೆಳೆ ಸಿಗದೆ ಕುಗ್ಗಿಹೋಗಿರುವ ರೈತರು ಕೊಂಚ ಸುಧಾರಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎನ್ನುವುದು ಕುತೂಹಲವಾಗಿದೆ.ಇದನ್ನೂ ಓದಿ: ಉಗ್ರರು ಕೈವಶ ಮಾಡಿದ ಬೆನ್ನಲ್ಲೇ ಸಿರಿಯಾದ ಮೇಲೆ ಅಮೆರಿಕ ವಾಯು ದಾಳಿ