ಬೀದರ್: ಜಿಲ್ಲೆಯಲ್ಲಿ ನೀರುಪಾಲಾದ ಇಬ್ಬರಿಗೆ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರವನ್ನು ವಿತರಿಸಲಾಗಿದೆ.
ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಮೃತರ ಪತ್ನಿಯರಿಗೆ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಅವರು 5 ಲಕ್ಷದ ಚೆಕ್ ನೀಡಿದರು. ಇದನ್ನೂ ಓದಿ: ಅಧಿಕಾರಿಗಳ ವರ್ಗಾವಣೆ ವಿಚಾರ: ಸಿಎಂ-ಸಚಿವರ ನಡುವೆ ಮೌನ ಸಂಘರ್ಷ
Advertisement
Advertisement
ಸೋಮವಾರ 1 ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಗೆ ಕಾರಂಜಾ ನದಿಗೆ ಹೆಚ್ಚಿನ ನೀರು ಹರಿದು ಬಂದು ಇಬ್ಬರು ಕೊಚ್ಚಿ ಹೋಗಿದ್ರು. ಸೇತುವೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗಿ ಹುಮ್ನಾಬಾದ್ ತಾಲೂಕಿನ ಜಲಸಂಗಿ ಗ್ರಾಮದ ತುಕಾರಾಮ ಲಕ್ಷ್ಮಣ (40), ಘಾಟಬೋರಾಳದ ತಿಪ್ಪಣ್ಣ ವಿಶ್ವನಾಥ್ (33) ನೀರುಪಾಲಾಗಿದ್ರು. ಭಾಲ್ಕಿ ತಾಲೂಕಿನ ಮರೂರು ಗ್ರಾಮದ ಕಾರಂಜಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿರು ಸೇತುವೆ ಮೇಲೆ ದ್ವಿಚಕ್ರದ ಮೇಲೆ ತೆರಳುತ್ತಿದ್ದ ಇಬ್ಬರು ನೀರುಪಾಲಾಗಿದ್ರು.
Advertisement
ಈ ಕುರಿತು ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ (Bhalki Rural Police Station) ಯಲ್ಲಿ ಪ್ರಕರಣ ದಾಖಲಾಗಿತ್ತು.
Advertisement