ಟೆಹ್ರಾನ್: ಪತನಗೊಂಡ ಫೈಟರ್ ಜೆಟ್ ಪೈಲಟ್ ರಕ್ಷಿಸಲು ಅಮೆರಿಕ (US) ನಡೆಸಿದ ಕಾರ್ಯಾಚರಣೆಯ ಸಮಯದಲ್ಲಿ ಐವರು ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆಯಲ್ಲಿ ಸಾರಿಗೆ ವಿಮಾನವೂ ನಾಶವಾಗಿದೆ ಎಂದು ಇರಾನಿನ (Iran) ಮಾಧ್ಯಮ ವರದಿ ಮಾಡಿದೆ.
ಇಸ್ಫಹಾನ್‌ನ ದಕ್ಷಿಣದಲ್ಲಿ ಪತನಗೊಂಡ ವಿಮಾನಗಳಲ್ಲಿ ಸಿ -130 ಮಿಲಿಟರಿ ಸಾರಿಗೆ ವಿಮಾನ ಮತ್ತು ಎರಡು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳು ಸೇರಿವೆ. ಇರಾನಿನ ಸೇನೆಯು ಇಸ್ರೇಲಿ ಡ್ರೋನ್ ಅನ್ನು ಸಹ ಹೊಡೆದುರುಳಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: Explained| ಇರಾನ್ ಅಮೆರಿಕದ F-15E Strike Eagle ವಿಮಾನವನ್ನು ಹೊಡೆದು ಹಾಕಿದ್ದು ಹೇಗೆ? ರಷ್ಯಾದ ಪಾತ್ರ ಏನು?
ಇರಾನ್‌ನಲ್ಲಿ ತಾತ್ಕಾಲಿಕ ಮುಂಚೂಣಿ ಕಾರ್ಯಾಚರಣೆ ನೆಲೆಯ ಸ್ಥಳದಲ್ಲಿ ಪತನಗೊಂಡ ಸಿ -130 ವಿಮಾನದ ಸುಟ್ಟುಹೋದ ಅವಶೇಷಗಳ ಫೋಟೊಗಳು ವೈರಲ್ ಆಗಿವೆ.
ಇರಾನ್ F-15E ಯುದ್ಧ ವಿಮಾನವನ್ನು ಹೊಡೆದುರುಳಿಸಿದ ನಂತರ ಎರಡು ದಿನಗಳ ಕಾಲ ಕಾಣೆಯಾಗಿದ್ದ ಅಮೆರಿಕದ ಯುದ್ಧ ವಿಮಾನ ಪೈಲಟ್ ಅನ್ನು ಅಮೆರಿಕ ರಕ್ಷಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಷಿಯಲ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಟ್ರಂಪ್ ನಿರ್ದೇಶನದ ಮೇರೆಗೆ ಪೈಲಟ್ ಅನ್ನು ರಕ್ಷಿಸಲು ಅಮೆರಿಕ ಸೇನೆಯು ವಿಶ್ವದ ಅತ್ಯಂತ ಮಾರಕ ಆಯುಧಗಳಿಂದ ಶಸ್ತ್ರಸಜ್ಜಿತವಾದ ಡಜನ್ಗಟ್ಟಲೆ ವಿಮಾನಗಳನ್ನು ಕಳುಹಿಸಿತು. ನೂರಾರು ವಿಶೇಷ ಕಾರ್ಯಾಚರಣೆ ಪಡೆಗಳು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದವು. ಅವರು ವಾಯುಪಡೆಯ ಪೈಲಟ್ ರಕ್ಷಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಕಾಣೆಯಾಗಿದ್ದ US ವಾಯುಪಡೆಯ ಮತ್ತೋರ್ವ ಪೈಲಟ್ ರಕ್ಷಣೆ – ಹೇಗಿತ್ತು ಥ್ರಿಲ್ಲಿಂಗ್ ಕಾರ್ಯಾಚರಣೆ?

